ಶಾರುಖ್‌ಗೆ ರುಚಿಯಾದ ಅಡುಗೆ ಕಳುಹಿಸಿದ ದಳಪತಿ; ಚಿಕನ್ 65 ರೆಸಿಪಿ ಕಲಿಬೇಕೆಂದ ಕಿಂಗ್ ಖಾನ್

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ತಮಿಲು ನಟ ದಳಪತಿ ವಿಜಯ್ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.

shah rukh khan says Thalapathy vijay for me delicious food sgk

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸದ್ಯ ತಮಿಳಿನ ಖ್ಯತ ನಿರ್ದೇಶಕ ಅಟ್ಲೀ ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಜವಾನ್ ಎಂದು ಟೈಟಲ್ ಇಡಲಾಗಿದ್ದು ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಕಳೆದ 30 ದಿನಗಳಿಂದ ಚೆನ್ನೈನಲ್ಲಿ ಶೂಟಿಂಗ್ ಮಾಡುತ್ತಿದ್ದ ಸಿನಿಮಾತಂಡ ಸದ್ಯ ಚೆನ್ನೈ ಭಾಗದ ಚಿತ್ರೀಕರಣ ಮುಗಿಸಿದೆ. ಈ ಬಗ್ಗೆ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇಡೀ ತಂಡಕ್ಕೆ ಹಾಗೂ ವಿಶೇಷವಾಗಿ ದಳಪತಿ ವಿಜಯ್‌ಗೆ ಕಿಂಗ್ ಖಾನ್ ಶಾರುಖ್ ಖಾನ್ ಧನ್ಯವಾದ ತಿಳಿಸಿದ್ದಾರೆ. 

ಅಲ್ಲದೇ ಶಾರುಖ್ ಖಾನ್ ಅವರಿಗೆ ನಟ ವಿಜಯ್ ಅವರು ರುಚಿಯಾದ ಅಡುಗೆ ಮಾಡಿ ಕಳುಹಿಸಿದ್ದ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. ತನ್ನದೇ ನಾಡಿನಲ್ಲಿ ಶೂಟಿಂಗ್ ಮಾಡುತ್ತಿದ್ದ ಶಾರುಖ್ ಖಾನ್ ಅವರಿಗೆ ದಳಪತಿ ವಿಜಯ್ ವಿಶೇಷವಾದ ಅಡುಗೆ ಮಾಡಿ ಕಳುಹಿಸಿದ್ದಾರೆ. ಈ ಬಗ್ಗೆ ಕಿಂಗ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 30 ದಿನಗಳ ಚೆನ್ನೈ ಶೂಟಿಂಗ್ ಅನುಭವ ಅದ್ಭುತವಾಗಿತ್ತು ಎಂದು ಶಾರುಖ್ ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಶಾರುಖ್ ಖಾನ್, '30 ದಿನಗಳು ಅದ್ಭುತವಾಗಿತ್ತು. ನಮ್ಮ ಸೆಟ್‌ಗೆ ತಲೈವರ್ ಆಶೀರ್ವಾದವಿತ್ತು. ನಯನತಾರಾ ಮತ್ತು ಅನಿರುದ್ಧ ಜೊತೆ ಸಿನಿಮಾ ನೋಡಿದೆ. ವಿಜಯ್ ಸೇತುಪತಿ ಜೊತೆ ಸಾಕಷ್ಟು ಚರ್ಚೆ ಮಾಡಿದೆ. ದಳಪತಿ ವಿಜಯ್ ಕಲುಹಿಸಿದ ರುಚಿಯಾದ ಅಡುಗೆ ಸವಿದೆ. ಅದ್ಭತವಾದ ಆತಿಥ್ಯಕ್ಕೆ ಅಟ್ಲೀ ಕುಮಾರ್ ಮತ್ತು ಪ್ರಿಯಾ ದಂಪತಿಗೆ ಧನ್ಯವಾದಗಳು. ನಾನು ಕೂಡ ಚಿಕನ್ 65 ಕಲಿಯಬೇಕಿದೆ' ಎಂದು ಟ್ವೀಟ್ ಮಾಡಿದ್ದಾರೆ.     

ತನ್ನ ಶರ್ಟ್ ಜೊತೆ ಮಾತಾಡ್ತ ಕುಳಿತ ಶಾರುಖ್ ಖಾನ್; ಪತಿಯ ಸ್ಥಿತಿ ನೋಡಿ ಗೌರಿ ಖಾನ್ ಶಾಕ್

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಅಟ್ಲೀ ಕುಮಾರ್, 'ನೀವು ಇಲ್ಲಿಗೆ ಬಂದಿದ್ದು ತುಂಬಾ ಸಂತೋಷವಾಗಿದೆ. ತುಂಬಾ ಧನ್ಯವಾದಗಳು ಸರ್. ಇದು ನನ್ನ ವೃತ್ತಿಜೀವನದ ಸ್ಮರಣೀಯ ಸಮಯ. ಚೆನ್ನೈನಲ್ಲಿ ಶೂಟಿಂಗ್ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು. ಸಾವಿರಾರು ಕುಟುಂಬಕ್ಕೆ ಅನುಕಾಲವಾಯ್ತು. ಕಿಂಗ್ ಯಾವಾಗಲೂ ಕಿಂಗ್. ಲವ್ ಯೂ ಸರ್' ಎಂದು ಶಾರುಖ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಂದೇ ಫ್ರೇಮ್‌ನಲ್ಲಿ ಶಾರುಖ್-ದಳಪತಿ; ನಿರ್ದೇಶಕ ಅಟ್ಲೀ ಜೊತೆ ಪೋಸ್ ನೀಡಿದ ಸ್ಟಾರ್ಸ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಇಬ್ಬರ ಟ್ವೀಟರ್ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅವರಿಗೆ ವಿಶೇಷ ಅಡುಗೆ ಮಾಡಿ ಕಳುಹಿಸಿದ್ದಕ್ಕೆ ವಿಜಯ್ ಅಭಿಮಾನಿಗಳು ಸಹ ಖುಷ್ ಆಗಿದ್ದಾರೆ. 

ಅಂದಹಾಗೆ ಶಾರುಖ್ ಖಾನ್ ಮೊದಲ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಹೆಚ್ಚಾಗಿ ಸೌತ್ ಸ್ಟಾರ್ ಗಳ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಇತ್ತೀಚಿಗಷ್ಟೆ ಅಟ್ಲೀ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಶಾರುಖ್ ಭಾಗಿಯಾಗಿದ್ದರು. ವಿಶೇಷ ಎಂದರೆ ದಳಪತಿ ವಿಜಯ್ ಕೂಡ ಕಾಣಿಸಿಕೊಂಡಿದ್ದರು. ವಿಜಯ್, ಶಾರುಖ್ ಮತ್ತು ಆಟ್ಲೀ ಮೂವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಶಾರುಖ್ ಮತ್ತು ಅಟ್ಲೀ ಅವರ ಜವಾನ್ ಸಿನಿಮಾದಲ್ಲಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಒಂದು ಶಾರುಖ್ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಡಬಲ್ ಧಮಾಕ ಆಗಲಿದೆ.  
 
  

Latest Videos
Follow Us:
Download App:
  • android
  • ios