ಯಶ್, ಪ್ಯಾನ್-ಇಂಡಿಯಾ ತಾರೆಯಾಗಿ ಬೆಳೆದಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಅವರಿಂದಲೂ ಮೆಚ್ಚುಗೆ ಪಡೆದಿದ್ದಾರೆ. 'ಕೆಜಿಎಫ್ ಚಾಪ್ಟರ್ 1' ಚಿತ್ರ ಶಾರುಖ್ ಖಾನ್ ಅವರ 'ಝೀರೊ' ಚಿತ್ರವನ್ನು ಬಾಕ್ಸ್ ಆಫೀಸ್‌ನಲ್ಲಿ ಮೀರಿಸಿತ್ತು. ದುಬೈ ಕಾರ್ಯಕ್ರಮವೊಂದರಲ್ಲಿ ಯಶ್ ಬಗ್ಗೆ ಶಾರುಖ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್, ಶಾರುಖ್ ಖಾನ್ ಅವರ ಮನೆಗೂ ಭೇಟಿ ನೀಡಿದ್ದರು ಎನ್ನಲಾಗಿದೆ.

ನಟ ಯಶ್​ ಈಗ ಕೇವಲ ಕರ್ನಾಟಕದ ನಟನಾಗಿ ಉಳಿಯದೇ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದಲೇ ಬಾಲಿವುಡ್​ನಿಂದ ಹಿಡಿದು ಎಲ್ಲಾ ಕಡೆಗಳ ಸ್ಟಾರ್​ ನಟರು ಯಶ್​ ಅವರ ಬಗ್ಗೆ ಹೊಗಳಿಕೆಯ ಮಾತನಾಡುವುದು ಸಹಜವೇ. ಅದರಲ್ಲಿಯೂ ಬಾಲಿವುಡ್​ ಬಾದಶಾಹ ಎಂದೇ ಖ್ಯಾತಿ ಪಡೆದಿರುವ ಶಾರುಖ್​ ಖಾನ್​ ಅವರನ್ನೂ ಒಂದು ಹಂತದಲ್ಲಿ ಮಣಿಸಿದವರು ಯಶ್​. ಅದು 'ಕೆಜಿಎಫ್ ಚಾಪ್ಟರ್ 1' ಬಿಡುಗಡೆ ಸಂದರ್ಭ. ಆ ಸಮಯದಲ್ಲಿ ಶಾರುಖ್​ ಖಾನ್​ ಅವರ 'ಝೀರೊ' ಚಿತ್ರ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್​ ಚಿತ್ರದ ಮುಂದೆ ಶಾರುಖ್​ ಚಿತ್ರ ಮಂಡಿಯೂರಿತು. ಮೊದಲ ಯತ್ನದಲ್ಲಿಯೇ ಯಶ್​ ಬಾಕ್ಸಾಫೀಸ್‌ನಲ್ಲಿ ಬಾಲಿವುಡ್​ ಕಿಂಗ್​ರನ್ನು ಸೋಲಿಸಿದ್ದರು. ಆಗಲೇ ಶಾರುಖ್​ ಅವರಿಗೆ ಯಶ್​ ಬಗ್ಗೆ ಹೊಟ್ಟೆಕಿಚ್ಚು ಎಂದೇ ಭಾವಿಸಿದ ದಿನಗಳೂ ಇವೆ. ಆದರೆ ಶಾರುಖ್​ ಅವರು, ಮುಂದಿನ ದಿನಗಳಲ್ಲಿ ಯಶ್​ ಬಗ್ಗೆ ಒಳ್ಳೆಯ ಮಾತುಗಳನ್ನಾಗಿ ಈ ಸುದ್ದಿಯನ್ನು ಅಲ್ಲಗಳೆದಿದ್ದರು.

 ಶಾರುಖ್​ ಅವರು, ದಕ್ಷಿಣದ ನಟರ ಜೊತೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಇದೀಗ ಅವರು ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಶ್ ಅವರ ಬಗ್ಗೆ ಪ್ರಸ್ತಾಪಿಸಿದ್ದು, ಅದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಭಾಗವಹಿಸಿದ್ದ ಶಾರುಖ್​, ದಕ್ಷಿಣದ ಕೆಲವು ನಟರ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಯಶ್​ ಅವರ ಹೆಸರನ್ನೂ ಪಡೆದುಕೊಂಡಿರುವ ವಿಡಿಯೋ ವೈರಲ್​ ಆಗುತ್ತಿದೆ. ಅಷ್ಟಕ್ಕೂ, ಯಶ್ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಮುಂಬೈನಲ್ಲಿ ಇದ್ದಾಗ, ಶಾರುಖ್ ಖಾನ್ ಮನೆಗೆ ಭೇಟಿ ಕೊಟ್ಟಿದ್ದರು ಎಂದು ಕೂಡ ಹೇಳಲಾಗಿತ್ತು. ಅದಕ್ಕೆ ತಕ್ಕಂತೆಯೇ, ಯಶ್ ಹಲವು ವೇದಿಕೆಗಳಲ್ಲಿ ಶಾರುಖ್ ಖಾನ್ ಬಗ್ಗೆ ಮಾತಾಡಿದ್ದರು. ಅವರು ಈ ಚಿತ್ರ ನೋಡಬೇಕು ಎಂದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಹಾ ಮಾರುತ್ತಿದ್ದ ಯಶ್​, ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ನಟನ ರೋಚಕ ಸ್ಟೋರಿ ಇದು...

ಅಂದಹಾಗೆ ಶಾರುಖ್​ ಅವರಿಗೆ 2023-24 ಸಕ್ಸಸ್​ ತಂದುಕೊಟ್ಟ ವರ್ಷ. ಪಠಾಣ್, ಜವಾನ್ ಬ್ಲಾಕ್​ಬಸ್ಟರ್​ ಎಂದು ಸಾಬೀತಾಯಿತು. ಇದೀಗ 2025ರಲ್ಲಿ ಮತ್ತೊಮ್ಮೆ ನಸೀಬು ಪರೀಕ್ಷೆ ಮಾಡಲು ಹೊರಟಿದ್ದಾರೆ ಕಿಂಗ್​ ಖಾನ್​. ಪಠಾಣ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ ಮುಂದಿನ ಸಿನಿಮಾಗೆ ಕೈಜೋಡಿಸಿದ್ದು, ಇದಕ್ಕೆ ಕಿಂಗ್ ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆಯೂ ದುಬೈನಲ್ಲಿ ಮಾತನಾಡಿರುವ ಅವರು, ನಾನು ಇಲ್ಲಿ ಶೂಟಿಂಗ್​ಗೆ ಬಂದವನಲ್ಲ. ಒಂದೆರಡು ತಿಂಗಳ ಬಳಿಕ ಮುಂಬೈನಲ್ಲಿ ಶೂಟಿಂಗ್​ ನಡೆಯಲಿದೆ. ಸದ್ಯ ಚಿತ್ರದ ಬಗ್ಗೆ ಏನೂ ಹೇಳಬಾರದು ಎಂದು ನಿರ್ದೇಶಕರ ಆದೇಶವಿರುವ ಕಾರಣ ಏನೂ ಹೇಳಲಾರೆ ಎಂದಿದ್ದಾರೆ.

ಶಾರುಖ್​ ಚಿತ್ರ ಫ್ಲಾಪ್​ ಆಗ್ಲಿ ಎಂದೇ ಬೇಡಿಕೊಳ್ತಿದ್ದೆ, ಏಕೆಂದ್ರೆ... ಮದ್ವೆಯ ಶಾಕಿಂಗ್​ ಸೀಕ್ರೇಟ್​ ತೆರೆದಿಟ್ಟ ಪತ್ನಿ ಗೌರಿ