ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಯಾರು? ಆಕೆಯ ಸಂಬಳ ಕೇಳಿದ್ರೆ ಅಚ್ಚರಿ ಪಡ್ತೀರಿ!

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಯಾರು? ಆಕೆಯ ಸಂಬಳ ಎಷ್ಟು ಅಂತ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಿ. 

who is Shah rukh khan manager Pooja Dadlani and what is her Annual Earnings? sgk

ಬಾಲಿವುಡ್ ಕಿಂಗ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್ ನಲ್ಲಿ ತೇಲುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬಂದಿದ್ದು ದೊಡ್ಡ ಯಶಸ್ಸು ಕಂಡಿದ್ದಾರೆ. ಪಠಾಣ್ಸಿನಿಮಾ ಕೋಟಿ ಕೋಟಿ ಗಳಿಕೆ ಮಾಡಿದೆ. ಬಾಕ್ಸ್ ಆಫೀಸ್ ಭರ್ಜರಿ ಕಮಾಯಿ ಮಾಡುವ ಮೂಲಕ ಹಿಂದಿಯ ಅನೇಕ ಸಿನಿಮಾಗಳ ದಾಖಲೆ ಧೂಳಿಪಟ ಮಾಡಿದೆ. ಪಠಾಣ್ ಸಕ್ಸಸ್ ಬೆನ್ನಲ್ಲೇ ಶಾರುಖ್ ಧರಿಸುವ ವಾಚ್‌ನಿಂದ  ಅರ ಮ್ಯಾನೇಜರ್ ಸಂಬಳದವರೆಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಆಭಿಮಾನಿಗಳು ಕುತೂಹಲರಾಗಿದ್ದಾರೆ. 

ಪಠಾಣ್ ಸಕ್ಸಸ್ ಮೀಟ್ ನಲ್ಲಿ ಶಾರುಖ್ ಧರಿಸಿದ್ದ ವಾಚ್ ಅಭಿಮಾನಿಗಳ ಗಮನ ಸೆಳೆದಿತ್ತು. ಅಷ್ಟೆಯಲ್ಲ ಆ ವಾಚ್‌ನ ಕೇಳಿ ಅಭಿಮಾನಿಗಳು ಸುಸ್ತಾಗಿದ್ದರು. ಹೌದು ಬರೋಬ್ಬರಿ 4.9 ಕೋಟಿ ರೂಪಾಯಿ ಬೆಲೆ ಬಾಳುವ ವಾಚ್ ಧರಿಸಿ ಗಮನ ಸೆಳೆದಿದ್ದರು ಶಾರುಖ್.  ಭಾರತದ ಮಾತ್ರವಲ್ಲದೇ ವಿಶ್ವದ ಶ್ರೀವಂತ ನಟರಲ್ಲಿ ಒಬ್ಬರಾಗಿರುವ ಶಾರುಖ್ ಬಳಿ ಇರುವುದೆಲ್ಲ ದುಬಾರಿ ವಸ್ತುಗಳೇ. ಶಾರುಖ್ ಮಾತ್ರವಲ್ಲ ಅವರ ಜೊತೆ ಇರುವವರು ಸಹ ಅಷ್ಟೆ ಶ್ರೀಮಂತರಾಗಿದ್ದಾರೆ. ಸದ್ಯ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಬಾಲಿವುಡ್‌ನ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. 

ಶಾರುಖ್ ವೃತ್ತಿ ಜೀವನದಲ್ಲಿ ಪೂಜಾ ಪಾತ್ರ ಕೂಡ ದೊಡ್ಡದಿದೆ. ಅತ್ಯಂತ ಶ್ರೀಮಂತ ನಟನ ಮ್ಯೇನೇಜರ್ ಅಂದ್ಮೇಲೆ ಸಂಬಳ, ಆದಾಯ ಕೂಡ ಜಾಸ್ತಿ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿಗಷ್ಟೆ ಪೂಜಾ ತನ್ನ ಹೊಸ ಮನೆಯೆ ಗೃಹಪ್ರವೇಶ ಮಾಡಿದರು. ಪೂಜಾ ಹೊಸ ಮನೆಯ  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೂಜಾ ಮನೆಯ ಗೃಹಪ್ರವೇಶಕ್ಕೆ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಇಬ್ಬರೂ ಹಾಜರಿ ಹಾಕಿದ್ದರು. ಪೂಜಾ ಮನೆಯಲ್ಲಿ ಕಿಂಗ್ ಖಾನ್ ದಂಪತಿ ಇರುವ ಪೋಟೋಗಳು ಸಹ ಅಭಿಮಾನಿಗಳ ಗಮನ ಸೆಳೆಯುತ್ತಿವೆ. 

ಹೊಸ ಮನೆ ಫೋಟೋ ಶೇರ್ ಮಾಡಿದ ಪೂಜಾ

ಪೂಜಾ ಮನೆಯ ಇಂಟೀರಿಯರ್ ಕೂಡ ಆಕರ್ಷಕವಾಗಿದೆ. ಅಂದಹಾಗೆ ಇಂಟೀರಿಯರ್ ಡಿಸೈನ್ ಮಾಡಿದ್ದು ಸಹ ಶಾರುಖ್ ಪತ್ನಿ ಗೌರಿ ಖಾನ್. ಎಲ್ಲರಿಗೂ ಗೊತ್ತಿರುವ ಹಾಗೆ ಶಾರುಖ್ ಪತ್ನಿ ಗೌರಿ ಖ್ಯಾತ ಇಂಟೀರಿಯರ್ ಡಿಸೈನರ್. ಶಾರುಖ್ ಮ್ಯಾನೇಜರ್ ಮನೆಯ ಇಂಟೀರಿಯರ್ ಡಿಸೈನ್ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಪೂಜಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೊಸ ಮನೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ, 'ನನ್ನ ಹೊಸ ಮನೆಗೆ ಕಾಲಿಡುತ್ತಿದ್ದೇನೆ. ಹೊಸ ಕನಸು, ಸಂತೋಷದೊಂದಿಗೆ. ನನ್ನ ಕುಟುಂಬದ ಗೌರಿ ಖಾನ್ ವಿನ್ಯಾಸಗೊಳಿಸದ ಮನೆಯಲ್ಲಿ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಪೂಜಾ ಮನೆಯ ಫೋಟೋಗಳು ವೈರಲ್ ಆಗುತ್ತಿದ್ದಂತೆ ಆಕೆಯ ಸಂಬಳ ಮತ್ತು ಆದಾಯ ಪ್ರಶ್ನೆ ಎದುರಾಗಿದೆ.

ರೀ-ರಿಲೀಸ್ ಆಗ್ತಿದೆ ಸೂಪರ್ ಹಿಟ್ DDLJ; ನಾನು 'ಪಠಾಣ್' ನೋಡ್ತಿನಿ ಎಂದ ಶಾರುಖ್ ಖಾನ್

ಪೂಜಾ ಆದಾಯ ಎಷ್ಟು?

ಭಾರತದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ ಅವರ ಮ್ಯಾನೇಜರ್ ಆಗಿ ಪೂಜಾ ದದ್ಲಾನಿ ಹೆಚ್ಚು ಖ್ಯಾತಿಗಳಿಸಿದ್ದಾರೆ. ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚು ಬೇಡಿಕೆಯಿರುವ ಮ್ಯಾನೇಜರ್‌ಗಳಲ್ಲಿ ಒಬ್ಬರಾಗಿದ್ದಾರೆ. ಪೂಜಾ ವರ್ಷಕ್ಕೆ 7 ರಿಂದ 9 ಕೋಟಿ ರೂಪಾಯಿ ಗಳಿಕೆ  ಮಾಡುತ್ತಾರೆ ಎನ್ನಲಾಗಿದೆ. ಅವರ ನಿವ್ವಳ ಮೌಲ್ಯ  50 ಕೋಟಿ ರೂಪಾಯಿ ಎನ್ನಲಾಗಿದೆ. 

2012ರಿಂದ ಶಾರುಖ್ ಮ್ಯಾನೇಜರ್ ಆಗಿ ಕೆಲಸ

ಪೂಜಾ ದಾದ್ಲಾನಿ 2012ರಿಂದ ಶಾರುಖ್ ಖಾನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 10ವರ್ಷಕ್ಕೂ ಅಧಿಕ ಸಮಯ ಶಾರುಖ್ ಜೊತೆ ಕೆಲಸ ಮಾಡುವ ಮೂಲಕ ಶಾರುಖ್ ಕುಟುಂಬದಲ್ಲಿ ಒಬ್ಬರಾಗಿದ್ದಾರೆ. ಗೌರಿ ಖಾನ್ ಮತ್ತು ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಅವರೊಂದಿಗೆ ಅದ್ಭುತ ಬಂಧವನ್ನು ಹೊಂದಿದ್ದಾರೆ. ಆರ್ಯನ್ ಖಾನ್ ಜೈಲಿಗೆ ಹೋದ ಸಮಯದಲ್ಲಿ ಪೂಜಾ ದಾದ್ಲಾನಿ ಕೋರ್ಟ್‌ ಕೇಸ್ ಅಂತ ಹೆಚ್ಚು ಓಡಾಡುವ ಮೂಲಕ ಸುದ್ದಿಯಾಗಿದ್ದರು.  

'ಪಠಾಣ್' ಸಕ್ಸಸ್‌ಮೀಟ್‌ಗೆ ದುಬಾರಿ ವಾಚ್ ಧರಿಸಿದಿದ್ದ ಶಾರುಖ್; ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಿ

ಪೂಜಾ ಕುಟುಂಬದ ಬಗ್ಗೆ 

ಪೂಜಾ ಕುಟುಂಬದ ಬಗ್ಗೆ ಹೇಳುವುದಾದರೆ, ಪೂಜಾ ಮದುವೆಯಾಗಿ ಮಗಳನ್ನು ಹೊಂದಿದ್ದಾರೆ. ದಿಯಾ ಮಿರ್ಜಾ ಪತಿ, ಉದ್ಯಮಿ ವೈಭವ್ ಅವರ ಸಂಬಂಧಿ ಎಂದು ಹೇಳಲಾಗುತ್ತೆ.  ಶಾರುಖ್ ಅವರ ಸಿನಿಮಾ ವಿಚಾರಗಳ ಜೊತೆಗೆ  ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸಹ ನಿರ್ವಹಿಸುತ್ತಿದ್ದಾರೆ. 
 

Latest Videos
Follow Us:
Download App:
  • android
  • ios