'ಕೆಜಿಎಫ್ 2'ಗೆ ಠಕ್ಕರ್ ಕೊಟ್ಟ 'ಪಠಾಣ್': ಬೈಕಾಟ್ ಬಿಸಿ ನಡುವೆಯೇ ಮಾಡಿತು ದಾಖಲೆ!
ಬೈಕಾಟ್ ಬಿಸಿ ಅನುಭವಿಸುತ್ತಿರುವ ಪಠಾಣ್ ಚಿತ್ರ ಈಗ ಹೊಸದೊಂದು ದಾಖಲೆ ಬರೆದಿದೆ. ಅದೇನದು?
ಬಹು ವಿವಾದದ ಬಳಿಕ ಶಾರುಖ್ ಖಾನ್, (Shah Rukh Khan)ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಬೇಷರಂ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟು ಹಿಂದೂಗಳ ಭಾರಿ ಕೆಂಗಣ್ಣಿಗೆ ಗುರಿಯಾಗಿ ಬೈಕಾಟ್ ಬಿಸಿಯನ್ನೂ ಅನುಭವಿಸುತ್ತಿರುವ ಪಠಾಣ್ ಚಿತ್ರದ ಟ್ರೈಲರ್ ವಾರದ ಹಿಂದೆ ಅದ್ಧೂರಿಯಾಗಿ ಬಿಡುಗಡೆಯನ್ನೂ ಕಂಡಿದೆ. ಶಾರುಖ್ ಖಾನ್ ಅವರ ನಟನೆಯ ‘ಚೆನ್ನೈ ಎಕ್ಸ್ಪ್ರೆಸ್’ (Channai Express) ಸಿನಿಮಾ 2013ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಶಾರುಖ್ ಖಾನ್ ಅವರು ಹೇಳಿಕೊಳ್ಳುವಂತಹ ಗೆಲುವು ಕಾಣಲಿಲ್ಲ. ಈಗ ‘ಪಠಾಣ್’ ಮೂಲಕ ಅವರು ಒಳ್ಳೆಯ ಕಂಬ್ಯಾಕ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. 57ನೇ ವಯಸ್ಸಿನಲ್ಲೂ ಸಿಕ್ಸ್ ಪ್ಯಾಕ್ ಮೂಲಕ ಮಿಂಚಿದ್ದಾರೆ. ಆದರೆ ಬೈಕಾಟ್ (Boycott)ಬಿಸಿಯಿಂದಾಗಿ ಶಾರುಖ್ ಮಾತ್ರವಲ್ಲದೇ ಇಡೀ ಚಿತ್ರತಂಡ ಅಕ್ಷರಶಃ ನಲುಗಿದ್ದಂತೂ ಖಂಡಿತ.
ಆದರೆ ಇದೀಗ ಪಠಾಣ್ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ (Good news)ಸಿಕ್ಕಿದೆ. ‘ಪಠಾಣ್’ ಟ್ರೈಲರ್ ನೋಡಿದವರಿಗೆ ಒಂದು ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂದು ಎಲ್ಲರೂ ಭಾವಿಸುತ್ತಿದ್ದರು. ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದ್ದ ‘ಕೆಜಿಎಫ್ 2’ ಸಿನಿಮಾವನ್ನು ಪಠಾಣ್ ಹಿಂದಿಕ್ಕಲಿ ಎಂದು ಶಾರುಖ್, ದೀಪಿಕಾ ಅಭಿಮಾನಿಗಳು ಪ್ರಾರ್ಥಿಸುತ್ತಲೇ ಬಂದಿದ್ದರು.ಕೆಜಿಎಫ್ 2 (KGD 2) ಬಾಲಿವುಡ್ನಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿತ್ತು. ಅದೇ ಇನ್ನೊಂದೆಡೆ ‘ಪಠಾಣ್’ ಚಿತ್ರದ ನಿರ್ದೇಶಕರಾಗಿರುವ ಸಿದ್ದಾರ್ಥ್ ಆನಂದ್ ಅವರ ‘ವಾರ್’ ಚಿತ್ರ ಮೊದಲ ದಿನ 51.60 ಕೋಟಿ ರೂಪಾಯಿ ಗಳಿಸಿತ್ತು. ಈ ಚಿತ್ರಗಳನ್ನು ಪಠಾಣ್ ಹಿಂದಿಕ್ಕುತ್ತದೆಯೇ ಎಂದು ಅಭಿಮಾನಿಗಳು ಹಾಗೂ ಚಿತ್ರ ತಂಡ ಕಾತರದಿಂದ ಕಾದಿತ್ತು.
ಕೇಸರಿ ಬುರ್ಖಾ ಧರಿಸಿ ಬಂದ ರಾಖಿ ಸಾವಂತ್ ಹೇಳಿದ್ದೇನು?
ಅವರ ಕನಸೀಗ ನನಸಾಗಿದೆ. ಪಠಾಣ್ ಚಿತ್ರ ಜನವರಿ 25 ರಂದು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲು ಆರಂಭಿಸಿದೆ. ಪಠಾಣ್ ಟಿಕೆಟ್ ಮುಂಗಡ ಬುಕ್ಕಿಂಗ್ (Ticket booking)ಶುರುವಾದಾಗಿನಿಂದಲೂ ಈ ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬೀಳುತ್ತಿವೆ. ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಬಿಡುಗಡೆಗೆ ಮುನ್ನವೇ ಕೆಜಿಎಫ್ 2 ಚಿತ್ರದ ದಾಖಲೆಯನ್ನು ಮುರಿದಿದೆ!
ಸಾಗರೋತ್ತರ ಮುಂಗಡ ಬುಕ್ಕಿಂಗ್ ವಿಚಾರದಲ್ಲಿ ಚಿತ್ರ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಚಿತ್ರ ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಿದೆ. ವರದಿ ಪ್ರಕಾರ ಪಠಾಣ್ 1.32 ಕೋಟಿ ಗಳಿಸಿದೆ. ಆದ್ದರಿಂದ 1.2 ಕೋಟಿ ರೂಪಾಯಿ ಗಳಿಸಿದ್ದ ಕೆಜಿಎಫ್ 2 ದಾಖಲೆಯನ್ನು ಅದು ಹಿಂದಿಕ್ಕಿದೆ. ಶಾರುಖ್ ಖಾನ್ ಚಿತ್ರವು ಮುಂಗಡ ಬುಕ್ಕಿಂಗ್‌ನಲ್ಲಿ ಮುಂದುವರೆದರೆ, ಚಿತ್ರವು ಮೊದಲ ದಿನದಲ್ಲಿ ಬಾಕ್ಸ್ ಆಫೀಸ್ (Box office)ಅನ್ನು ಚಿಂದಿ ಮಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪಠಾಣ್ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶಾರುಖ್, ಜಾನ್ ಅಬ್ರಹಾಂ ನಡುವೆ ಬಿರುಕು?
ಜಾನ್ ಅಬ್ರಹಾಂ ಮತ್ತು ಶಾರುಖ್ ಖಾನ್ ಅವರ ಈ ಚಿತ್ರವನ್ನು ನಿರ್ಮಿಸಲು ತಯಾರಕರು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಈ ಚಿತ್ರದ ಬಜೆಟ್ 250 ಕೋಟಿ ರೂಪಾಯಿ. ಈ ಚಿತ್ರದ ಮೂಲಕ ಶಾರುಖ್ ಖಾನ್ ಹಲವು ವರ್ಷಗಳ ನಂತರ ಬಾಲಿವುಡ್‌ಗೆ ಮುಖ್ಯ ಪಾತ್ರದಲ್ಲಿ ಮರಳಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸೆನ್ಸಾರ್ ಮಂಡಳಿಯ ಸೂಚನೆ ಮೇರೆಗೆ ಕೇಸರಿ ಬಿಕಿನಿಯ ದೀಪಿಕಾ ಪಡುಕೋಣೆ, ಕೇಸರಿ ಲುಂಗಿ ತೊಟ್ಟಿದ್ದಾರೆ. ಅದರಂತೆಯೇ ಕೆಲವೊಂದು ಸೀನ್ಗಳನ್ನು ಕಟ್ ಮಾಡಲಾಗಿದೆ. ಇವೆಲ್ಲವುಗಳ ನಡುವೆ ಪಠಾಣ್ ಎಷ್ಟು ಗಳಿಸುತ್ತದೆ ಎಂಬತ್ತ ಎಲ್ಲರ ಚಿತ್ತ ನೆಟ್ಟಿದೆ.
ಇದಾಗಲೇ ಚಿತ್ರದ ಕುರಿತು ಇನ್ನೊಂದು ಕುತೂಹಲದ ವಿಷಯ ಕೂಡ ಬಹಿರಂಗಗೊಂಡಿತ್ತು. ಅದೇನೆಂದರೆ, ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ, ಜಾನ್ ಅಬ್ರಹಾಂ ಚಿತ್ರದಲ್ಲಿ ವಿಲನ್ ಅಲ್ಲ ಎಂಬುದು. ಚಿತ್ರದ ಟ್ರೈಲರ್ ನೋಡಿದರೆ ಅಥವಾ ಪೋಸ್ಟರ್ ನೋಡಿದಾಗ ಚಿತ್ರದ ವಿಲನ್ ಜಾನ್ ಅಬ್ರಹಾಂ (John Abrahim) ಎಂದೇ ಅನ್ನಿಸುವುದು ಉಂಟು. ಆದರೆ ಚಿತ್ರದ ವಿಲನ್ ಅವರಲ್ಲ, ಖುದ್ದು ದೀಪಿಕಾ ಪಡುಕೋಣೆ ಎಂದು ಸುದ್ದಿಯಾಗಿದೆ. ಇದು ಎಷ್ಟರ ಮಟ್ಟಿಗೆ ನಿಜ? ಯಶ್ ರಾಜ್ ಫಿಲ್ಮ್ಸ್ (Yash Raj films) ಬ್ಯಾನರ್ ಅಡಿಯಲ್ಲಿ ತಯಾರಾದ 'ಪಠಾಣ್' ಚಿತ್ರದ ಕ್ಲೈಮ್ಯಾಕ್ಸ್ ಹೇಗಿರುತ್ತದೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ.