ಚಿತ್ರರಂಗದಲ್ಲಿ ಶಾರುಖ್‌ಗೆ 30 ವರ್ಷ; 'ಪಠಾಣ್' ಲುಕ್ ಶೇರ್ ಮಾಡಿದ ಕಿಂಗ್ ಖಾನ್ ಮೇಲೆ ಕನ್ನಡಿಗರ ಬೇಸರ
;ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಶಾರುಖ್ ಪಠಾಣ್ (Pathan Look) ಸಿನಿಮಾದ ಫಸ್ಟ್ ಲುಕ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪಠಾಣ್ ಲುಕ್ ನೋಡಿ ಶಾರುಖ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಕನ್ನಡಿಗರಿಗೆ ಬೇಸರ ಮೂಡಿಸಿದೆ.
ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್ (Shah Rukh Khan) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 30 ವರ್ಷಗಳು ಕಳೆದಿವೆ (Completes 30 Years). ದೀವಾನ್ (Deewan) ಸಿನಿಮಾ ಮೂಲಕ ಶಾರುಖ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಬಳಿಕ ಶಾರುಖ್ ಬಾಲಿವುಡನಲ್ಲಿಅನೇಕ ಸಿನಿಮಾಗಳಲ್ಲಿ ನಟಿಸಿದರು. 30 ವರ್ಷಗಳ ಸಿನಿ ಪಯಣದಲ್ಲಿ ಶಾರುಖ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ. 30 ವರ್ಷ ಪೂರೈಸಿದ ಈ ಸಮಯದಲ್ಲಿ ಶಾರುಖ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಶಾರುಖ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ.
ಶಾರುಖ್ ಸಿನಿಮಾ ಮಾಡದೇ ಅನೇಕ ವರ್ಷಗಳಾಗಿತ್ತು. ಝೀರೋ ಸಿನಿಮಾ ಸೋಲಿನ ಬಳಿಕ ಶಾರುಖ್ ಬಣ್ಣ ಹಚ್ಚುವುದನ್ನೇ ಬಿಟ್ಟಿದ್ದರು. ಅನೇಕ ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಝೀರೋ ಸಿನಿಮಾ ರಿಲೀಸ್ ಆಗಿ 4 ವರ್ಷಗಳಾಗಿದೆ. ಸಾಲು ಸಾಲು ಸೋಲುಗಳಿಂದ ಕಂಗಾಲಾಗಿದ್ದ ಶಾರುಖ್ ಅನೇಕ ವರ್ಷಗಳ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಶಾರುಕ್ ನಟಿಸುತ್ತಿದ್ದಾರೆ. ಸದ್ಯ 30 ವರ್ಷ ಪೂರೈಸಿದ ಸಂಭ್ರಮದಲ್ಲಿ ಶಾರುಖ್ ಪಠಾಣ್ (Pathan Look) ಸಿನಿಮಾದ ಫಸ್ಟ್ ಲುಕ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಪಠಾಣ್ ಲುಕ್ ನೋಡಿ ಶಾರುಖ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಕನ್ನಡಿಗರಿಗೆ ಬೇಸರ ಮೂಡಿಸಿದೆ. ಹೌದು, ಶಾರುಖ್ ಪಠಾಣ್ ಸಿನಿಮಾ ಹಿಂದಿ ಜೊತೆಗೆ ದಕ್ಷಿಣ ಭಾರತದಲ್ಲಿ ತೆಲುಗು ಮತ್ತು ತಮಿಳಿನಲ್ಲಿ ತೆರೆ ಬರುತ್ತಿದೆ. ಕನ್ನಡದಲ್ಲಿ ಸಿನಿಮಾ ಬರ್ತಿಲ್ಲ. ಹಾಗಾಗಿ ಇದು ಕನ್ನಡ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕನ್ನಡವನ್ನು ಕಡೆಗಣಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕುತ್ತಿದ್ದಾರೆ.
Jawan Teaser; ಶಾರುಖ್ ನೋಡಿ ಫ್ಯಾನ್ಸ್ ಫಿದಾ, ಕನ್ನಡದಲ್ಲೂ ಬರ್ತಿದೆ ಕಿಂಗ್ ಖಾನ್- ಅಟ್ಲೀ ಸಿನಿಮಾ
ಇತ್ತೀಚಿಗಷ್ಟೆ ರಿಲೀಸ್ ಆದ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕೂಡ ಕನ್ನಡದಲ್ಲಿ ರಿಲೀಸ್ ಆಗಿರಲಿಲ್ಲ. ಹಾಗಾಗಿ ವಿಕ್ರಮ್ ಸಿನಿಮಾದ ವಿರುದ್ಧ ಕನ್ನಡ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಬಿಡುಗಡೆ ವೇಳೆ ವಿರೋಧ ವ್ಯಕ್ತವಾಗಿತ್ತು. ಇದೀಗ ಶಾರುಖ್ ಕೂಡ ಕನ್ನಡ ಕಡಗಣಿಸಿರುವುದು ಬೇಸರ ಮೂಡಿದೆ. ಸಿನಿಮಾ ಬಿಡುಗಡೆ ವೇಳೆ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
Jawaan; ಹಾಲಿವುಡ್ ಸಿನಿಮಾ ಕದ್ದಿದ್ದಾರಾ ಅಟ್ಲೀ? ಶಾರುಖ್ ಹೊಸ ಚಿತ್ರದ ಲುಕ್ ಹಿಗ್ಗಾಮುಗ್ಗಾ ಟ್ರೋಲ್
ಪಠಾಣ್ ಸಿನಿಮಾದ ಪೋಸ್ಟರ್ ಜೊತೆಗೆ ಬಿಡುಗಡೆ ದಿನಾಂಕ ಸಹ ರಿವೀಲ್ ಆಗಿದೆ. ಪಠಾಣ್ ಸಿನಿಮಾ ಮುಂದಿನ ವರ್ಷ 2023 ಜನವರಿ 25ರಂದು ರಿಲೀಸ್ ಆಗಲಿದೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಪಡಿಕೋಣೆ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಜಾನ್ ಅಬ್ರಾಹಂ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ ಬಂಡವಾಳ ಹೂಡಿದೆ. ಈ ಸಿನಿಮಾ ಜೊತೆಗೆ ಶಾರುಖ್ ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮದಲ್ಲಿ ಶಾರುಖ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಜ್ ಕುಮಾರ್ ಜೊತೆಯೂ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ.