National Film Awards: ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ರಕ್ಷಿತ್ ಶೆಟ್ಟಿ, ಅನಿರುದ್
69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ನವದೆಹಲಿಯಲ್ಲಿ ನಡೆಯಿತು. ಚಾರ್ಲಿ ಚಿತ್ರದ ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ಬಾಳೆ ಬಂಗಾರ ಸಾಕ್ಷ್ಯಚಿತ್ರಕ್ಕಾಗಿ ಅನಿರುದ್ ಜತ್ಕರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನವದೆಹಲಿ (ಅ.17): 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪ್ರಡೆದ ಚಾರ್ಲಿ 777 ಚಿತ್ರದ ನಿರ್ಮಾಪಕ ರಕ್ಷಿತ್ ಶೆಟ್ಟಿ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ರಜತ ಕಮಲ ಪ್ರಮಾಣ ಪತ್ರ ಹಾಗೂ 1 ಲಕ್ಷ ರೂಪಾಯಿ ಬಹುಮಾನವನ್ನು ಒಳಗೊಂಡಿತ್ತು. ಕಿರಣ್‌ರಾಜ್ ಕೆ ನಿರ್ದೇಶನದ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವ ಪರಮ್ಹ ಸ್ಟೂಡಿಯೋಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ಮಾಣ ಮಾಡಿತ್ತು. ಇನ್ನು ಸಾಕ್ಷ್ಯಚಿತ್ರ(ನಾನ್-ಫೀಚರ್)ಗಳ ವಿಶೇಷ ಉಲ್ಲೇಖವಾಗಿ ಅನಿರುದ್ ಜತ್ಕರ್ ಅವರ ಬಾಳೆ ಬಂಗಾರ ಪ್ರಶಸ್ತಿ ಗೆದ್ದಿತ್ತು. ಈ ಕುರಿತಾದ ಪ್ರಮಾಣಪತ್ರವನ್ನು ಅನಿರುದ್ ಅವರು ಸ್ವೀಕರಿಸಿದರು. ಬಾಳೆ ಬಂಗಾರ ಭಾರತಿ ವಿಷ್ಣುವರ್ಧನ್ ಅವರ ಕುರಿತಾಗಿ ಇರುವ ಸಾಕ್ಷ್ಯ ಚಿತ್ರವಾಗಿದೆ. ಭಾರತಿ ವಿಷ್ಣುವರ್ಧನ್ ಕುರಿತ 'ಬಾಳೆ ಬಂಗಾರ' ಸಾಕ್ಷ್ಯ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಅನಿರುದ್ಧ್ ಅವರ ಪರಿಕಲ್ಪನೆ, ಬರವಣಿಗೆ ಮತ್ತು ನಿರ್ದೇಶನ ಇರುವ ಈ ಚಿತ್ರ ಎರಡೂವರೆ ಗಂಟೆಗಳ ಅವಧಿಯಲ್ಲಿ ಭಾರತಿ ಅವರ ಶಾಲೆ, ಕಾಲೇಜು, ಚಲನಚಿತ್ರಗಳು, ಮದುವೆ, ಜೀವನ ಹೋರಾಟಗಳು ಮತ್ತು ಇತರ ವಿಷಯಗಳನ್ನು ಅಮೂಲಾಗ್ರವಾಗಿ ಸೆರೆಹಿಡಿಯಲಾಗಿದೆ.
ಇನ್ನು 2021ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ರಾಕೆಟ್ರಿ: ನಂಬಿ ಎಫೆಕ್ಟ್ ಪರವಾಗಿ ನಟ ಹಾಗೂ ನಿರ್ದೇಶಕ ಆರ್. ಮಾಧವನ್ ಪ್ರಶಸ್ತಿ ಪಡೆದರು. ಇದು ಸ್ವರ್ಣ ಕಮಲ ಪ್ರಶಸ್ತಿ ಮತ್ತು 2.50 ಲಕ್ಷ ರೂಪಾಯಿ ನಗದಿ ಹಣವನ್ನು ಹೊಂದಿತ್ತು. ಅತ್ಯುತ್ತಮ ನಟ ವಿಭಾಗದಲ್ಲಿ ಪುಷ್ಪಾ: ದ ರೈಸ್ ಭಾಗ-1 ಸಿನಿಮಾದ ನಟನೆಗಾಗಿ ಅಲ್ಲು ಅರ್ಜುನ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು ಗಂಗೂಬಾಯಿ ಕಥಿಯಾವಾಡಿ ಸಿನಿಮಾಕ್ಕಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಕೃತಿ ಸನೊನ್ ಅವರೊಂದಿಗೆ ಹಂಚಿಕೊಂಡರು. ಕೃತಿ ಸನನ್ 'ಮಿಮಿ' ಚಿತ್ರಕ್ಕಾಗಿ ಈ ಪ್ರಶಸ್ತಿ ಗೆದ್ದಿದ್ದಾರೆ. ಆಲಿಯಾ ಭಟ್ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವ ವೇಳೆ ಅವರ ಪತಿ ಹಾಗೂ ನಟ ರಣಬೀರ್ ಕಪೂರ್ ಫೋಟೋ ತೆಗೆಯುತ್ತಿರುವುದು ವಿಶೇಷವಾಗಿತ್ತು. ನಟಿ ಕೃತಿ ಸನನ್ ಕೂಡ ವೈಕ್ತಿಕವಾಗಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು.
ಹಿರಿಯ ನಟಿ ವಹೀದಾ ರೆಹಮಾನ್ ಕೂಡ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಸೆಪ್ಟೆಂಬರ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದರು. "ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ಸಂಸತ್ತು ಅಂಗೀಕರಿಸಿದ ಸಮಯದಲ್ಲಿ, ಅವರಿಗೆ (ರೆಹಮಾನ್) ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿರುವುದು ಭಾರತೀಯ ಚಿತ್ರರಂಗದ ಪ್ರಮುಖ ಮಹಿಳೆಯೊಬ್ಬರಿಗೆ ಸೂಕ್ತವಾದ ಗೌರವವಾಗಿದೆ..." ಎಂದು ಅವರು ಟ್ವೀಟ್ ಮಾಡಿದ್ದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟಿ ವಹೀದಾ ರೆಹಮಾನ್ ಪ್ರಶಸ್ತಿ ಸ್ವೀಕರಿಸುವ ವೇಳೆ ಭಾವುಕರಾಗಿದ್ದು ಕಂಡು ಬಂದಿದೆ.
National Film Awards: 777 ಚಾರ್ಲಿಗೆ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿ, ಇಲ್ಲಿದೆ ನೋಡಿ ವಿಜೇತರ ಲಿಸ್ಟ್
ಶೇರ್‌ಶಾ ಚಿತ್ರದ ನಿರ್ದೇಶಕ ವಿಷ್ಣುವರ್ಧನ್ ಮತ್ತು ನಿರ್ಮಾಪಕ ಕರಣ್ ಜೋಹರ್ ಅವರು ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸ್ವೀಕರಿಸಿದರು.ಇನ್ನು ಆರ್‌ಆರ್‌ಆರ್ ಚಿತ್ರಕ್ಕಾಗಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅತ್ಯುತ್ತಮ ಜನಪ್ರಿಯ ಚಿತ್ರದ ಪ್ರಶಸ್ತಿ ಸ್ವೀಕರಿಸಿದರು. ಆರ್‌ಆರ್‌ಆರ್ ಚಿತ್ರ 6 ರಾಷ್ಟ್ರೀಯ ಪ್ರಶಸ್ತಿಯನ್ನು ಜಯಿಸಿದೆ.
National Film Awards: ಆರ್‌ಆರ್‌ಆರ್‌ಗೆ ಬಂಪರ್, ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಶನೋನ್‌ಗೆ ಪ್ರಶಸ್ತಿ!