ಮೊಬೈಲ್ ನಂಬರ್ ಕೊಟ್ಟು, ಕಾಲ್ ಮಾಡೋ ಟೈಮೂ ಹೇಳಿದ ಶಾರುಖ್! ಫ್ಯಾನ್ಸ್ ಫುಲ್ ಖುಷ್
ಜವಾನ್ ಚಿತ್ರದ ಖುಷಿಯಲ್ಲಿರುವ ನಟ ಶಾರುಖ್ ಖಾನ್ ಅವರು ಈಗ ತಮ್ಮ ಮೊಬೈಲ್ ನಂಬರ್ ಅನ್ನು ಶೇರ್ ಮಾಡಿದ್ದಾರೆ.

ಪಠಾಣ್ ಚಿತ್ರದ ಗುಂಗಿನಿಂದ ಹೊರಬಂದು ಜವಾನ್ ಚಿತ್ರದ ಭರ್ಜರಿ ಯಶಸ್ಸಿನತ್ತ ನಟ ಶಾರುಖ್ ಖಾನ್ ಮುನ್ನುಗ್ಗುತ್ತಿದ್ದಾರೆ. ಬ್ಲಾಕ್ಬಸ್ಟರ್ ಎಂದು ಸಾಬೀತಾಗಿರೋ ಪಠಾಣ್ (Pathaan) ಚಿತ್ರಕ್ಕೇ ಪೈಪೋಟಿ ಒಡ್ಡುವಂತೆ ಜವಾನ್ ಚಿತ್ರ ಹುಟ್ಟಿಸಿರೋ ನಿರೀಕ್ಷೆ ಸುಳ್ಳಾಗಲಿಲ್ಲ. ಈ ಚಿತ್ರವನ್ನು ಭಾರಿ ಯಶಸ್ವಿಗೊಳಿಸಲು ವಿದೇಶಗಳಲ್ಲಿಯೂ ಬಹಳ ತಯಾರಿ ನಡೆಸಲಾಗಿತ್ತು, ವಿಭಿನ್ನ ರೀತಿಯಲ್ಲಿ ಪ್ರಚಾರವನ್ನೂ ಮಾಡಲಾಗಿತ್ತು. ಚಿತ್ರದ ಪ್ರಮೋಷನ್ಗೇ ಕೋಟಿ ಕೋಟಿ ಹಣ ಸುರಿಯಲಾಗಿತ್ತು. ಎಂಟು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿರುವ ಶಾರುಖ್ ಅವರನ್ನು ನೋಡಲು ಜನ ಬಹಳ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ನಿನ್ನೆ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿದೆ. ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿರೋ ಜವಾನ್ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದಿದ್ದ ಈ ಚಿತ್ರ ಈಗ ಮತ್ತೊಂದು ದಾಖಲೆ ಸೃಷ್ಟಿಮಾಡಿದೆ. ಮೊದಲ ದಿನ ಭರ್ಜರಿ 65 ಕೋಟಿ ಕಲೆಕ್ಷನ್ ಮಾಡಿದ್ದು, ಆ ಮೂಲಕ ಇಲ್ಲಿಯವರೆಗೆ ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತ್ಯಧಿಕ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಜವಾನ್ ಪಾತ್ರವಾಗಿದೆ. ಜವಾನ್ ಚಿತ್ರ ಇಲ್ಲಿಯವರೆಗೆ ಹಿಂದಿಯಲ್ಲಿ 65.5 ಕೋಟಿ, ತಮಿಳಿನಲ್ಲಿ 5.3 ಕೋಟಿ ಮತ್ತು ತೆಲುಗಿನಲ್ಲಿ 3.7 ಕೋಟಿ ರೂ. ಗಳಿಸಿದ್ದು, ಈ ಚಿತ್ರದ ಒಟ್ಟು ಕಲೆಕ್ಷನ್ ಈಗ ಭಾರತದಲ್ಲಿ 127.50 ಕೋಟಿ ರೂ ಆಗಿದೆ.
ಇದರ ನಡುವೆಯೇ ಶಾರುಖ್ ಟ್ವಿಟರ್ನಲ್ಲಿ ಜನರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ. ಈ ನಡುವೆಯೇ, ಫ್ಯಾನ್ಸ್ ಪದೇ ಪದೇ ತಮ್ಮ ಫೋನ್ ನಂಬರ್ ಕೇಳುತ್ತಿರುವ ಬಗ್ಗೆಯೂ ಗಮನಿಸಿರೋ ಶಾರುಖ್ ಅವರು, ತಮ್ಮ ಮೊಬೈಲ್ ನಂಬರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ವರ್ಷಗಳ ಹಿಂದೆ, ಸಂದರ್ಶನವೊಂದರಲ್ಲಿ, ಶಾರುಖ್ ಗೂಗಲ್ನಲ್ಲಿ ಹೆಚ್ಚು ಹುಡುಕಿದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇದೀಗ ಶಾರುಖ್ ಖಾನ್ ತಮ್ಮ ಮೊಬೈಲ್ ನಂಬರ್ ಕೂಡ ನೀಡಿದ್ದಾರೆ. ಮಾತ್ರವಲ್ಲದೇ, 'ಮಧ್ಯರಾತ್ರಿಯ ನಂತರ ಯಾವಾಗ ಬೇಕಾದರೂ ಕರೆ ಮಾಡಿ. ನಾನು ಪಿಕ್ ಮಾಡುತ್ತೇನೆ. ಅಥವಾ, ಒಂದು ಮೆಸೇಜ್ ಕಳುಹಿಸಿ ಮತ್ತು ನಾನು ನಿಮಗೆ ಎಮೋಜಿಯೊಂದಿಗೆ ಉತ್ತರಿಸುತ್ತೇನೆ ಎಂದು ಶಾರುಖ್ ಬರೆದಿದ್ದಾರೆ.
ಶಾರುಖ್ಗೆ ಚಾಟಿ ಬೀಸಿದ್ದ ಎನ್ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್ ರಿಲೀಸ್ ಬೆನ್ನಲ್ಲೇ ಕ್ಲೀನ್ ಚಿಟ್
ಇದರಿಂದ ಶಾರುಖ್ ಫ್ಯಾನ್ಸ್ ಫುಲ್ ಖುಷಿಯಿಂದ ನಲಿದಾಡುತ್ತಿದ್ದಾರೆ. ಶಾರುಖ್ ಕೊಟ್ಟಿರೋ ಮೊಬೈಲ್ ನಂಬರ್ ಅನ್ನು ಟ್ರೂ ಕಾಲರ್ನಲ್ಲಿಯೂ ಪರಿಶೀಲಿಸಿದ್ದಾರೆ. ಕುತೂಹಲದ ಅಂಶವೇನೆಂದ್ರೆ ಟ್ರೂ ಕಾಲರ್ನಲ್ಲಿಯೇ ಶಾರುಖ್ ಖಾನ್ ಎಂದೇ ಹೆಸರು ತೋರಿಸುತ್ತಿದೆ. ಆದರೆ ಅದು ರೆಡ್ ಆಗಿ ತೋರಿಸಿ ಕೆಳಗಡೆ ಸ್ಪ್ಯಾಮ್ ಇರಬಹುದು ಎಂಬ ಎಚ್ಚರಿಕೆ ಕೊಡುತ್ತಿದೆ. ಅಷ್ಟಕ್ಕೂ ಶಾರುಖ್ ಅವರು ಶೇರ್ ಮಾಡಿಕೊಂಡಿರೋ ಫೋನ್ ನಂಬರ್ '5559960321' ಆಗಿದೆ. ಈ ನಂಬರ್ನಲ್ಲಿಯೇ ಶಾರುಖ್ ಅವರ ಮೊಬೈಲ್ ನಂಬರ್ ಇರಬಹುದು ಎಂದುಕೊಂಡಿರೋ ಅಭಿಮಾನಿಗಳು ಉಲ್ಟಾ ಪಲ್ಟಾ ಮಾಡಿ ಇದೇ ನಿಜವಾದ ನಂಬರ್ ಇರಬಹುದು ಎಂದು ಊಹಿಸುತ್ತಿದ್ದಾರೆ. ಟ್ರೂ ಕಾಲರ್ನಲ್ಲಿ ಶಾರುಖ್ ಖಾನ್ ಹೆಸರು ನೋಡಿ ಹಲವಾರು ಮಂದಿ ಈ ನಂಬರ್ಗೆ ಟ್ರೈ ಮಾಡಿದ್ದೂ ಇದೆ.
ಜವಾನ್ ಖುಷಿಯಲ್ಲಿದ್ದರೂ ಈ ಚಿತ್ರಕ್ಕೆ ಪೈರಸಿ ಕಾಟ ಜವಾನ್ ತಪ್ಪಲಿಲ್ಲ. ಉಚಿತ ಡೌನ್‌ಲೋಡ್ (Free Download) ಮತ್ತು ವೀಕ್ಷಣೆಗಾಗಿ ಪೂರ್ಣ ಎಚ್‌ಡಿ ಆವೃತ್ತಿಯಲ್ಲಿ ಜವಾನ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿಬಿಟ್ಟಿದೆ. ತಮಿಳುರಾಕರ್ಸ್, ಟೆಲಿಗ್ರಾಮ್, ಫಿಲ್ಮಿಜಿಲ್ಲಾ ಮತ್ತು ಇತರ ಪೈರಸಿ ಸೈಟ್‌ಗಳಲ್ಲಿ ಜವಾನ್ ಸೋರಿಕೆಯಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಮೇಲೆ ಇದು ಪರಿಣಾಮ ಬೀರಬಹುದು ಎಂದು ಊಹಿಸಲಾಗುತ್ತಿದೆ. ಚಲನಚಿತ್ರವು ಸೋರಿಕೆಯಾದ ಆವೃತ್ತಿ ಮತ್ತು ಇದು ಮುಂದಿನ ದಿನಗಳಲ್ಲಿ ಚಿತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ಬಿಡುಗಡೆ ದಿನವೇ ಆನ್‌ಲೈನ್‌ನಲ್ಲಿ ಜವಾನ್ ಚಿತ್ರ ಸೋರಿಕೆ: ಡೌನ್‌ಲೋಡ್ ಮಾಹಿತಿಯೂ ವೈರಲ್!