Anupam Kher Viral Video : ಬಾಲಿವುಡ್ ನಟ ಅನುಪಮ್ ಖೇರ್ ಮಾಡಿದ Gen Z ರೀಲ್ಸ್ ಸೂಪರ್ ಹಿಟ್ ಆಗಿದೆ. ಅದ್ರ ಖುಷಿ ಹಂಚಿಕೊಂಡ ಅನುಪಮ್ ಖೇರ್, ಬಿಟಿಎಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಅನುಪಮ್ ಖೇ ಅವರ ಜೆನ್ ಜೀ ರೀಲ್ಸ್ ಕಮಾಲ್ ಮಾಡ್ತಿದೆ. ದಿನ ದಿನಕ್ಕೂ ರೀಲ್ಸ್ ನೋಡುಗರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ರೀಲ್ಸ್ ವೀವ್ಸ್ ಸಂಖ್ಯೆ 150 ಮಿಲಿಯನ್ ದಾಟಿದೆ.

ಅನುಪಮ್ ಖೇರ್ ಟೀಂ ರೀಲ್ಸ್ ವೈರಲ್

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು Gen Z ರೀಲ್ ಅನ್ನು ನಕಲು ಮಾಡುವ ಮೂಲಕ ಹೊಸ ರೀಲ್ ಮಾಡಿದ್ರು. ಇದು ನೋಡುಗರನ್ನು ಸೆಳೆದಿದೆ. ಈ ರೀಲ್ ಅನ್ನು ಮೂಲತಃ ಜಂತರ್ ಮಂತರ್ ಪ್ರತಿಭಟನೆಯ ಸಮಯದಲ್ಲಿ ಪ್ರಸಿದ್ಧಿಗೆ ಬಂದ ಅಭಿನವ್ ಬಿಶ್ತ್ ಕ್ರಿಯೇಟ್ ಮಾಡಿದ್ದಾರೆ. ಅಂದಿನಿಂದ ಜನರು ಈ ರೀಲ್ಸ್ ನಕಲು ಮಾಡ್ತಿದ್ದಾರೆ. ಕಿಶೋರ್ ಕುಮಾರ್ ಅವರ ಮೇರೆ ಮೆಹಬೂಬ್ ಖಯಾಮತ್ ಹೋಗಿ ಹಾಡನ್ನು ರಿಮೀಕ್ಸ್ ಮಾಡಿ ರೀಲ್ಸ್ ಮಾಡಲಾಗಿದೆ. ಅಭಿನವ್ ಬಿಶ್ತ್ ಈ ರೀಲ್ಸ್ ಗೆ ಸಿಕ್ಕಾಪಟ್ಟೆ ವೀವ್ಸ್ ಪಡೆದು, ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಂಡಿದ್ದರು. ಈಗ ಅನುಪಮ್ ಖೇರ್ ಸರದಿ.

ವೀವ್ಸ್ ಹೆಚ್ಚಾಗ್ತಿದ್ದಂತೆ ಅನುಪಮ್ ಖೇರ್ BTS ವೀಡಿಯೊವನ್ನು ಹಂಚಿಕೊಂಡಿದ್ದಾರೆ. 150 ಮಿಲಿಯನ್ ವೀವ್ಸ್.. ಇನ್ನೂ ಎಣಿಸ್ತಿದ್ದೇವೆ ಅಂತ ಖೇರ್ ಬರೆದಿದ್ದಾರೆ. ನಾವು ಈ ರೀಲ್ ಮಾಡಿದಾಗ Instagram ನಲ್ಲಿ ಮಾತ್ರ 150 ಮಿಲಿಯನ್ ವೀವ್ಸ್ ಪಡೆಯುತ್ತೆ ಎನ್ನುವ ಕಲ್ಪನೆ ಇರಲಿಲ್ಲ. ನಾವು ಅದನ್ನು ತುಂಬಾ ಗಂಭೀರ ಮತ್ತು ಮುಗ್ಧತೆಯಿಂದ ಮಾಡಿದ್ವಿ ಎಂದು ಅನುಪಮ್ ಖೇರ್ ಬರೆದುಕೊಂಡಿದ್ದಾರೆ.

ಬೋಮನ್ ಇರಾನಿ ಹಾಗೂ ಅನುಪಮ್ ಖೇರ್, ಬೆಳಿಗಿನ ಜಾವ ಎದ್ದು 80 ಮಿಲಿಯನ್ಸ್ ವೀವ್ಸ್ ಆಗಿರೋದನ್ನು ಖುಷಿ ಪಟ್ಟಿದ್ದರಂತೆ. ಈಗ 150 ಮಿಲಿಯನ್ಸ್ ವೀವ್ ಆಗಿರೋದು ಅವರನ್ನು ಮತ್ತಷ್ಟು ಖುಷಿಗೊಳಿಸಿದೆ. ನಾವು ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದೇವೆ ಎಂದು ಅನುಪಮ್ ಖೇರ್ ಹೇಳಿದ್ದಾರೆ.

ಬಿಟಿಎಸ್ ವಿಡಿಯೋದಲ್ಲಿ ಏನಿದೆ?

ಬೋಮನ್ ಇರಾನಿಯವರ ಮೇಕಪ್ ಕಲಾವಿದೆ ಅಮೃತಾ ಈ ವಿಡಿಯೋ ಶೂಟ್ ಮಾಡಿದ್ದಾರೆ. ಇದ್ರಲ್ಲಿ ನಾಲ್ವರು ಕಲಾವಿದರು ಪ್ರಾಕ್ಟೀಸ್ ಮಾಡೋದು, ವಿಡಿಯೋ ನೋಡೋದು ನಂತ್ರ ಶೂಟ್ ಮಾಡುವಾಗ ತೆಗೆದುಕೊಳ್ಳುವ ರಿಟೇಕ್ ಗಳನ್ನು ನೀವು ಕಾಣ್ಬಹುದು. ಅನುಭವಿ ಕಲಾವಿದರು ಮಕ್ಕಳಂತೆ ಅಭ್ಯಾಸ ಮಾಡ್ತಿರೋದು ಎಲ್ಲರ ಗಮನ ಸೆಳೆದಿದೆ. Gen Z ವಿಡಿಯೋ ಮಾಡಿ ಕಲಾವಿದರನ್ನು ಪ್ರೀತಿಯಿಂದ ಅಪ್ಪಿಕೊಂಡು, ಮಿಲಿಯನ್ಸ್ ವೀವ್ಸ್ ನೀಡಿದ, ವಿಡಿಯೋ ಹಂಚಿಕೊಂಡ ಅಭಿಮಾನಿಗಳಿಗೆ ಅನುಪಮ್ ಖೇರ್, ಬೋಮನ್ ಇರಾನಿ ಧನ್ಯವಾದ ಹೇಳಿದ್ದಾರೆ.