Asianet Suvarna News Asianet Suvarna News

ಕರೀನಾ ಕಪೂರ್ ಡಯೆಟ್ ಪ್ಲಾನ್ ನೋಡಿದ್ರೆ ತಲೆ ಸುತ್ತಿ ಬೀಳ್ತೀರಾ; ಯಾಕೆ ಬೇಕು ಉಸಾಬರಿ!

ಸಿನಿಮಾಗೆ ಬೇಕಾದರೆ, ನನ್ ಪಾತ್ರಕ್ಕೆ ಅದು ಅಗತ್ಯವಿದ್ದರೆ ನಾನು ನನ್ನ ದೇಹವನ್ನು ಬೇರೆ ಆಕಾರಕ್ಕೆ ಕೊಂಡೊಯ್ಯುತ್ತೇನೆ. ಕೆಲವೊಮ್ಮೆ ಜೀರೋ ಸೈಜ್ ಕೂಡ ಮಾಡಿದ್ದಿದೆ.

I did not maintain any diet plan says bollywood actress Kareena kapoor
Author
First Published Dec 22, 2023, 1:16 PM IST

ಬಾಲಿವುಡ್ ನಟಿ ಕರೀನಾ ಕಪೂರ್ ಅವರು ತಮ್ಮ ಸೀಕ್ರೆಟ್‌ ಒಂದನ್ನು ಬಿಚ್ಚಿಟ್ಟಿದ್ದಾರೆ. ಕರೀನಾ ಎಂದರೆ ಜೀರೋ ಸೈಜ್, Kareena Kapoor ಎಂದರೆ ಫಿಟ್‌ನೆಸ್ ಮೆಂಟೇನ್ ಮಾಡುವವರು, ಕರೀನಾ ಗ್ಲಾಮರಸ್ ರೋಲ್‌ಗೆ ಹೇಳಿ ಮಾಡಿಸಿದಂತಿದ್ದಾರೆ ಎಂಬುದು ಬಹುತೇಕರ ಅಭಿಪ್ರಾಯ. ಆದರೆ, ಇಲ್ಲಿ ಕರೀನಾ ಹೇಳಿರುವುದು ಅವರ ಬಗ್ಗೆ ಇರುವ ಅಭಿಪ್ರಾಯಕ್ಕೆ ತದ್ವಿರುದ್ಧ. ಕರೀನಾ ಡಯೆಟ್ ಮಾಡಲ್ವಂತೆ, ಕರೀನಾ ಬಯಸಿದ್ದನ್ನೆಲ್ಲ ತಿನ್ನುತ್ತಾರಂತೆ. 

ಹೌದು, ಹಾಗಂತ ನಟಿ Kareena Kapoor ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟಿ ಕರೀನಾ ಅವರು ತಮ್ಮ ಆಹಾರ-ವಿಹಾರದ ಬಗ್ಗೆ ಮಾತನಾಡಿರುವ ವೀಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'ನಾನು ನನ್ನ ಬಾಡಿಯ ಶೇಪ್ ಹಾಗೂ ಸೈಜ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ದೇಹದ ಆಕಾರ, ಬಣ್ಣ, ಸೈಜ್ ಎಲ್ಲದರ ಬಗ್ಗೆ ನನಗೆ ವ್ಯಾಮೋಹ ಇದೆ, ಆದರೆ ಆ ಬಗ್ಗೆ ಬೇಸರವೇನೂ ಇಲ್ಲ. ನನಗೆ ನಾನು ಇರುವ ರೀತಿ ಇಷ್ಟವಾಗಿಯೇ ಇದೆ. ನನ್ನ ಸೈಜ್, ನನ್ನ ಶೇಪ್ ನನಗೆ ಖುಷಿ ಕೊಟ್ಟಿದೆ. 

ಸಲಾರ್ ಸಿನಿಮಾ ಉಗ್ರಂ-ಕೆಜಿಎಫ್ ರೀತಿಯೇ ಇದೆ, ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ; ಪ್ರಶಾಂತ್ ನೀಲ್

ಸಿನಿಮಾಗೆ ಬೇಕಾದರೆ, ನನ್ ಪಾತ್ರಕ್ಕೆ ಅದು ಅಗತ್ಯವಿದ್ದರೆ ನಾನು ನನ್ನ ದೇಹವನ್ನು ಬೇರೆ ಆಕಾರಕ್ಕೆ ಕೊಂಡೊಯ್ಯುತ್ತೇನೆ. ಕೆಲವೊಮ್ಮೆ ಜೀರೋ ಸೈಜ್ ಕೂಡ ಮಾಡಿದ್ದಿದೆ. ಆದರೆ ಅದು ಸಿನಿಮಾದ ಪಾತ್ರದ ಅಗತ್ಯಕ್ಕೆ ಮಾತ್ರ. ಉಳಿದಂತೆ ನಾನು ಚೆನ್ನಾಗಿ ತಿನ್ನುತ್ತೇನೆ, ಯಾವುದೇ ಡಯೆಟ್ ಮಾಡುವುದಿಲ್ಲ. ನನಗೆ ಪಂಜಾಬಿ, ಬಂಗಾಳಿ ಸ್ವೀಟ್ ಸೇರಿದಂತೆ ಎಲ್ಲವೂ ಇಷ್ಟವೇ. ಎಲ್ಲವನ್ನೂ ನಾನು ತುಂಬಾ ಇಷ್ಟಪಟ್ಟು ತಿನ್ನುತ್ತೇನೆ. ನನಗೇನು ಇಷ್ವಟೋ ಎಲ್ಲವನ್ನೂ ನಾನು ತಿನ್ನದೇ ಇರುವುದಿಲ್ಲ. 

ಬಿಗ್ ಬಾಸ್ ಏನೋ ಒಂದಕ್ಕೆ ಭಾರೀ ಜಟಾಪಟಿ; ಏನಾಗ್ತಿದೆ ಅಲ್ಲಿ ಕಿತಾಪತಿ!

ನನ್ನ ಪ್ರಕಾರ ನಾನು ಸೇಲ್ ಮಾಡಬೇಕಿರುವುದು ನನ್ ಟ್ಯಾಲೆಂಟ್ ಹೊರತೂ ನನ್ನ ದೇಹವನ್ನಲ್ಲ. ಗ್ಲಾಮರಸ್ ರೋಲ್‌ಗೆ ಬೇಕಾದಾಗ ಅದಕ್ಕೆ ತಕ್ಕಂತೆ ದೇಹ, ವೇಷಭೂಷಣಗಳನ್ನು ಮಾಡಿಕೊಳ್ಳುತ್ತೇನೆ. ಉಳಿದಂತೆ ನನಗೆ ಬೇಕಾದಾಗ ಬೇಕಾಗಿದ್ದು ತಿನ್ನುತ್ತೇನೆ; ಎಂದಿದ್ದಾರೆ ನಟಿ ಕರೀನಾ ಕಪೂರ್. ಅಂದಹಾಗೆ, ನಟಿ ಕರೀನಾ ಕಪೂರ್ ಇತ್ತೀಚೆಗೆ ಹೊಸ ಬಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ, ಟೈಗರ್ ಶ್ರಾಫ್ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. 

Follow Us:
Download App:
  • android
  • ios