Asianet Suvarna News Asianet Suvarna News

ತನ್ನ ಶರ್ಟ್ ಜೊತೆ ಮಾತಾಡ್ತ ಕುಳಿತ ಶಾರುಖ್ ಖಾನ್; ಪತಿಯ ಸ್ಥಿತಿ ನೋಡಿ ಗೌರಿ ಖಾನ್ ಶಾಕ್

ಶಾರುಖ್ ಖಾನ್ ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಶಾರುಖ್ ಅವರ ಈ ಲುಕ್ ಪಠಾಣ್ ಸಿನಿಮಾದ್ದಾಗಿದೆ. ಈ ಹಿಂದೆಯೂ ಶಾರುಖ್ ಬೇರ್ ಬಾಡಿ ಫೋಟೋ ಶೇರ್ ಮಾಡಿದ್ದರು. ಸದ್ಯ ಶಾರುಖ್ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Gauri Khan Epic Reaction on Shah Rukh Khans latest shirtless photo sgk
Author
First Published Sep 26, 2022, 1:41 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಹಾಗಾಗಿ ಶಾರುಖ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹಹುರಿಗೊಳಿಸಿದ್ದಾರೆ. ಶಾರುಖ್ ಖಾನ್  ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಶಾರುಖ್ ಅವರ ಈ ಲುಕ್ ಪಠಾಣ್ ಸಿನಿಮಾದ್ದಾಗಿದೆ. ಈ ಹಿಂದೆಯೂ ಶಾರುಖ್ ಬೇರ್ ಬಾಡಿ ಫೋಟೋ ಶೇರ್ ಮಾಡಿದ್ದರು. ಸದ್ಯ ಶಾರುಖ್ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಶಾರುಖ್ ಫೋಟೋ ನೋಡಿ ಪತ್ನಿ ಗೌರಿ ಖಾನ್ ಕೂಡ ಶಾಕ್ ಆಗಿದ್ದಾರೆ. ಶಾರುಖ್ ಶೇರ್ ಮಾಡಿರುವ ಫೋಟೋದಲ್ಲಿ ತನ್ನದೇ ಶರ್ಟ್ ಜೊತೆ ಮಾತನಾಡಿಕೊಂಡಿದ್ದಾರೆ. 'ನಾನು ಮತ್ತು ನನ್ನ ಶರ್ಟ್ ಇವತ್ತು' ಎಂದು ಕ್ಯಾಪ್ಷನ್ ನೀಡಿ ಶರ್ಟ್ ಜೊತೆ ಮಾತನಾಡಿದ್ದಾರೆ. 

ಶರ್ಟ್ ಲೇಸ್ ಆಗಿ ಸೋಫಾ ಮೇಲೆ ಕುಳಿತಿರುವ ಶಾರುಖ್ ತನ್ನದೆ ಶೇರ್ಟ್ ಜೊತೆ , 'ನೀನು ಇದ್ದಿದ್ದರೆ ಹೇಗಿರುತ್ತಿತ್ತು. ಈ ವಿಷಯದಲ್ಲಿ ನಿನಗೆ ಅಚ್ಚರಿ ಆಗುತ್ತಿತ್ತು. ನೀನು ಎಷ್ಟೊಂದು ನಗುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ. ಪತಿಯ ಫೋಟೋಗೆ ಗೌರಿ ಖಾನ್ 'ಓ ಗಾಡ್..' ಎಂದು ಶಾಕ್ ಆಗಿದ್ದಾರೆ. ಪತಿಯ ಹಾಟ್ ಫೋಟೋಗೆ ಕಾಮೆಂಟ್ ಮಾಡಿರುವ ಗೌರಿ ಖಾನ್, 'ದೇವ್ರೆ, ಈಗ ಅವರು ತನ್ನ ಶರ್ಟ್ ಜೊತೆಯೂ ಮಾತಾಡಲು ಪ್ರಾರಂಭಿಸಿದ್ರಾ' ಎಂದು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಶಾರುಖ್ ಫೋಟೋಗೆ ಬಾಲಿವುಡ್ ನ ಅನೇಕ ಸ್ಟಾರ್ಸ್ ಕೂಡ ಕಾಮೆಂಟ್ ಮಾಡಿದ್ದಾರೆ. ರಿಚಾ ಚಡ್ಡಾ, ಟೈಗರ್ ಶ್ರಾಫ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. 

ಎಷ್ಟು ಹುಡುಗಿಯರ ಜೊತೆಯಾದ್ರೂ ಡೇಟಿಂಗ್ ಮಾಡು, ಆದರೆ...; ಮಗನಿಗೆ ಶಾರುಖ್ ಪತ್ನಿಯ ಸಲಹೆ

ಅಂದಹಾಗೆ ಶಾರುಖ್ ಖಾನ್, ಸಿದ್ಧಾರ್ಥ್ ಆನಂದ್ ಅವರ ಪಠಾಣ್ ಸಿನಿಮಾಗಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹಹುರಿಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಜಾನ್ ಅಬ್ರಹಾಂ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯಶ್ ರಾಜ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಹಿಂದ ಜೊತೆಗೆ ಪಠಾಣ್ ತೆಲುಗು ಮತ್ತು ತಮಿಳಿನಲ್ಲು ರಿಲೀಸ್ ಆಗ್ತಿದೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ 2023, ಜನವರಿ 25ಕ್ಕೆ ರಿಲೀಸ್ ಆಗುತ್ತಿದೆ.

ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ

ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಖಾನ್, ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯಗಲ್ಲಿ ಬರ್ತಿರುವ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾ ಜೊತೆಗೆ ರಾಜ್ ಕುಮಾರ್ ಹಿರಾನಿ ಅವರ ಡಂಕಿ ಸಿನಿಮಾ ಕೂಡ ಶಾರುಖ್ ಕೈಯಲ್ಲಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ.   

Follow Us:
Download App:
  • android
  • ios