Asianet Suvarna News Asianet Suvarna News

ಶಾರುಖ್ ಜತೆಗೇ ತೆರೆ ಹಂಚಿಕೊಳ್ಳಲಿರುವ ಸುಹಾನಾ ಖಾನ್; ಏನಿದು ಹೊಸ ಸಮಾಚಾರ..!?

ಸುಹಾನ್ ಖಾನ್ ಗೌರಿ ಖಾನ್-ಶಾರುಖ್ ಖಾನ್ ಅವರ ಮುದ್ದಿನ ಮಗಳು. ಸುಹಾನಾಗೆ ಆರ್ಯನ್ ಖಾನ್ ಹೆಸರಿನ ಅಣ್ಣ ಇದ್ದಾನೆ. ಆರ್ಯನ್ ಖಾನ್ ಈಗಾಗಲೇ ಪರಿಚಿತ ಹೆಸರು ಎನ್ನಬಹುದು. ಇದೀಗ, ಅಪ್ಪ ಶಾರುಖ್ ಖಾನ್ ಜತೆಗೂಡಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲಿರುವ ಸುಹಾನಾ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಮೂಡಿದೆ. 

Shah Rukh Khan and daughter Suhana Khan to share screen with action thriller srb
Author
First Published Oct 18, 2023, 7:53 PM IST


ಬಾಲಿವುಡ್ ನಟ ಶಾರುಖ್‌ ಖಾನ್ ಮಗಳು ಸುಹಾನಾ ಖಾನ್ ಬೆಳ್ಳಿತೆರೆಗೆ ಎಂಟ್ರಿ ಕೊಡುವ ಸಮಯ ಸನ್ನಿಹಿತವಾಗಿದೆ. ಯಾರ ಜೋಡಿಯಾಗಿ ಸುಹಾನಾ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ಶಾರುಖ್ ಖಾನ್. ಹೌದು, ಸುಹಾನ್ ಖಾನ್ ಮತ್ತು ಶಾರುಖ್ ಖಾನ್ ಜತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಪಾತ್ರಗಳು ಏನು ಎಂಬುದು ಸದ್ಯಕ್ಕೆ ಸಸ್ಪೆನ್ಸ್! ತಂದೆ-ಮಗಳಾಗಿರುತ್ತಾರೋ ಅಥವಾ ಇನ್ನೇನೋ ಗೊತ್ತಿಲ್ಲ. ಆದರೆ, ಖಂಡಿತವಾಗಿ ಜೋಡಿಯಾಗಿ ರೊಮ್ಯಾನ್ಸ್ ಅಂತ ಮಾಡಲಾರರು ಎಂಬುದು ಹೆಚ್ಚಿನವರ ಅಭಿಮತ. 

ಅದೇನೇ ಇರಲಿ, ನಟ ಶಾರುಖ್ ಮತ್ತು ಸುಹನಾ ಖಾನ್ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರವನ್ನು ಸುಜಯ್ ಘೋಷ್ ನಿರ್ದೇಶನ ಮಾಡಲಿದ್ದು, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ವಿವರಣೆ ಸದ್ಯಕ್ಕೆ ಸಿಕ್ಕಿಲ್ಲವಾದರೂ ಈ ಚಿತ್ರವು ನವೆಂಬರ್ 2024ಕ್ಕೆ ಶುರುವಾಗಿ ಮಾರ್ಚ್ 2025ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ತಂದೆ ಸಿನಿಮಾ ಮೂಲಕವೇ ಬಾಲಿವುಡ್ ಚಿತ್ರರಂಗಕ್ಕೆ ಎಂಡ್ರಿ ಕೊಡಲಿರುವ ಸುಹಾನಾ, ತುಂಬಾ ಲಕ್ಕಿ ಗರ್ಲ್ ಎಂಬುದು ಹಲವರು ಮಾತು. 

National Film Awards: ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ರಕ್ಷಿತ್‌ ಶೆಟ್ಟಿ, ಅನಿರುದ್‌

ಸುಹಾನ್ ಖಾನ್ ಗೌರಿ ಖಾನ್-ಶಾರುಖ್ ಖಾನ್ ಅವರ ಮುದ್ದಿನ ಮಗಳು. ಸುಹಾನಾಗೆ ಆರ್ಯನ್ ಖಾನ್ ಹೆಸರಿನ ಅಣ್ಣ ಇದ್ದಾನೆ. ಆರ್ಯನ್ ಖಾನ್ ಈಗಾಗಲೇ ಪರಿಚಿತ ಹೆಸರು ಎನ್ನಬಹುದು. ಇದೀಗ, ಅಪ್ಪ ಶಾರುಖ್ ಖಾನ್ ಜತೆಗೂಡಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲಿರುವ ಸುಹಾನಾ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಮೂಡಿದೆ. ಕಾರಣ, ಬಾಲಿವುಡ್ ಎಂದರೆ ಅದು ಸಹಜವಾಗಿಯೇ ಹಲವು ಖ್ಯಾತನಾಮರ ಕುಟುಂಬದ ಕುಡಿಗಳು ಸಿನಿಮಾ ಲೋಕಕ್ಕೆ ಕಾಲಿಡುವ ಲೋಕ. ಇದೀಗ ಶಾರುಖ್ ಮಗಳು ಸುಹಾನಾ ಖಾನ್ ಕೂಡ ಹಿಂದಿ ಚಿತ್ರದ ಮೂಲಕವೇ (ಬಾಲಿವುಡ್) ಸಿನಿಪ್ರಯಾಣ ಪ್ರಾರಂಭಿಸಲಿದ್ದಾಳೆ. 

ಯಶವಂತ್ ಸರದೇಶಪಾಂಡೆ ಲವ್ ಅಫೇರ್: ನಿನಗೆ ಗೊತ್ತಿಲ್ದೇ ನಾವಿಬ್ರು 12 ವರ್ಷ ಅದೆಷ್ಟೋ ತುಂಟಾಟ ಆಡಿದ್ವಿ..!

Follow Us:
Download App:
  • android
  • ios