ಶಾರುಖ್ ಚಿತ್ರ ಫ್ಲಾಪ್ ಆಗ್ಲಿ ಎಂದೇ ಬೇಡಿಕೊಳ್ತಿದ್ದೆ, ಏಕೆಂದ್ರೆ... ಮದ್ವೆಯ ಶಾಕಿಂಗ್ ಸೀಕ್ರೇಟ್ ತೆರೆದಿಟ್ಟ ಪತ್ನಿ ಗೌರಿ
ಶಾರುಖ್ ಖಾನ್ ಯಶಸ್ಸಿಗೆ ನಾನು ಎಂದೂ ಪ್ರಾರ್ಥಿಸಿಯೇ ಇರಲಿಲ್ಲ ಎನ್ನುವ ಶಾಕಿಂಗ್ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ ಪತ್ನಿ ಗೌರಿ ಖಾನ್.
ಶಾರುಖ್ ಖಾನ್ ಮತ್ತು ಗೌರಿ ಖಾನ್ ಬಾಲಿವುಡ್ನಲ್ಲಿ ಎವರ್ಗ್ರೀನ್ ಜೋಡಿ. ಇವರ ವಿಷಯ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಸಿನಿ ಇಂಡಸ್ಟ್ರಿಯಲ್ಲಿ ಮದುವೆ, ವಿಚ್ಛೇದನ, ಅಕ್ರಮ ಸಂಬಂಧ, ಒಂದಕ್ಕಿಂತ ಹೆಚ್ಚು ಮದುವೆ ಎಲ್ಲವೂ ಮಾಮೂಲು. ಆದರೆ ಎಲ್ಲಕ್ಕಿಂತಲೂ ಭಿನ್ನವಾಗಿದೆ ಈ ಜೋಡಿ. ಹಿಂದೂ-ಮುಸ್ಲಿಂ ಜೋಡಿ ಎನ್ನುವ ಕಾರಣಕ್ಕೆ, ತಮ್ಮೆಲ್ಲಾ ಮಕ್ಕಳಿಗೆ ಖಾನ್ ಎಂದೇ ಸರ್ನೇಮ್ ಇಟ್ಟಿರುವುದು ಜೊತೆಗೆ ಪತ್ನಿಗೂ ಗೌರಿ ಖಾನ್ ಎಂದೇ ಹೇಳುವುದು... ಹೀಗೆ ಆಗಾಗ್ಗೆ ಕುಹುಕಗಳು ಕೇಳಿ ಬರುತ್ತಿದ್ದರೂ ಇವರದ್ದು ಆದರ್ಶ ದಾಂಪತ್ಯ ಎನ್ನುವುದು ಸುಳ್ಳಲ್ಲ. ಆದರೆ ಇದರ ನಡುವೆಯೇ ಶಾಕಿಂಗ್ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ ಗೌರಿ ಖಾನ್. ಅದೇನೆಂದರೆ, ಶಾರುಖ್ ಅವರ ಚಿತ್ರ ಯಶಸ್ವಿಯಾಗುವುದೇ ಬೇಡ, ಫ್ಲಾಪ್ ಆಗಲಿ ಎಂದು ಸದಾ ತಾವು ಆಶಿಸುತ್ತಿರುವ ವಿಷಯ ಇದಾಗಿದೆ!
ವಿಚಿತ್ರ ಎನಿಸಿದರೂ ಇದು ಸತ್ಯ ಎಂದಿದ್ದಾರೆ ಗೌರಿ ಖಾನ್. ಒಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಯಾವಾಗಲೂ ಒಬ್ಬ ಮಹಿಳೆ ಇರುತ್ತಾಳೆ. ಆದರೆ ತಮ್ಮ ಪತಿ ಎಂದಿಗೂ ಸಕ್ಸಸ್ ಕಾಣಲೇಬಾರದು ಎಂದು ಆರಂಭದಲ್ಲಿ ಬಯಸಿದವರು ಗೌರಿ ಖಾನ್ ಎಂದಿದ್ದಾರೆ. ಇತ್ತೀಚಿನ ರೆಡ್ಡಿಟ್ ಥ್ರೆಡ್ನಿಂದ ಈ ವಿಷಯ ಬಯಲಾಗಿದೆ. ಗೌರಿ ಅವರು ಹೇಳಿದ್ದೇನೆಂದರೆ, ತಮಗೆ ಶಾರುಖ್ ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲ. ನನಗೆ ಮಾತ್ರವಲ್ಲದೇ ನನ್ನ ತಾಯಿಯ ಮನೆಯಲ್ಲಿಯೂ ಯಾರಿಗೂ ಇಷ್ಟವಿರಲಿಲ್ಲ. ಆದರೆ ಅಚ್ಚರಿ ಎಂದರೆ ನನ್ನ ಕುಟುಂಬದವರೆಲ್ಲಾ ಅವರ ಸಿನಿಮಾ ನೋಡಲು ಹೋಗುತ್ತಿದ್ದರು. ಕ್ರಮೇಣ ಅವರೆಲ್ಲರೂ ಶಾರುಖ್ ಯಶಸ್ಸಿಗೆ ಹಾರೈಸಲು ಶುರು ಮಾಡಿದರು. ಆದರೆ ನಾನು ಮಾತ್ರ ಅದಕ್ಕೆ ವಿರುದ್ಧವಾಗಿದ್ದೆ ಎಂದಿದ್ದಾರೆ.
23 ವರ್ಷಗಳ ಬಳಿಕ ಶಾರುಖ್ ಪತ್ನಿ ಗೌರಿ ಮತಾಂತರ? ವೈರಲ್ ಫೋಟೋಗಳ ಹಿಂದೆ ಭಯಾನಕ ಸತ್ಯ!
ಆಗ ಶಾರುಖ್ ಖಾನ್ ಇಂಡಸ್ಟ್ರಿಗೆ ಬಂದು ಒಂಬತ್ತು ವರ್ಷಗಳಾಗಿದ್ದವು. ಆರಂಭದಲ್ಲಿ ಹಲವಾರು ಚಿತ್ರಗಳು ಫ್ಲಾಪ್ ಆದವು. ಆದ್ದರಿಂದ ಅವರ ಗಮನವೆಲ್ಲಾ ಅದರ ಮೇಲೆಯೇ ಹೋಯಿತು. ಶಾರುಖ್, ಕೇವಲ ನಟನೆಯಿಂದ ಎಂದಿಗೂ ತೃಪ್ತರಾಗಿರಲಿಲ್ಲ. ಅವರು ಚಲನಚಿತ್ರಗಳ ತಾಂತ್ರಿಕ ಭಾಗಗಳಲ್ಲಿಯೂ ತೊಡಗಿಸಿಕೊಳ್ಳಲು ಬಯಸಿದ್ದರು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮುಂಬೈನಲ್ಲಿ ಅಡ್ಜಸ್ಟ್ ಆಗಲು ನನಗೆ ತುಂಬಾ ಕಷ್ಟವಾಯಿತು. ಆದರೆ ಶಾರುಖ್ಗೆ ಸಿನಿಮಾವೇ ಪ್ರಪಂಚವಾಗಿತ್ತು. ಸ್ವಲ್ಪ ದಿನ ನೋಡೋಣ. ಮುಂಬೈ ಅಡ್ಜಸ್ಟ್ ಆಗಿಲ್ಲ ಎಂದರೆ ಊರಿಗೆ ಹೋಗೋಣ ಎಂದಿದ್ದರು. ಇದೊಂದೇ ಕಾರಣಕ್ಕೆ ಅವರ ಚಿತ್ರ ಫ್ಲಾಪ್ ಆಗಲಿ ಎಂದೇ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಹಾಗಾದರೆ ಅವರು ವಾಪಸ್ ದೆಹಲಿಗೆ ಹೋಗುತ್ತಾರೆ ಎನ್ನುವುದು ನನ್ನ ಆಸೆಯಾಗಿತ್ತು ಎಂದಿದ್ದಾರೆ.
“ಅವರ ಎಲ್ಲಾ ಚಿತ್ರಗಳು ವಿಫಲವಾಗಲಿ ಎಂದು ಪದೇ ಪದೇ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ನನಗೆ ಮುಂಬೈ ಅಂದರೆ ಕಷ್ಟವಾಗಿತ್ತು, ದೆಹಲಿಗೆ ಹಿಂತಿರುಗಬೇಕೆಂದು ನಾನು ಬಯಸುತ್ತಿದ್ದೆ. ಅದೇ ಸಮಯದಲ್ಲಿ ಅವರ ದೀವಾನಾ ಅಥವಾ ಬಾಜಿಗರ್ ಬ್ಲಾಕ್ಬಸ್ಟರ್ ಆಗಿದ್ದವು. ಆದರೆ ಅದು ಕೂಡ ಫ್ಲಾಪ್ ಆಗಲಿ ಎಂದೇ ಇಚ್ಛೆಪಟ್ಟಿದ್ದೆ. ಅದರಲ್ಲಿ ಅವರು ಹೇಗೆ ನಟಿಸಿದ್ದಾರೆ ಎನ್ನುವುದನ್ನೂ ನಾನು ನೋಡಲಿಲ್ಲ ಎಂದಿದ್ದಾರೆ ಗೌರಿ ಖಾನ್. ಆದರೆ ನನ್ನ ಪ್ರಾರ್ಥನೆ ಈಡೇರಲಿಲ್ಲ. ಕೊನೆಗೂ ಮುಂಬೈನಲ್ಲಿಯೇ ಉಳಿದುಕೊಳ್ಳುವಂತಾಯಿತು. ನಾನು ಅಡ್ಜಸ್ಟ್ ಮಾಡಿಕೊಂಡೆ ಎಂದಿದ್ದಾರೆ.
ಸಲ್ಮಾನ್ ಬಳಿಕ ಶಾರುಖ್ಗೂ ಜೀವ ಬೆದರಿಕೆ: ಶಾಕಿಂಗ್ ನ್ಯೂಸ್ಗೆ ನೆಟ್ಟಿಗರು ತಮಾಷೆ ಮಾಡ್ತಿರೋದ್ಯಾಕೆ ನೋಡಿ!