'ಪಠಾಣ್' ವೀಕ್ಷಿಸಲು ಆಗದಿದ್ರೆ ಸಾಯ್ತೇನೆ: ವಿಡಿಯೋ ಮಾಡಿದ್ದಾನೆ ಈ ಯುವಕ!
ಪಠಾಣ್ ಚಿತ್ರವನ್ನು ನೋಡಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕನೊಬ್ಬ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಇವನ ಸಮಸ್ಯೆ ಏನು?
ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರಕ್ಕಾಗಿ ಅವರ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ, ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಅಭಿಮಾನಿಗಳು 'ಪಠಾಣ್' (Pathaan) ಚಿತ್ರಕ್ಕಾಗಿ ಇಡೀ ಸಿನಿಮಾ ಹಾಲ್ ಅನ್ನು ಬುಕ್ ಮಾಡಿದ್ದಾರೆ ಎಂಬ ಹಲವು ವರದಿಗಳು ಹೊರಬಿದ್ದಿವೆ. ಅದೇ ಸಮಯದಲ್ಲಿ, ಈಗ ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರು ವಿಡಿಯೋ(vedio) ಹಂಚಿಕೊಂಡಿದ್ದು ಅದೀಗ ಭಾರಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಶಾರುಖ್ ಖಾನ್ (Sharukh Khan) ಅವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಂಡ ಯುವಕನೊಬ್ಬ 'ಪಠಾಣ್' ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದಿದ್ದರೆ ಪ್ರಾಣ ತ್ಯಜಿಸುವುದಾಗಿ ಹೇಳಿಕೊಂಡಿದ್ದಾನೆ. ಟ್ವಿಟರ್‌ನಲ್ಲಿ ರಯಾನ್ ಹೆಸರಿನ ಖಾತೆಯಿಂದ ಈ ವಿಡಿಯೋ ಶೇರ್ ಆಗಿದೆ. 'ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರ ನೋಡಲು ನನ್ನ ಬಳಿ ಹಣವಿಲ್ಲ, ಚಿತ್ರ ವೀಕ್ಷಿಸಲು ಸಾಧ್ಯವಿಲ್ಲ' ಎಂದು ಹೇಳುತ್ತಲೇ ಇರುವ ಈ ಯುವಕ, ಸಿನಿಮಾ ಹಾಲ್‌ನಲ್ಲಿ ‘ಪಠಾಣ್’ ಚಿತ್ರ ನೋಡಲು ಸಾಧ್ಯವಾಗದಿದ್ದರೆ ಮತ್ತು ಶಾರುಖ್ ಖಾನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ ಪ್ರಾಣ ಕೊಡುತ್ತೇನೆ (Suicide) ಎಂದು ಹೇಳಿದ್ದಾನೆ.
'ಕೆಜಿಎಫ್ 2'ಗೆ ಠಕ್ಕರ್ ಕೊಟ್ಟ 'ಪಠಾಣ್': ಬೈಕಾಟ್ ಬಿಸಿ ನಡುವೆಯೇ ಮಾಡಿತು ದಾಖಲೆ!
ಈ ಯುವಕ ಕೊಳದ ಬಳಿ ನಿಂತು ವಿಡಿಯೋ ಮಾಡಿದ್ದಾನೆ. 'ಪಠಾಣ್' ಸಿನಿಮಾವನ್ನು ವೀಕ್ಷಿಸಲು ಸಹಾಯ ಮಾಡುವಂತೆ ಜನರಲ್ಲಿ ಮೊರೆಯಿಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಈತ, ಶಾರುಖ್ ಖಾನ್ ಹೊರತುಪಡಿಸಿ, ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್ ಅಬ್ರಹಾಂ (John Abraham) ಕೂಡ ನಾನು ನೋಡಬೇಕು ಎಂದಿದ್ದಾನೆ. 'ಪಠಾಣ್' ಚಿತ್ರವನ್ನು ಜನವರಿ 25ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರ ಮತ್ತು ನಟರನ್ನು ನೋಡಬೇಕು. ಅದು ಸಾಧ್ಯವಾಗದಿದ್ದರೆ ಇದೇ ಕೊಳಕ್ಕೆ ಹಾರಿ ಪ್ರಾಣ ಬಿಡುವೆ ಎಂದಿದ್ದಾನೆ.
ಅಂದಹಾಗೆ ಪಠಾಶಣ್ ಚಿತ್ರದ ಮೊದಲ ದಿನದ ಷೋಗೆ ಭರ್ಜರಿ ಟಿಕೆಟ್ (Ticket) ಮಾರಾಟವಾಗಿದೆ. ಸದ್ಯ ದೆಹಲಿ, ಮುಂಬೈನಲ್ಲಿ ಚಿತ್ರದ ಮೊದಲ ದಿನದ ಶೋನಲ್ಲಿ ಟಿಕೆಟ್‌ವೊಂದಕ್ಕೆ 2200 ರೂಪಾಯಿಯಂತೆ ಮಾರಾಟ ಆಗುತ್ತಿವೆ. ಟಿಕೆಟ್ ದರಕ್ಕೆ ಕೇರೇ ಮಾಡದೇ ಅಭಿಮಾನಿಗಳು ಖರೀದಿ ಮಾಡುತ್ತಿದ್ದಾರೆ. ಇದು ಈ ಅಭಿಮಾನಿಗೆ ಶಾಕ್ ಕೊಟ್ಟಿದೆ. ಇಷ್ಟೊಂದು ದುಬಾರಿ ಬೆಲೆ ತೆರಲು ಸಾಧ್ಯವಿಲ್ಲ ಎಂದಿರುವ ಈತ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ.
ಪ್ರಮೋಷನ್ ಇಲ್ದೇ ಚಿತ್ರ ಗೆಲ್ತೇವೆ! ರಿಯಾಲಿಟಿ ಶೋಗೆ ಹೋಗಲು ಶಾರುಖ್ ನಕಾರ!
ಈ ವಿಡಿಯೋಕ್ಕೆ ಹಲವಾರು ಮಂದಿ ಹಲವಾರು ರೀತಿಯಲ್ಲಿ ಕಮೆಂಟ್ (Comment) ಹಾಕುತ್ತಿದ್ದಾರೆ. ಇದು ಪ್ರಚಾರದ ಗಿಮಿಕ್ ಅಷ್ಟೇ. ದುಬಾರಿ ಸ್ಮಾರ್ಟ್ಫೋನ್ ತೆಗೆದುಕೊಳ್ಳಲು ದುಡ್ಡಿದೆ, ಟಿಕೆಟ್ ಖರೀದಿಸಲು ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ಹಲವರು ಈ ಥರ ಗಿಮಿಕ್ ಮಾಡಿದರೆ ಯಾರೂ ನಂಬುವುದಿಲ್ಲ ಎಂದಿದ್ದರೆ, ಕೆಲವರು ಮಾತ್ರ ಲೊಕೇಶನ್ ತಿಳಿಸಿ, ಟಿಕೆಟ್ ಕಳಿಸಿಕೊಡ್ತೇವೆ ಎಂದಿದ್ದಾರೆ.
ಅಂದಹಾಗೆ, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯಲು ಆರಂಭಿಸಿದೆ. ಪಠಾಣ್ ಟಿಕೆಟ್ ಮುಂಗಡ ಬುಕ್ಕಿಂಗ್ (Ticket booking)ಶುರುವಾದಾಗಿನಿಂದಲೂ ಈ ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬೀಳುತ್ತಿವೆ. ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಬಿಡುಗಡೆಗೆ ಮುನ್ನವೇ ಕೆಜಿಎಫ್ 2 ಚಿತ್ರದ ದಾಖಲೆಯನ್ನು ಮುರಿದಿದೆ! ಸಾಗರೋತ್ತರ ಮುಂಗಡ ಬುಕ್ಕಿಂಗ್ ವಿಚಾರದಲ್ಲಿ ಚಿತ್ರ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಚಿತ್ರ ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಿದೆ. ವರದಿ ಪ್ರಕಾರ ಪಠಾಣ್ 1.32 ಕೋಟಿ ಗಳಿಸಿದೆ. ಆದ್ದರಿಂದ 1.2 ಕೋಟಿ ರೂಪಾಯಿ ಗಳಿಸಿದ್ದ ಕೆಜಿಎಫ್ 2 ದಾಖಲೆಯನ್ನು ಅದು ಹಿಂದಿಕ್ಕಿದೆ. ಶಾರುಖ್ ಖಾನ್ ಚಿತ್ರವು ಮುಂಗಡ ಬುಕ್ಕಿಂಗ್‌ನಲ್ಲಿ ಮುಂದುವರೆದರೆ, ಚಿತ್ರವು ಮೊದಲ ದಿನದಲ್ಲಿ ಬಾಕ್ಸ್ ಆಫೀಸ್ (Box office)ಅನ್ನು ಚಿಂದಿ ಮಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.