ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆ ಫೆ.26ರಂದು ನಡೆಯಲಿದ್ದು, ಇಬ್ಬರೂ ಸೋಮವಾರ ಬೆಳಿಗ್ಗೆ ರಾಜಸ್ಥಾನದ ಉದಯಪುರಕ್ಕೆ ಬಂದಿಳಿದಿದ್ದಾರೆ. ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಇಬ್ಬರ ಮದುವೆ ನಡೆಯಲಿದೆ

ಜೈಪುರ: ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆ ಫೆ.26ರಂದು ನಡೆಯಲಿದ್ದು, ಇಬ್ಬರೂ ಸೋಮವಾರ ಬೆಳಿಗ್ಗೆ ರಾಜಸ್ಥಾನದ ಉದಯಪುರಕ್ಕೆ ಬಂದಿಳಿದಿದ್ದಾರೆ.

ಐಟಿಸಿ ಹೋಟೆಲ್‌ನಲ್ಲಿ ಇಬ್ಬರ ಮದುವೆ

ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಇಬ್ಬರ ಮದುವೆ ನಡೆಯಲಿದೆ. ಮೂಲಗಳ ಪ್ರಕಾರ ಇಬ್ಬರ ಮದುವೆ ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, 100 ಮಂದಿಗಷ್ಟೇ ಆಹ್ವಾನ ನೀಡಲಾಗಿದೆ. 50 ಮಂದಿ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಭಾಗವಹಿಸಲಿದ್ದಾರೆ. ಸಿನಿಮಾ ರಂಗದ ಪ್ರಮುಖ ತಾರೆಯರು ಭಾಗವಹಿಸುವ ಸಾಧ್ಯತೆ ಕಡಿಮೆ.

ಭಾನುವಾರವಷ್ಟೇ ಜೋಡಿ ಮೊದಲ ಬಾರಿಗೆ ಅಧಿಕೃತವಾಗಿ ಹೇಳಿಕೊಂಡಿದ್ದರು.

ರಶ್ಮಿಕಾ ಮತ್ತು ವಿಜಯ್‌ ಇಬ್ಬರೂ ಪ್ರೀತಿಯಲ್ಲಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ನಾನಾ ವದಂತಿಗಳ ನಡುವೆಯೇ ಭಾನುವಾರವಷ್ಟೇ ಜೋಡಿ ಮೊದಲ ಬಾರಿಗೆ ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು.