Asianet Suvarna News Asianet Suvarna News

ಶಾರುಖ್ ಖಾನ್ 'ಡಂಕಿ' ಡಮಾರ್, ಪ್ರಭಾಸ್ 'ಸಲಾರ್' ಸೂಪರ್ ಹಿಟ್; ತಪ್ಪಿದ ಕಿಂಗ್ ಖಾನ್ ಲೆಕ್ಕಾಚಾರ!

ರಾಜ್ಕುಮಾರ್ ಹಿರಾನಿ ಬಾಲಿವುಡ್ನ ದಿಗ್ಗಜ ಡೈರೆಕ್ಟರ್. ಮುನ್ನಭಾಯಿ ಎಂಬಿಬಿಎಸ್, 3 ಈಡಿಯೆಟ್ಸ್, ಪಿಕೆ. ಸಂಜು ಹೀಗೆ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿದ್ದಾರೆ. 

Shah Rukh Khan Dunki flop and Prabhas Salaar Superhit slogan viral in social media srb
Author
First Published Dec 22, 2023, 8:01 PM IST

ಬಾಲಿವುಡ್ ಜಗತ್ತಿನ ಈ ವರ್ಷದ ಸೂಪರ್ ಸ್ಟಾರ್ ಪಟ್ಟದಲ್ಲಿ ರಾರಾಜಿಸುತ್ತಿದ್ದ ಕಿಂಗ್ ಖಾನ್ ಶಾರುಖ್  ಈಗ ಮತ್ತೆ ಸೋಲಿನ ರುಚಿ ನೋಡಿದ್ದಾರೆ. ಭಾರೀ ನಿರೀಕ್ಷೆಯ ಡಂಕಿ ಚಿತ್ರವು ಬಾಕ್ಸ್‌ ಆಫೀಸ್ ಕಲೆಕ್ಷನ್‌ನಲ್ಲಿ ಮುಗ್ಗರಿಸಿ ಬಿದ್ದಿದೆ. ಜಗತ್ತಿನಾದ್ಯಂತ ಬಿಡುಗಡೆ ಕಂಡಿರುವ ಡಂಕಿ ಚಿತ್ರದ ಮೊದಲ ದಿನದ ಒಟ್ಟೂ ಕಲೆಕ್ಷನ್ 30 ಕೋಟಿ ಎನ್ನಲಾಗುತ್ತಿದೆ. ಈ ಮೂಲಕ ಡಂಕಿ ಚಿತ್ರವು ಹಿಟ್ ಆಗುವ ಯಾವುದೇ ಲಕ್ಷಣಗಳಿಲ್ಲ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಲ್ಲಿಗೆ ಶಾರುಖ್ ಖಾನ್ ನಟನೆಯ ಡಂಕಿ ಸೋತು ಹೋಯ್ತು ಎಂಬ ಸುದ್ದಿ ಹಬ್ಬತೊಡಗಿದೆ. 

ಈ ವರ್ಷ ಸತತ ಸೋಲಿನಿಂದ ಬೆಂದು ಹೋಗಿದ್ದ ಹಿಂದಿ ಸಿನಿ ಜಗತ್ತಿಗೆ ಶಕ್ತಿಯಾಗಿ ನಿಂತಿದ್ರು Shah Rukh Khan. ಅವರ ನಟನೆಯ ಜವಾನ್ ಹಾಗು ಪಠಾಣ್ ಸಿನಿಮಾಗಳು ಸೂಪರ್ ಹಿಟ್ ಆಗಿ ಹಿಂದಿ ಸಿನಿಮಾ ಜಗತ್ತಿಗೆ ಇನ್ನೂ ಜೀವ ಇದೆ ಅಂತ ಪ್ರೂವ್ ಮಾಡಿ ಹೇಳಿದ್ರು. ಆದ್ರೆ ಈಗ ಮತ್ತೆ ಶಾರುಖ್ ಖಾನ್ ಅವರಿಗೆ ಸೋಲಿನ ಕಹಿ ಸಿಕ್ಕಿದೆ. ಶಾರುಖ್ ಖಾನ್ ನಟನೆಯ ಮೋಸ್ಟ್ ಎಕ್ಸೈಟೆಡ್ ಡಂಕಿ ಸಿನಿಮಾ ಬಾಕ್ಸಾಫೀಸ್ 'ಕಲೆಕ್ಷನ್'ನಲ್ಲಿ ಡುಮ್ಕಿ ಹೊಡೆದಿದೆ. ಈ ಮೂಲಕ ಶಾರುಖ್ ಖಾನ್ ಅಭಿಮಾನಿಗಳಿಗೆ ನಿರಾಸೆ ಮೂಡಿದೆ. 

2023ನೇ ವರ್ಷ ನಟ ಶಾರುಖ್ ಖಾನ್ ಸಿನಿ ಕೆರಿಯರ್‌ನಲ್ಲಿ ಬೆಸ್ಟ್ ಈಯರ್. ಯಾಕಂದ್ರೆ ಶಾರುಖ್ ಜವಾನ್ ಸಿನಿಮಾದಿಂದ 1,148.32 ಕೋಟಿ ಕಲೆಕ್ಷನ್ ಮಾಡಿದ್ರು. ಪಠಾಣ್ ಸಿನಿಮಾದಿಂದ 1,050.30 ಕೋಟಿ ಗಳಿಸಿದ್ರು. ಈ ಬಿಗ್ ಹಿಟ್ನಿಂದ ಡಂಕಿ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದ್ರೆ ಆ ನಿರೀಕ್ಷೆ ನಿರಾಸೆಯಾಗಿದೆ. ಡಂಕಿ ಮೊದಲ ದಿನ ಕಲೆಕ್ಷನ್ ಫುಲ್ ಡಲ್ ಆಗಿದೆ. ಹಿರಾನಿ ಮೇಲೆ ನಂಬಿಕೆ ಕಳೆದುಕೊಂಡ್ರಾ ಪ್ರೇಕ್ಷಕರು ಎಂಬ ಪ್ರಶ್ನೆ ಮೂಡಿದೆ. 

ಎರಡು ಬಾರಿ ನೋ ಅಂದಿದ್ದರು ಪೃಥ್ವಿರಾಜ್ ಸುಕುಮಾರ್; ಸಲಾರ್‌ನಲ್ಲಿ ನಟಿಸಿದ ರಹಸ್ಯ ರಿವೀಲ್ ಆಯ್ತು!

ರಾಜ್ಕುಮಾರ್ ಹಿರಾನಿ ಬಾಲಿವುಡ್ನ ದಿಗ್ಗಜ ಡೈರೆಕ್ಟರ್. ಮುನ್ನಭಾಯಿ ಎಂಬಿಬಿಎಸ್, 3 ಈಡಿಯೆಟ್ಸ್, ಪಿಕೆ. ಸಂಜು ಹೀಗೆ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಆದ್ರೆ ರಾಜ್ ಕುಮಾರ್ ಹಿರಾನಿಯ ಡಂಕಿ ಸಿನಿಮಾ ಕಲೆಕ್ಷನ್ನಲ್ಲಿ ಡಮಾರ್ ಆಗಿದೆ. ಈ ಸಿನಿಮಾ ಫಸ್ಟ್ ಡೇ ಜೆಸ್ಟ್ 30 ಕೋಟಿಯಷ್ಟೇ ಕಲೆಕ್ಷನ್ ಮಾಡಿದೆ. ಶಾರುಖ್‌ ಜವಾನ್ ಸಿನಿಮಾ ಫಸ್ಟ್ ಡೇ 75 ಕೋಟಿ ಕಲೆಕ್ಷನ್ ಮಾಡಿತ್ತು. ಪಠಾಣ್ ಫಸ್ಟ್ ಡೇ ಕಲೆಕ್ಷನ್ 57 ಕೋಟಿ ಗಳಿಸಿತ್ತು. ಆದ್ರೆ ಡಂಕಿ ಮಾತ್ರ ಅಟ್ಟರ್ ಪ್ಲಾಫ್ ಆಗಿದೆ.

ಕರೀನಾ ಕಪೂರ್ ಡಯೆಟ್ ಪ್ಲಾನ್ ನೋಡಿದ್ರೆ ತಲೆ ಸುತ್ತಿ ಬೀಳ್ತೀರಾ; ಯಾಕೆ ಬೇಕು ಉಸಾಬರಿ!

Prabhas ನಟನೆಯ ಸಲಾರ್ ಜತೆ ಡಂಕಿ ಸಿನಿಮಾ ಬಾಕ್ಸಾಫೀಸ್ ಕದನಕ್ಕೆ ಇಳಿಯುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಆಗಿತ್ತು. ಆದ್ರೆ ಆ ಲೆಕ್ಕಾಚಾರ ಬುಡ ಮೇಲಾಗಿದೆ. ಸಲಾರ್ ಫಸ್ಟ್ ಡೇ ಕಲೆಕ್ಷನ್ 50 ಕೋಟಿ ಅಂತ ಅಂದಾಚಿಸಲಾಗಿದ್ದು, ಡಂಕಿ ಡಮಾರ್ ಸಲಾರ್ ಸೂಪರ್ ಅನ್ನೋ ಹಾಗಾಗಿದೆ. ಒಟ್ಟಿನಲ್ಲಿ, ಯಾರೊಬ್ಬರೂ ಕೂಡ ಯಾವತ್ತೂ ಸೂಪರ್ ಸ್ಟಾರ್ ಆಗಿರಲು ಸಾಧ್ಯವೇ ಇಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆದಂತಾಗಿದೆ. 

Follow Us:
Download App:
  • android
  • ios