ರೀ-ರಿಲೀಸ್ ಆಗ್ತಿದೆ ಸೂಪರ್ ಹಿಟ್ DDLJ; ನಾನು 'ಪಠಾಣ್' ನೋಡ್ತಿನಿ ಎಂದ ಶಾರುಖ್ ಖಾನ್
ಡಿಡಿಎಲ್‌ಜಿ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾರುಖ್ ಖಾನ್ ನಾನು ಪಠಾಣ್ ಸಿನಿಮಾ ನೋಡ್ತೀನಿ ಎಂದು ಹೇಳಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್‌ನ ಅಲಿಯಲ್ಲಿ ತೇಲುತ್ತಿದ್ದಾರೆ. ಶಾರುಖ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದಿದ್ದಾರೆ. ಬಹು ನಿರೀಕ್ಷೆಯ ಪಠಾಣ್ ಸಿನಿಮಾ ಜನವರಿ 15ರಂದು ರಿಲೀಸ್ ಆಗಿದೆ. ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದ ಶಾರುಖ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಶಾರುಖ್ ಕಮ್‌ಬ್ಯಾಕ್ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದೆ. ಅನೇಕ ಹಿಂದಿ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿದೆ. ಅನೇಕ ವರ್ಷಗಳ ಬಳಿಕ ಶಾರುಖ್ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಶಾರುಖ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಿಂಗ್ ಖಾನ್ ನಟನೆಯ ಸೂಪರ್ ಹಿಟ್ ಡಿಡಿಎಲ್‌ಜೆ ರೀ-ರಿಲೀಸ್ ಆಗುತ್ತಿದೆ. 1995ರಲ್ಲಿ ರಿಲೀಸ್ ಆಗಿದ್ದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾವನ್ನು ಮರು ಬಿಡುಗಡೆ ಮಾಡಲು ನಿರ್ಮಪಕರು ಪ್ಲಾನ್ ಮಾಡಿದ್ದಾರೆ.
ಅಂದಹಾಗೆ ಪ್ರೇಮಿಗಳ ದಿನದ ವಿಶೇಷವಾಗಿ ಶಾರುಖ್ ಖಾನ್ ಮತ್ತು ಕಾಜೊಲ್ ನಟನೆಯ ರೊಮ್ಯಾಂಟಿಕ್ ಸಿನಿಮಾ DDLJ ಚಿತ್ರವನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಇದರಿಂದ ಶಾರುಖ್ ನಟನೆಯ ಎರಡು ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ. ಈ ಬಗ್ಗೆ ಯಶ್ ರಾಜ್ ಫಿಲ್ಸ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
'2 ಯುಗಗಳ ಬ್ಲಾಕ್‌ಬಸ್ಟರ್ ಡಿಡಿಎಲ್‌ಜೆ ಮತ್ತು ಪಠಾಣ್ ಇಲ್ಲಿವೆ. ಈ ಪ್ರೇಮಿಗಳ ವಾರ, ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿನ ಭವ್ಯತೆಗೆ ಸಾಕ್ಷಿಯಾಗಲಿದೆ' ಎಂದು ಯಶ್ ರಾಜ್ ಫಿಲ್ಮ್ಸ್ ಟ್ವೀಟ್ ಮಾಡಿದೆ. ಅಭಿನಮಾನಿಗಳು ಎರಡು ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ SRK ಉತ್ತರ ವೈರಲ್ ಆಗಿದೆ.
ಹಿಟ್ ಚಿತ್ರವನ್ನು ಯಾರೂ ತಡೆಯೋಕಾಗಲ್ಲ; ಪಠಾನ್ ಬಾಯ್ಕಾಟ್ ಬಗ್ಗೆ ಅನುಪಮ್ ಖೇರ್ ರಿಯಾಕ್ಷನ್
ಯಶ್ ರಾಜ್ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿರುವ ಶಾರುಖ್ ಖಾನ್, ಸ್ನೇಹಿತರೆ, ನಾನು ಅಂತಹ ಕಷ್ಟಗಳ ನಂತರ ಆಕ್ಷನ್ ಹೀರೋ ಆಗಿದ್ದೇನೆ ಮತ್ತು ಈಗ ನೀವು ರಾಜ್ ಅವರನ್ನು ಮರಳಿ ಕರೆತರುತ್ತಿದ್ದೀರಿ. ಉಫ್..!! ಈ ಸ್ಪರ್ಧೆ ನನ್ನನ್ನು ಕೊಲ್ಲುತ್ತಿದೆ. ನಾನು ಪಠಾಣ್ ನೋಡಲು ಹೋಗುತ್ತಿದ್ದೇನಿ. ರಾಜ್ ಕೂಡ ನಿಮ್ಮ ಮನೆಯವನು' ಎಂದು ಹೇಳಿದ್ದಾರೆ.
ಪತಿಗೆ ನಮ್ಮ ವಿಷ್ಯ ಹೇಳಿದ್ದೀರಾ ಎಂದು ಮೊದಲ ನಾಯಕಿಗೆ ಪ್ರಶ್ನಿಸಿದ ಶಾರುಖ್ ಖಾನ್!
ಪಠಾಣ್ ಸಿನಿಮಾ ಚಿತ್ರಮಂದಿಗಳಲ್ಲಿ ರಾರಾಜಿಸುತ್ತಿದೆ. ಕೋಟಿ ಕೋಟಿ ಬಾಚಿಕೊಂಡಿದೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿ ಬಂದಿರುವ ಪಠಾಣ್ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಮಿಂಚಿದ್ದಾರೆ. ಅನೇಕ ವಿವಾದಗಳ ನಡುವೆಯೂ ಅದ್ದೂರಿಯಾಗಿ ರಿಲೀಸ್ ಆದ ಪಠಾಣ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ.