ಪ್ರಮೋಷನ್​ ಇಲ್ದೇ ಚಿತ್ರ ಗೆಲ್ತೇವೆ! ರಿಯಾಲಿಟಿ ಶೋಗೆ ಹೋಗಲು ಶಾರುಖ್ ನಕಾರ!

ಪಠಾಣ್​ ಚಿತ್ರದ ಪ್ರಮೋಷನ್​ಗೆ ರಿಯಾಲಿಟಿ ಷೋಗಳಿಗೆ ಹೋಗಲು ನಟ ಶಾರುಖ್​ ಖಾನ್​ ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಅವರು ಹೇಳಿರುವುದೇನು?
 

Shah Rukh Khan refused to promote Pathaan in  bigg boss 16 and  kapil sharma show

ನಾಲ್ಕು ವರ್ಷಗಳ ಬಳಿಕ ಕಮ್​ಬ್ಯಾಕ್​ (comeback) ಆಗಿರುವ ಬಾಲಿವುಡ್​ ಬಾದಶಾಹ್​ ಶಾರುಖ್ ಖಾನ್ ಇತ್ತೀಚಿನ ದಿನಗಳಲ್ಲಿ  'ಪಠಾಣ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ಒಂದೆಡೆ ಬಾಯ್ಕಾಟ್​ ಬಿಸಿ ಇದ್ದರೂ ಇದು ಭರ್ಜರಿ ಯಶಸ್ಸು ಗಳಿಸುವ ಎಲ್ಲಾ ಸೂಚನೆಗಳೂ ಕಾಣಿಸುತ್ತಿವೆ. ಇದಾಗಲೇ ಚಿತ್ರ ಕೆಜಿಎಫ್​ 2 (KGF 2) ದಾಖಲೆಯನ್ನೂ ಹಿಂದಿಕ್ಕಿ, ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಇನ್ನೇನು ಚಿತ್ರ ಬಿಡುಗಡೆಗೆ ಐದೇ ದಿನ ಬಾಕಿ ಇದ್ದು, ಇದೇ 25 ಯಾವಾಗ ಬರುತ್ತದೆ ಎಂದು ಶಾರುಖ್​, ದೀಪಿಕಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದರ ನಡುವೆ ಇನ್ನೊಂದು ಸುದ್ದಿ ಹೊರ ಬಂದಿದೆ. ಅದೇನೆಂದರೆ, ಸಾಮಾನ್ಯವಾಗಿ ಯಾವುದೇ ಚಿತ್ರ ಯಶಸ್ಸು ಗಳಿಸಬೇಕಾದರೆ ಪ್ರಮೋಷನ್​ ತುಂಬಾ ಮುಖ್ಯ. ಇದೇ ಕಾರಣಕ್ಕೆ ಚಿತ್ರತಂಡವು ಫೇಮಸ್​ ರಿಯಾಲಿಟಿ ಷೋ(Reality show)ಗಳಲ್ಲಿ ತೆರಳಿ ಪ್ರಮೋಷನ್​ (promotion) ಮಾಡುತ್ತವೆ. ಆದರೆ ಬಾಲಿವುಡ್​ ಅಂಗಳದಲ್ಲಿ ಚರ್ಚೆಯಾಗುವ  ವರದಿಗಳನ್ನು ನಂಬುವುದಾದರೆ, ಯಾವುದೇ ರಿಯಾಲಿಟಿ ಷೋನಲ್ಲಿ ತಮಗೆ ಪ್ರಚಾರ ಬೇಡ ಎಂದು ಚಿತ್ರತಂಡ ಹೇಳಿದೆಯಂತೆ.

ಕೇಸರಿ ಬುರ್ಖಾ ಧರಿಸಿ ಬಂದ ರಾಖಿ ಸಾವಂತ್​ ಹೇಳಿದ್ದೇನು?

ಸಲ್ಮಾನ್​ ಖಾನ್​ ಅವರು ನಡೆಸಿಕೊಡುವ  'ಬಿಗ್ ಬಾಸ್ 16' (Bigg Boss 16) ಮತ್ತು ಕಾಮಿಡಿ ಕಿಂಗ್​ ಕಪಿಲ್​ ಶರ್ಮಾ ಅವರು 'ದಿ ಕಪಿಲ್ ಶರ್ಮಾ ಶೋ'ಗಳಲ್ಲಿ ಪ್ರಚಾರ ಮಾಡಲು ಶಾರುಖ್​ ಹಾಗೂ ಚಿತ್ರತಂಡ ನಿರಾಕರಿಸಿರುವುದಾಗಿ ವರದಿಯಾಗಿದೆ. ಈ ಷೋಗಳು ನೀಡಿರುವ ಆಫರ್​ಗಳನ್ನು ತಂಡ ನಿರಾಕರಿಸಿದೆ ಎಂದು ಸುದ್ದಿಯಾಗಿದೆ. ತಾವು ಯಾವುದೇ ಷೋಗಳಿಗೆ ತೆರಳದೇ ಪ್ರಚಾರ ಮಾಡುತ್ತೇವೆ. ಇಂಥ ಷೋಗಳಲ್ಲಿ ಚಿತ್ರದ ಪ್ರಚಾರ ಮಾಡುವ ಬದಲು ಶಾರುಖ್ ಖಾನ್ (Sharukh Khan) ನೇರವಾಗಿ ಪ್ರೇಕ್ಷಕರಲ್ಲಿ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ. ಯಾವುದೇ ಪ್ರಮೋಷನ್​ನ ಗೋಚಿಗೆ ಹೋಗದ ಚಿತ್ರತಂಡವು ಪ್ರಮೋಷನ್​ಗಾಗಿ ಖರ್ಚು ಮಾಡುವ 15 20 ಕೋಟಿ ರೂಪಾಯಿಗಳನ್ನೂ ಉಳಿಸಿದೆ ಎಂದು ಹೇಳಲಾಗುತ್ತಿದೆ.

ಇಂಗ್ಲಿಷ್ ಸುದ್ದಿ ವೆಬ್‌ಸೈಟ್ ತನ್ನ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. 'ಶಾರುಖ್ ಖಾನ್ ಬಿಗ್ ಬಾಸ್ 16 ಗೆ ಹೋಗುತ್ತಿಲ್ಲ. ಅವರು ನೇರವಾಗಿ ಪ್ರೇಕ್ಷಕರನ್ನು ತಲುಪಲು ಆದ್ಯತೆ ನೀಡುತ್ತಿದ್ದಾರೆ. ಈ ಚಿತ್ರವು ತನ್ನದೇ ಆದ ರೀತಿಯಲ್ಲಿ ಸಾಗುತ್ತಿದೆ.  ಮಾಧ್ಯಮವನ್ನು ನಿರ್ಲಕ್ಷಿಸುತ್ತಿರುವ ಶಾರುಖ್ ಖಾನ್ ಈ ಬಾರಿ ಯಾವುದೇ ಸಾಂಪ್ರದಾಯಿಕ ಮಾಧ್ಯಮ ಪ್ರಚಾರವಿಲ್ಲದೆ ಚಿತ್ರದೊಂದಿಗೆ ಮುಂದುವರಿಯುತ್ತಿದ್ದಾರೆ, ಅವರು 'ದಿ ಕಪಿಲ್ ಶರ್ಮಾ ಷೋ' (The Kapil Sharma show) ದಲ್ಲಿ ಕೂಡ ಹೋಗಲು ಇಷ್ಟಪಡುತ್ತಿಲ್ಲ ಎಂದು ಹೇಳಿದೆ. 

ಏತನ್ಮಧ್ಯೆ, ಚಿತ್ರದ ಮುಂಗಡ ಬುಕ್ಕಿಂಗ್ (Ticket booking) ಇಂದಿನಿಂದ ಅಂದರೆ ಜನವರಿ 20 ರಿಂದ ಪ್ರಾರಂಭವಾಗಬೇಕಿತ್ತು, ಆದರೆ ಅದನ್ನು ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 19 ರಿಂದ ಪ್ರಾರಂಭಿಸಲಾಯಿತು. ವರದಿಗಳ ಪ್ರಕಾರ, ಗುರುವಾರ ಎರಡು ಗಂಟೆಯೊಳಗೆ, ಹೈದರಾಬಾದ್‌ನಲ್ಲಿಯೇ ಚಿತ್ರದ ಸುಮಾರು 18,000 ಟಿಕೆಟ್‌ಗಳು ಮಾರಾಟವಾಗಿವೆ. ಅದೇ ಸಮಯದಲ್ಲಿ, ಈ ಚಿತ್ರವು ಕೆಲವೇ ಗಂಟೆಗಳಲ್ಲಿ 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಟ್ರೇಡ್ ಟ್ರ್ಯಾಕರ್ ವೆಬ್‌ಸೈಟ್‌ಗಳು ಚಿತ್ರವು ಬಂಪರ್ ತೆರೆಯಲಿದೆ ಎಂದು ಭವಿಷ್ಯ ನುಡಿದಿದೆ. ಇದು ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಇದುವರೆಗಿನ ಎರಡನೇ ಅತಿದೊಡ್ಡ ಆರಂಭಿಕ ಚಿತ್ರ ಎಂದು ಸಾಬೀತುಪಡಿಸಬಹುದು. ಮೊದಲ ದಿನವೇ ಚಿತ್ರದ ಕಲೆಕ್ಷನ್ 39 41 ಕೋಟಿ ರೂ.ಗೆ ಏರಬಹುದು ಎಂದು ಹೇಳಲಾಗುತ್ತಿದೆ.

Sunny Leone : ಸನ್ನಿ ಲಿಯೋನ್​ ತುಟಿಗೆ ಗಾಯ: ಬೆಡ್​ರೂಮ್​ನಿಂದ ವಿಡಿಯೋ ಮಾಡಿದ ನಟಿ

ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಯಶ್ ರಾಜ್ ಫಿಲ್ಮ್ಸ್ (Yash raj films) ಬ್ಯಾನರ್ ಅಡಿಯಲ್ಲಿ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನಲ್ಲಿ ನಾಲ್ಕನೇ ಚಿತ್ರವಾಗಿದೆ. ಈ ಚಿತ್ರದ ಮೂಲಕ ಶಾರುಖ್ ಸುಮಾರು 4 ವರ್ಷಗಳ ನಂತರ ಹಿರಿತೆರೆಯಲ್ಲಿ ನಾಯಕ ನಾಯಕನಾಗಿ ಮರಳಲಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Latest Videos
Follow Us:
Download App:
  • android
  • ios