ನಮ್ಮಲ್ಲಿ ಅಣ್ಣ ಯಾರೆಂದು ಗೊತ್ತಿಲ್ಲ; ಸಲ್ಮಾನ್ ಬಗ್ಗೆ ಶಾರುಖ್ ಹೀಗಂದಿದ್ದೇಕೆ?
ಬಾಲಿವುಡ್ ಖಾನ್‌ಗಳಾದ ಸಲ್ಮಾನ್ ಖಾನ್ (salman Khan) ಮತ್ತು ಶಾರುಖ್ ಖಾನ್ (Shah Rukh Khan) ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸಲ್ಮಾನ್ ಖಾನ್ ಮತ್ತು ಶಾರುಖ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಹೆಚ್ಚಾಗಿ ಇಬ್ಬರು ಸಹೋದರರಂತೆ ಇದ್ದಾರೆ. ಆಗಾಗ ಈ ಬಗ್ಗೆ ಸಲ್ಮಾನ್ ಅಥವಾ ಶಾರುಖ್ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಶಾರುಖ್ ಖಾನ್ ಗೆಳೆಯ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಖಾನ್‌ಗಳಾದ ಸಲ್ಮಾನ್ ಖಾನ್ (salman Khan) ಮತ್ತು ಶಾರುಖ್ ಖಾನ್ (Shah Rukh Khan) ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸಲ್ಮಾನ್ ಖಾನ್ ಮತ್ತು ಶಾರುಖ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಹೆಚ್ಚಾಗಿ ಇಬ್ಬರು ಸಹೋದರರಂತೆ ಇದ್ದಾರೆ. ಆಗಾಗ ಈ ಬಗ್ಗೆ ಸಲ್ಮಾನ್ ಅಥವಾ ಶಾರುಖ್ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಶಾರುಖ್ ಖಾನ್ ಗೆಳೆಯ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ಬಣ್ಣ ಹಚ್ಚುತ್ತಿದ್ದು ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಶಾರುಖ್ ಖಾನ್ ಬಹುನಿರೀಕ್ಷೆಯ ಪಠಾಣ್ (Phatan) ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿದ್ದ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone)ನಟಿಸಿದ್ದಾರೆ. ಜಾನ್ ಅಬ್ರಹಾಂ (John Abraham) ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಅಂದರೆ ಈ ಸಿನಿಮಾದಲ್ಲಿ ಬಾಲಿವುಡ್‌ನ ಮತ್ತೋರ್ವ ಸ್ಟಾರ್ ನಟ ಸಲ್ಮಾನ್ ಖಾನ್ ಕೂಡ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಶಾರುಖ್ ಅವರೇ ಅಧಿಕೃತಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಆಸ್ಕ್ ಸೆಷನ್ ನಡೆಸಿದ್ದ ಶಾರುಖ್‌ಗೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದುಬಂದಿದೆ. ಅಭಿಮಾನಿಯೊಬ್ಬ ಸಲ್ಮಾನ್ ಖಾನ್ ಜೊತೆಗಿನ ಅನುಭವ ಹೇಗಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶಾರುಖ್ ಖಾನ್ ದೀರ್ಘವಾಗಿ ಉತ್ತರಿಸಿದ್ದಾರೆ.
ಸಲ್ಮಾನ್ ಖಾನ್ ಜೊತೆ ಯಾವುದೇ ಕೆಲಸದ ಅನುಭವವಿಲ್ಲ. ಕೇವಲ ಪ್ರೀತಿ, ಗೆಳೆತನ ಮತ್ತು ಸಹೋದರತ್ವ ಮಾತ್ರ ಇರುವುದು ಎಂದು ಹೇಳಿದ್ದಾರೆ. 'ಸಲ್ಮಾನ್ ಖಾನ್ ಜೊತೆ ಯಾವುದೇ ಕೆಲಸದ ಅನುಭವವಿಲ್ಲ. ಕೇವಲ ಪ್ರೀತಿ, ಗೆಳೆತನ, ಸಹೋದರತ್ವದ ಅನುಭವ ಮಾತ್ರ ಇರುವುದು. ಹಾಗಾಗಿ ಅವರ ಜೊತೆ ಕೆಲಸ ಮಾಡಿದಾಗಲೆಲ್ಲ ಅದ್ಭುತವಾದ ಅನುಭವವಾಗಿರುತ್ತದೆ' ಎಂದು ಹೇಳಿದರು.
ಇದೇ ಸಮಯದಲ್ಲಿ ಕರಣ್ ಅರ್ಜುನ್ ಹೊರತುಪಡಿಸಿ ಸಲ್ಮಾನ್ ಅವರೊಂದಿಗೆ ಪೂರ್ಣ ಪ್ರಮಾಣದ ಚಲನಚಿತ್ರವನ್ನು ಮಾಡಿಲ್ಲ ಎಂದು ಶಾರುಖ್ ಹೇಳಿದರು.
ಶಾರುಖ್ ಜೊತೆಯ ಲೈಂಗಿಕ ಸಂಬಂಧದ ವಂದತಿಗಳ ಬಗ್ಗೆ ಬಾಯಿಬಿಟ್ಟ ಕರಣ್ ಜೋಹರ್
'ನಾವು ಕರಣ್ ಅರ್ಜುನ್ ಹೊರತುಪಡಿಸಿ ಪೂರ್ಣ ಪ್ರಮಾಣದ ಚಿತ್ರವನ್ನು ಒಟ್ಟಿಗೆ ಮಾಡಿಲ್ಲ, ಅದು ಕೂಡ ಪೂರ್ಣಪ್ರಮಾಣದಲ್ಲಿ ಇರಲಿಲ್ಲ. ಏಕೆಂದರೆ ನಾವು ಅದರಲ್ಲಿ ಹೆಚ್ಚು ಕಾಲ ಒಟ್ಟಿಗೆ ಇರಲಿಲ್ಲ. ನಾವು ವರ್ಷದಲ್ಲಿ ನಾಲ್ಕೈದು ದಿನ ಒಟ್ಟಿಗೆ ಕೆಲಸ ಮಾಡುತ್ತೇವೆ. ಕಳೆದ ಎರಡು ವರ್ಷಗಳು ಅದ್ಭುತವಾಗಿತ್ತು. ಏಕೆಂದರೆ ನಾನು ಅವರ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಅವರು ನನ್ನ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಹೇಳಿದರು.
ಸಲ್ಮಾನ್ ಜೊತೆಗಿನ ಬಾಂಧವ್ಯದ ಬಗ್ಗೆಯೂ ಮಾತನಾಡಿದ್ದಾರೆ. 'ಅವರು ಸಹೋದರರಂತೆ. ನಮಗೆ ಅಣ್ಣ ಯಾರು ಎಂದು ಇನ್ನು ತಿಳಿದಿಲ್ಲ. ನಾವು ಬೇರೆ ಬೇರೆ ದಿನಗಳಲ್ಲಿ ಒಬ್ಬೊಬ್ಬರಿಗೆ ಅಣ್ಣನಂತೆ ವರ್ತಿಸುತ್ತೇವೆ. ಯಾರು ತಪ್ಪು ಮಾಡಿದರೂ ಸಹ ಮತ್ತೊಬ್ಬರು ಅಲ್ಲಿ ಇರುತ್ತೇವೆ' ಎಂದು ಹೇಳಿದರು.
ಚಿತ್ರರಂಗದಲ್ಲಿ ಶಾರುಖ್‌ಗೆ 30 ವರ್ಷ; 'ಪಠಾಣ್' ಲುಕ್ ಶೇರ್ ಮಾಡಿದ ಕಿಂಗ್ ಖಾನ್ ಮೇಲೆ ಕನ್ನಡಿಗರ ಬೇಸರ
ಶಾರುಖ್ ಖಾನ್ ಸದ್ಯ ಪಠಾಣ್ ಜೊತೆಗೆ ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಜವಾನ್ ಎಂದು ಟೈಟಲ್ ಇಡಲಾಗಿದ್ದು ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ವಿಭಿನ್ನ ಗೆಟಪ್ ನಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿರುವ ಶಾರುಖ್ ಪಠಾಣ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದರು.