ನಯನತಾರಾ ಮನೆಗೆ ಶಾರುಖ್ ದಿಢೀರ್ ಭೇಟಿ ; ಸೌತ್ ಸ್ಟಾರ್‌ಗೆ ಕಿಸ್ ಮಾಡಿ ಹೊರಟ ಕಿಂಗ್ ಖಾನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸೌತ್ ಸ್ಟಾರ್ ನಯನತಾರಾ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಡುವಾಗ ನಯನತಾರಾಗೆ ಕಿಸ್ ಮಾಡಿದ ವಿಡಿಯೋ, ಫೋಟೋ ವೈರಲ್ ಆಗಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಶಾರುಖ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದಿದ್ದು ಪಠಾಣ್ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ. ಪಠಾಣ್ ಸಕ್ಸಸ್ ಬೆನ್ನಲ್ಲೇ ಶಾರುಖ್ ಮುಂದಿನ ಸಿನಿಮಾದ ಶೂಟಿಂಗ್ ಪ್ರಾರಂಭಿಸಿದ್ದಾರೆ. ಜವಾನ್ ಸಿನಿಮಾದಲ್ಲಿ ಶಾರುಖ್ ಬ್ಯುಸಿಯಾಗಿದ್ದು ಶೂಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ಶಾರುಖ್ ಸೌತ್ ಸ್ಟಾರ್ ನಟಿ ನಯನತಾರಾ ಮನೆಗೆ ದಿಢೀರ್ ಭೇಟಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಯನತಾರಾ ಮತ್ತು ಶಾರುಖ್ ಇಬ್ಬರೂ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ನಯನತಾರಾ ಬಾಲಿವುಡ್ ಸ್ಟಾರ್ ಶಾರುಖ್ ಜೊತೆ ನಟಿಸುತ್ತಿದ್ದಾರೆ. ಸದ್ಯ ಜವಾನ್ ಸಿನಿಮಾದ ಚಿತ್ರೀಕರಣ ಚೆನ್ನೈನಲ್ಲಿ ನಡೆಸುತ್ತಿದೆ. ಶೂಟಿಂಗ್ ಮುಗಿಸಿ ಶಾರುಖ್, ನಯನತಾರಾ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಚೆನ್ನೈನ ನಯನಾತಾರಾ ಮತ್ತು ವಿಘ್ನೇಶ್ ಅಪಾರ್ಟ್ಮೆಂಟ್‌ಗೆ ಶಾರುಖ್ ಭೇಟಿ ನೀಡಿದ ಶಾರುಖ್ ಅವಳಿ ಮಕ್ಕಳನ್ನು ಮುದ್ದಾಡಿದ್ದಾರೆ.
ನಯನತಾರಾ ಮನೆಗೆ ಶಾರುಖ್ ಬರ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳ ದಂಡೇ ನೆರದಿತ್ತು. ಶಾರುಖ್ ನೋಡಲು ಅಭಿಮಾನಿಗಳು ನಯನತಾರಾ ಮನೆಮುಂದೆ ಮುಗಿಬಿದ್ದರು. ಶಾರುಖ್ ನಯನತಾರಾ ಮನೆಯಿಂದ ಹೊರಬರುತ್ತಿದಂದೆ ನಾಯನಾತಾರೆ ಫ್ಲೈಯಿಂಗ್ ಕಿಸ್ ಮಾಡಿದರು. ಶಾರುಖ್ ಕಾರ್ ಮೇಲೆ ನಿಂತು ನಯನತಾರಾಗೆ ಕಿಸ್ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ಬಳಿಕ ಅಭಿಮಾನಿಗಳತ್ತಾ ಕೈ ಬೀಸಿತ್ತಾ ಚೆನ್ನೈನಿಂದ ಹೊರಟರು ಶಾರುಖ್.
ಶಾರುಖ್ ಖಾನ್ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ದಿಗ್ಗಜ ನಟ ನಯನತಾರೆಗೆ ಕಿಸ್ ಮಾಡಿ ಹಗ್ ಮಾಡಿರುವುದು ವಿಶೇಷವಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಚೆನ್ನೈ ಅಭಿಮಾನಿಗಳು ಶಾರುಖ್ ಅವರಿಗೆ ಪ್ರೀತಿಯ ವಿದಾಯ ಹೇಳಿದರು. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಯಾರು? ಆಕೆಯ ಸಂಬಳ ಕೇಳಿದ್ರೆ ಅಚ್ಚರಿ ಪಡ್ತೀರಿ!
ಜವಾನ್ ಸಿನಿಮಾದ ಬಗ್ಗೆ
ಶಾರುಖ್ ನಟನೆಯ ಜವಾನ್ ಸಿನಿಮಾಗೆ ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅಟ್ಲೀಯ ಚೊಚ್ಚಲ ಸಿನಿಮಾವಾಗಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ನಾಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸಾನ್ಯ ಮಲ್ಹೋತ್ರಾ, ಯೋಗಿ ಬಾಬು, ಪ್ರಿಯಾಮಣಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದಹಾಗೆ ಜವಾನ್ ಸಿನಿಮಾದಲ್ಲಿ ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನೂ ದೀಪಿಕಾ ಕೂಡ ನಟಿಸುತ್ತಾರಂತೆ. ಬಹು ನಿರೀಕ್ಷೆಯ ಸಿನಿಮಾ ಜೂನ್ 2ರಂದು ರಿಲೀಸ್ ಆಗುತ್ತಿದೆ.
ರೀ-ರಿಲೀಸ್ ಆಗ್ತಿದೆ ಸೂಪರ್ ಹಿಟ್ DDLJ; ನಾನು 'ಪಠಾಣ್' ನೋಡ್ತಿನಿ ಎಂದ ಶಾರುಖ್ ಖಾನ್
ಶಾರುಖ್ ಖಾನ್ ಜವಾನ್ ಸಿನಿಮಾ ಬಳಿಕ ಡಂಕಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಕೂಡ ಭಾರಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಶಾರುಖ್ ಜೊತೆ ಈ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.