Asianet Suvarna News Asianet Suvarna News

ಎರಡು ಬಾರಿ 'ನೋ' ಅಂದಿದ್ದರು ಪೃಥ್ವಿರಾಜ್ ಸುಕುಮಾರ್; ಸಲಾರ್‌ನಲ್ಲಿ ನಟಿಸಿದ ರಹಸ್ಯ ರಿವೀಲ್ ಆಯ್ತು!

ಬಹುತೇಕವಾಗಿ ಪರಭಾಷೆಯಿಂದ ಬರುವುದು ಸಹ ಸಣ್ಣ ಪಾತ್ರಗಳೇ. ಹಾಗಾಗಿ ಇದೂ ಸಹ ಸಣ್ಣ ಪಾತ್ರವೇ ಆಗಿರುತ್ತದೆ ಎಂದು ನಾನು ನೋ ಹೇಳಬೇಕು ಎಂದುಕೊಂಡಿದ್ದೆ. 

I told no two times to prashanrh neel salaar movie says prithviraj sukumaran srb
Author
First Published Dec 22, 2023, 7:08 PM IST

ಪ್ರಶಾಂತ್ ನೀಲ್ ನಿರ್ದೇಶನ, ಪ್ರಭಾಸ್-ಪೃಥ್ವಿರಾಜ್ ನಟನೆಯ 'ಸಲಾರ್' ಸಿನಿಮಾ ಇಂದು, 22 ಡಿಸೆಂಬರ್ 2023ರಂದು ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರ್ ಸಹ ನಟಿಸಿದ್ದಾರೆ. ತುಂಬಾ ಪ್ರಾಮುಖ್ಯತೆ ಇರುವ ಪಾತ್ರ ಅವರದ್ದು. ಆದರೆ 'ಸಲಾರ್' ಸಿನಿಮಾದಲ್ಲಿ ನಟಿಸಲು ಎರಡು ಬಾರಿ ನೋ ಎಂದಿದ್ದರಂತೆ ಪೃಥ್ವಿರಾಜ್. ಈ ವಿಷಯವನ್ನು ಅವರು ರಾಜಮೌಳಿ ಮಾಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಸಲಾರ್ ಸಿನಿಮಾದಲ್ಲಿ Prabhas ಜೊತೆಗೆ ಅಷ್ಟೇ ಪ್ರಮುಖ ಪಾತ್ರದಲ್ಲಿ ಮಲಯಾಳಂನ ಸ್ಟಾರ್ ನಟ Prithviraj Sukumaran ಸಹ ನಟಿಸಿದ್ದಾರೆ. ಈ ಚಿತ್ರದಲ್ಲಿ  ಪೃಥ್ವಿರಾಜ್ ಅವರ ವೇಷ-ಭೂಷಣ ನೋಡಿದರೆ ಅವರದ್ದು ವಿಭಿನ್ನ ಶೇಡ್​ಗಳುಳ್ಳ ಪಾತ್ರ ಎಂಬುದು ಖಾತ್ರಿಯಾಗುತ್ತದೆ. ಅವರ ಅತ್ಯುತ್ತಮ ಅಭಿನಯದ ಝಲಕ್​ಗಳು ಟ್ರೈಲರ್​ನಲ್ಲೂ ಕಾಣಿಸುತ್ತವೆ. ಆದರೆ 'ಸಲಾರ್' ಸಿನಿಮಾದಲ್ಲಿ ನಟಿಸಲು ಎರಡು ಬಾರಿ ನೋ ಎಂದಿದ್ದರಂತೆ ಪೃಥ್ವಿರಾಜ್, ಆದರೆ ಕೊನೆಗೆ ಒಪ್ಪಿದ್ದು ಹೇಗೆ? ಈ ಬಗ್ಗೆ ನಟ ಪೃಥ್ವಿರಾಜ್ ಹೇಳಿಕೊಂಡಿದ್ದಾರೆ. 

ಈ ಬಗ್ಗೆ ಹೇಳಿಕೊಂಡಿರುವ ಪೃಥ್ವಿರಾಜ್ ಸುಕುಮಾರ್, 'ನಾನು Prashanth Neel ರನ್ನು ಖುದ್ದಾಗಿ ಭೇಟಿ ಆಗಿರಲಿಲ್ಲ. ಅವರಿಂದ ಮೊದಲಿಗೆ ಆಫರ್ ಬಂದಾಗ, ಅದೂ ಪ್ರಭಾಸ್ ಆ ಸಿನಿಮಾದ ನಾಯಕ ಎಂದಾಗ ನಾನು ನೋ ಹೇಳಲು ರೆಡಿಯಾಗಿದ್ದೆ. ಅದೊಂದು ಚಿಕ್ಕ ಪಾತ್ರ ಎಂದುಕೊಂಡಿದ್ದೆ' ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. 'ನಾನು ಮಲಯಾಳಂ ಚಿತ್ರರಂಗದ ನಟ, ನಮಗೆ ವಿಶಾಲವಾಗಿ ಯೋಚಿಸುವುದು ಅಷ್ಟಾಗಿ ಬರುವುದಿಲ್ಲ. ಪರಭಾಷೆಯ ಆಫರ್ ಬಂದರೂ ಸಹ ಅದು ಸಣ್ಣ ಪಾತ್ರವೇ ಆಗಿರುತ್ತದೆ ಎಂಬುದು ನಮ್ಮ ಮನಸ್ಸಿನಲ್ಲಿ ಬೇರೂರಿ ಬಿಟ್ಟಿದೆ. 

ಬಹುತೇಕವಾಗಿ ಪರಭಾಷೆಯಿಂದ ಬರುವುದು ಸಹ ಸಣ್ಣ ಪಾತ್ರಗಳೇ. ಹಾಗಾಗಿ ಇದೂ ಸಹ ಸಣ್ಣ ಪಾತ್ರವೇ ಆಗಿರುತ್ತದೆ ಎಂದು ನಾನು ನೋ ಹೇಳಬೇಕು ಎಂದುಕೊಂಡಿದ್ದೆ. ಆದರೆ ಒಮ್ಮೆ ಭೇಟಿಯಾಗಿ ಕತೆ ಕೇಳಿದ ಬಳಿಕ ನೋ ಅನ್ನೋಣ ಎಂದು ನಿರ್ಧರಿಸಿದ್ದೆ. ಬಳಿಕ ಹೈದರಾಬಾದ್​ನಲ್ಲಿ ನಾನು ಪ್ರಶಾಂತ್ ನೀಲ್‌​ರನ್ನು ಭೇಟಿಯಾದೆ. ಅವರ ಕಚೇರಿಗೆ ಹೋಗಿದ್ದೆ, ಅಲ್ಲಿ ಅವರು ನನಗೆ ಚಿತ್ರಕತೆ ಕೊಟ್ಟು ಕೆಳಗೆ ಬೇರೆ ಕೆಲಸಕ್ಕೆ ಹೋದರು. ಅಲ್ಲೇ ಪಕ್ಕದಲ್ಲಿ ನೋಡಿದರೆ ದೊಡ್ಡ ಬೋರ್ಡ್​ನಲ್ಲಿ 'ಸಲಾರ್' ಸಿನಿಮಾದ ಅಷ್ಟೂ ಪಾತ್ರಗಳ ಚಾರ್ಟ್ ಇತ್ತು. 

ಕಾಟೇರ ನಿರ್ದೇಶಕ ತರುಣ್ ಸುಧೀರ್ ಭವಿಷ್ಯ ಹೇಳಿದ ಜಗಪತಿ ಬಾಬು; ದರ್ಶನ್ ಬಗ್ಗೆ ಏನು ಹೇಳಿದ್ರು ನೋಡಿ!

ಆ ಚಾರ್ಟ್‌ನಲ್ಲಿ ಪಾತ್ರಗಳ ಹಿನ್ನೆಲೆ ವ್ಯಕ್ತಿತ್ವ ಪರಸ್ಪರರ ಪಾತ್ರಗಳೊಟ್ಟಿಗೆ ಸಂಬಂಧ ಎಲ್ಲವೂ ಬರೆದಿತ್ತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಹೇಳಿದಾಗ ಈ ಪಾತ್ರ ಮಾಡಲೇ ಬೇಕು ಅನ್ನಿಸಿ ಓಕೆ ಎಂದೆ. ಆದರೆ ಬಳಿಕ ಸಮಸ್ಯೆ ಎದುರಾಯ್ತು. ನಾನು ನಟಿಸುತ್ತಿದ್ದ 'ಆಡುಜೀವಿತಂ' ಸಿನಿಮಾದ ಚಿತ್ರೀಕರಣ ಕೋವಿಡ್ ಕಾರಣದಿಂದ ತಡವಾಯ್ತು. ನಾನು ಆ ಸಿನಿಮಾಕ್ಕಾಗಿ 35 ಕೆಜಿ ತೂಕ ಇಳಿಸಿಕೊಂಡಿದ್ದೆ, ಉದ್ದ ಗಡ್ಡ ಬಿಟ್ಟಿದ್ದೆ, ಆ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ನಾನು ಜೋರ್ಡನ್​ಗೆ ಹೋಗಲೇ ಬೇಕಿತ್ತು. 

ಕರೀನಾ ಕಪೂರ್ ಡಯೆಟ್ ಪ್ಲಾನ್ ನೋಡಿದ್ರೆ ತಲೆ ಸುತ್ತಿ ಬೀಳ್ತೀರಾ; ಯಾಕೆ ಬೇಕು ಉಸಾಬರಿ!

ಸಲಾರ್ ಚಿತ್ರದ ನಿರ್ದೇಶಕ ಪ್ರಶಾಂತ್​ರನ್ನು ಭೇಟಿಯಾಗಿ 'ನಿಮ್ಮ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ' ಎಂದೆ. ಪ್ರಶಾಂತ್ ಬಹಳ ಬೇಜಾರು ಮಾಡಿಕೊಂಡರು. ಸ್ವತಃ ನನಗೂ ಬೇಜಾರಾಗಿತ್ತು. ಇಬ್ಬರೂ ದೂರಾಗುತ್ತಿರುವ ಪ್ರೇಮಿಗಳಂತೆ ಮೌನವಾಗಿ ಅಂದು ದೂರಾಗಿದ್ದೆವು, ಆದರೆ ಕೊನೆಗೆ 'ಸಲಾರ್' ಸಿನಿಮಾದ ಚಿತ್ರೀಕರಣವೂ ಸಹ ತಡವಾಯ್ತು, ಹಾಗಾಗಿ ಮತ್ತೆ ನಾನು 'ಸಲಾರ್' ಸಿನಿಮಾದಲ್ಲಿ ನಟಿಸುವಂತಾಯ್ತು' ಎಂದಿದ್ದಾರೆ  ಮಲಯಾಳಂ ನಟ ಪೃಥ್ವಿರಾಜ್. 

Follow Us:
Download App:
  • android
  • ios