ಒಂದೇ ಫ್ರೇಮ್‌ನಲ್ಲಿ ಶಾರುಖ್-ದಳಪತಿ; ನಿರ್ದೇಶಕ ಅಟ್ಲೀ ಜೊತೆ ಪೋಸ್ ನೀಡಿದ ಸ್ಟಾರ್ಸ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಅಟ್ಲೀ ಹುಟ್ಟುಹಬ್ಬದ ಸಂಭ್ರಮದಲ್ಲಿ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ವಿಶೇಷ ಎಂದರೆ ಭಾರತೀಯ ಸಿನಿಮಾರಂಗದ ಇಬ್ಬರೂ ಸ್ಟಾರ್ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿದ್ದರು.
ಸೌತ್ ವರ್ಸಸ್ ಬಾಲಿವುಡ್ ಎನ್ನುವ ಚರ್ತೆ ನಡೆಯುತ್ತಿಯುತ್ತಿರುವ ಈ ಸಮಯದಲ್ಲಿ ಅನೇಕ ಬಿ ಟೌನ್ ಸ್ಟಾರ್ ದಕ್ಷಿಣ ಭಾರತದ ಕಡೆ ಮುಖಮಾಡುತ್ತಿದ್ದಾರೆ. ಸೌತ್ ನಿರ್ದೇಶಕರ ಜೊತೆ, ಕಲಾವಿದರ ಜೊತೆ ನಟಿಸಲು ಒಲವು ತೋರುತ್ತಿದ್ದಾರೆ. ಬಾಲಿವುಡ್ ಮಾತ್ರ ಸೀಮಿತ ಎನ್ನುವಂತಿದ್ದ ಖಾನ್‌ಗಳೀಗ ಹೆಚ್ಚಾಗಿ ಸೌತ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಬಿ ಟೌನ್ ಸ್ಟಾರ್ ಶಾರುಖ್ ಖಾನ್ ದಕ್ಷಿಣ ಭಾರತದ ಖ್ಯಾತ ನಿರ್ದೇಶಕನ ಹಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಅಟ್ಲೀ ಹುಟ್ಟುಹಬ್ಬದ ಸಂಭ್ರಮದಲ್ಲಿ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ವಿಶೇಷ ಎಂದರೆ ಭಾರತೀಯ ಸಿನಿಮಾರಂಗದ ಇಬ್ಬರೂ ಸ್ಟಾರ್ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದು ಮತ್ಯಾರು ಅಲ್ಲ ಶಾರುಖ್ ಖಾನ್ ಮತ್ತು ದಳಪತಿ ವಿಜಯ್. ಇಬ್ಬರು ಒಟ್ಟಿಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರು ಸ್ಟಾರ್ ಕಲಾವಿದರನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ದಳಪತಿ ವಿಜಯ್ ಹಾಗೆಲ್ಲ ಸಮಾರಂಭ, ಅವಾರ್ಡ್ ಕಾರ್ಯಕ್ರಮ ಅಂತ ಕಾಣಿಸಿಕೊಳ್ಳುವುದು ತೀರ ಅಪರೂಪ. ಆದರೆ ಅಟ್ಲೀ ಕುಮಾರ್ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಇದೇ ಸಮಾರಂಭದಲ್ಲಿ ಶಾರುಖ್ ಖಾನ್ ಕೂಡ ಎಂಟ್ರಿ ಕೊಟ್ಟಿದ್ದು ಮತ್ತಷ್ಟು ವಿಶೇಷವಾಗಿತ್ತು.
ಅಂದಹಾಗೆ ಶಾರುಖ್ ಖಾನ್ ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯದಲ್ಲಿ ಬರ್ತಿರುವ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಾರುಖ್ ಸೌತ್ ನಿರ್ದೇಶಕರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಹೆಚ್ಚಾಗಿ ಕಿಂಗ್ ಖಾನ್ ದಕ್ಷಿಣ ಭಾರತೀಯರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಅಭಿಮಾನಿಗಳಲ್ಲಿ ವಿಜಯ್ ಕೂಡ ಶಾರುಖ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.
ಇತ್ತೀಚಿಗಷ್ಟೆ ನಯನತಾರಾ ಮತ್ತ ವಿಘ್ನೇಶ್ ಶಿವನ್ ಮದುವೆಯಲ್ಲಿ ಭಾಗಿಯಾಗಿದ್ದರು. ಇದೀಗ ಮತ್ತೆ ಅಟ್ಲಿ ಹುಟ್ಟುಹಬ್ಬದ ನಿಮಿತ್ತ ಸೌತ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ.
ಅಟ್ಲೀ ಕುಮಾರ್ ಶಾರುಖ್ ಮತ್ತು ವಿಜಯ್ ಮಧ್ಯೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋಗೆ ಅಭಿಮಾನಿಗಳು ನಾನಾರೀತಿ ಕಾಮೆಂಟ್ ಮಾಡುತ್ತಿದ್ದರೆ. ಬಾಲಿವುಡ್ ಕಿಂಗ್ ಹಾಗು ಕಾಲಿವುಡ್ ಕಿಂಗ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಫೋಟೋ ಶೇರ್ ಮಾಡಿ ಅಟ್ಲಿ, 'ನನ್ನ ಹುಟ್ಟುಹಬ್ಬಕ್ಕೆ ಇದಕ್ಕಿಂತ್ ಇನ್ನೇನು ಕೇಳಲಿ. ಅತ್ಯುತ್ತಮವಾದ ಹುಟ್ಟುಹಬ್ಬ ನನ್ನ ಆಧಾರಸ್ತಂಭದ ಜೊತೆ. ಶಾರುಖ್ ಖಾನ್ ಮತ್ತು ವಿಜಯ್ ಸರ್' ಎಂದು ಬರೆದುಕೊಂಡಿದ್ದಾರೆ.