ಯಶವಂತ್ ಸರದೇಶಪಾಂಡೆ ಲವ್ ಅಫೇರ್: ನಿನಗೆ ಗೊತ್ತಿಲ್ದೇ ನಾವಿಬ್ರು 12 ವರ್ಷ ಅದೆಷ್ಟೋ ತುಂಟಾಟ ಆಡಿದ್ವಿ..!
"ನಿನಗೆ ಗೊತ್ತಿಲ್ಲದೇ ನನಗೊಂದು ಲವ್ ಅಫೇರ್ ಇತ್ತು. ಅದನ್ನು ನಾನು ನಿನಗೆ ಹೇಳಿರಲೇ ಇಲ್ಲ, ಕಾರಣ ನಿನಗೆ ತುಂಬಾ ನೋವಾಗುತ್ತೆ ಎಂದು! ನಾನು ಮತ್ತು ಆಕೆ ಒಂದಿನ ಮೀಟ್ ಆದ್ವಿ, ಕದ್ದು ಮುಚ್ಚಿ ವಾಕ್ ಹೋಗ್ತಾ ಇದ್ವಿ. ನಮ್ಮದೇ ಆದ ರೀತಿಯಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆ ನಡೆಯುತ್ತಿತ್ತು. ನಿನಗೆ ಗೊತ್ತಿಲ್ಲದೇ ಸಾವಿರಾರು ಬಾರಿ ನಾನು ಅವಳನ್ನು ಭೇಟಿಯಾಗಿ ತುಂಟಾಟ ಮಾಡಿದೀನಿ..

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ.1 ರಿಯಾಲಿಟಿ ಶೋದಲ್ಲಿ ಭಾನುವಾರ ಪ್ರಸಾರವಾದ ಸಂಚಿಕೆ ಭಾರೀ ವೈರಲ್ ಆಗಿದೆ. ಕಲಾವಿದರಾದ ಯಶವಂತ್ ಸರದೇಶಪಾಂಡೆ ಮತ್ತು ಮಾಲತಿ ಸರದೇಶಪಾಂಡೆ ಜೋಡಿಯ ಸಂಚಿಕೆಯಲ್ಲಿ ಯಶ್ವಂತ್ ಹೇಳಿದ ಲವ್ ಅಫೇರ್ ಒಂದು ಅಲ್ಲಿದ್ದವರ ಮನಸ್ಸನ್ನು ಮಾತ್ರವಲ್ಲ, ಟಿವಿ ವೀಕ್ಷಕರ ಹೃದಯನ್ನೂ ಕಲಕಿಬಿಟ್ಟಿದೆ. ಅದೂ ಕೂಡ ತನ್ನ ಹೆಂಡತಿ ಮುಂದೆಯೇ ಯಶ್ವಂತ್ ತಮ್ಮ ಲವ್ ಅಫೇರ್ ಸ್ಟೋರಿಯನ್ನು ಹೇಳುತ್ತಿದ್ದರೆ, ಜಡ್ಜಸ್ ಮತ್ತು ವೀಕ್ಷಕರು ಎಲ್ಲರೂ ಕಕ್ಕಾಬಿಕ್ಕಿಯಾಗಿ ಒಮ್ಮೆ ಯಶ್ವಂತ್ ಹಾಗೂ ಇನ್ನೊಮ್ಮೆ ಮಾಲತಿ ಅವರನ್ನು ನೋಡತೊಡಗಿದ್ದರು.
"ನಿನಗೆ ಗೊತ್ತಿಲ್ಲದೇ ನನಗೊಂದು ಲವ್ ಅಫೇರ್ ಇತ್ತು. ಅದನ್ನು ನಾನು ನಿನಗೆ ಹೇಳಿರಲೇ ಇಲ್ಲ, ಕಾರಣ ನಿನಗೆ ತುಂಬಾ ನೋವಾಗುತ್ತೆ ಎಂದು! ನಾನು ಮತ್ತು ಆಕೆ ಒಂದಿನ ಮೀಟ್ ಆದ್ವಿ, ಕದ್ದು ಮುಚ್ಚಿ ವಾಕ್ ಹೋಗ್ತಾ ಇದ್ವಿ. ನಮ್ಮದೇ ಆದ ರೀತಿಯಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆ ನಡೆಯುತ್ತಿತ್ತು. ನಿನಗೆ ಗೊತ್ತಿಲ್ಲದೇ ಸಾವಿರಾರು ಬಾರಿ ನಾನು ಅವಳನ್ನು ಭೇಟಿಯಾಗಿ ತುಂಟಾಟ ಮಾಡಿದೀನಿ.. ನಿನಗೆ ಗೊತ್ತಿಲ್ದೇ ನಾವಿಬ್ರು ಬರೋಬ್ಬರಿ 12 ವರ್ಷಗಳ ಕಾಲ ಅದೆಷ್ಟೋ ಆಟ ಆಡಿದ್ವಿ. ಆದರೆ, ಫೆಬ್ರುವರಿ 2023ರಲ್ಲಿ ಆಕೆ ನನ್ನಿಂದ ದೂರ ಹೋರಟುಹೋದ್ಳು" ಹೀಗೆ ತೀವ್ರ ನೋವು ಬೆರೆಸಿ ಯಶ್ವಂತ್ ಸರದೇಶಪಾಂಡೆ ಮಾತನ್ನಾಡಿದರು.
ಅಬ್ಬಬ್ಬಾ!ಎರಡು ವಿಡಿಯೋ ಮಾಡಲು ಊರಾಚೆ 11 ಬಟ್ಟೆ ಬದಲಾಯಿಸಿದ ಅನುಪಮಾ ಗೌಡ
ಆದರೆ, ಸ್ವತಃ ತನ್ನ ಗಂಡನೇ ಅಷ್ಟು ದೊಡ್ಡ ವೇದಿಕೆಯಲ್ಲಿ "ನಿನಗೆ ಹೇಳದೇ ಮಾಡಿದ್ದು, ನಮ್ಮದು ಅನೈತಿಕ ಸಂಬಂಧ" ಎಂಬಂತೆ ಲವ್ ಅಫೇರ್ ಸ್ಟೋರಿಯೊಂದನ್ನು ಹೇಳುತ್ತಿದ್ದರೆ, ಅಲ್ಲಿದ್ದ ಜಡ್ಜ್ ಗಳು ಹಾಗೂ ಉಳಿದ ವೀಕ್ಷಕರ ಮುಖದಲ್ಲಿ ಹೇಳಲಾರದ ಗಾಬರಿ ಮತ್ತು ನೋವು ಏಕಕಾಲದಲ್ಲಿ ಮೂಡಿದ್ದರೂ, ಮಾಲತಿ ಮುಖದಲ್ಲಿ ಯಾವುದೇ ಶಾಕ್ ಫೀಲ್ ಇರಲಿಲ್ಲ. ಜತೆಗೆ, ಅವರ ಮಗಳು ದೊಸ್ತಿಯ ಮುಖದಲ್ಲಿ ಕೂಡ ಯಾವ ಅಚ್ಚರಿಯಾಗಲೇ ಶಾಕ್ ಆಗಲಿ ಕಾಣುತ್ತಿರಲಿಲ್ಲ. ಆದರೆ, ಯಶವಂತ್ ಸರದೇಶಪಾಂಡೆ ಮಾತಿನ ಕೊನೆಯಲ್ಲಿ ಅದೇನೆಂದು ರಿವೀಲ್ ಆದಾಗ, ಅಲ್ಲಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟರು.
BBK10: ದೊಡ್ಮನೆಯಲ್ಲಿ ಭಾರೀ ಕಾದಾಟ, 'ರೌಡಿಸಂ' ನಡೆಯಲ್ಲ ಎಂದು ವಿನಯ್‌ಗೆ ಕೂಗಾಡಿದ ತನಿಷಾ
ಮಾಲತಿಗೆ ಗೊತ್ತಿಲ್ಲದೇ ಯಶವಂತ್ ಸರದೇಶಪಾಂಡೆ ಮಾಡಿದ್ದ ಲವ್ ಸಂಬಂಧ 'ಗೋಲ್ಡಿ' ಎಂಬ ಬೆಕ್ಕಿನ ಜತೆಗಾಗಿತ್ತು. 12 ವರ್ಷ ಅದು ಅವರ ಮನೆಯಲ್ಲಿ ಆ ಕುಟುಂಬದ ಜತೆಗಿತ್ತು. 'ಮುಚ್ಚಿಟ್ಟಿದ್ದ 'ಗೋಲ್ಡಿ' ಎಂಬ ಹೆಸರನ್ನು ಗಂಡ ಪೇಪರ್ ತೆಗೆದು ಓಪನ್ ಮಾಡಿ ತೋರಿಸಿದಾಗ ಸ್ವತಃ ಮಾಲತಿ ಅವರೂ ಕಣ್ಣೀರಾದರು. ಮಗಳು ದೋಸ್ತಿ ಕೂಡ ನೋವಿನಲ್ಲೂ ಮುಗುಳ್ನಗುತ್ತಿದ್ದರು. ಅಲ್ಲಿದ್ದ ಬಿಗುವಿನ ವಾತಾವರಣ ತಿಳಿಯಾಗಿ ಮಡುಗಟ್ಟಿದ್ದ ನೋವಿಗೆ ಅಂತ್ಯವೊಂದು ಗೋಚರಿಸಿತು. ಆದರೆ ಜೋಡಿ ನಂ 1 ಸಂಚಿಕೆ ಮುಗಿದು ಮೂರು ದಿನವಾದರೂ ಇನ್ನೂ ಆ ಸಂಚಿಕೆ 'ಹ್ಯಾಂಗೋವರ್'ನಿಂದ ಟಿವಿ ವೀಕ್ಷಕರು ಹೊರಬಂದಿಲ್ಲ ಎಂದರೆ, ಆ ಸಂಚಿಕೆ ಅದೆಷ್ಟು ಜನಮನ ಕಲಕಿದೆ ಎಂಬುದನ್ನು ಎಲ್ಲರೂ ಊಹಿಸಬಹುದು ಅಲ್ಲವೇ?