Asianet Suvarna News Asianet Suvarna News

ಶಾರುಖ್​ ಖಾನ್​ ಬಾಯಲ್ಲಿ ಸಾವಿನ ಮಾತು! ನಟಿನಿಗೆ ಇಂಥದ್ದೊಂದು ಅಂತಿಮ ಬಯಕೆ ಇದೆಯಂತೆ ಕೇಳಿ...

ಕೊನೆಯ ಉಸಿರು ಇರುವವರೆಗೂ ನಟನಾಗಿಯೇ ಸಾಯುವ ಬಯಕೆ ವ್ಯಕ್ತಪಡಿಸಿರುವ ನಟ ಶಾರುಖ್​ ಖಾನ್​, ತಮ್ಮ ಸಾವಿನ ಬಗ್ಗೆ ಹೇಳಿದ್ದೇನು? 
 

Shah Rukh Khan about how his death should be while doing movie shooting suc
Author
First Published Oct 18, 2024, 5:43 PM IST | Last Updated Oct 18, 2024, 5:43 PM IST

ಕೆಲವು ದಶಕಗಳಿಂದ ಬಾಲಿವುಡ್​ ಆಳುತ್ತಿರುವ ಖಾನ್​ ತ್ರಯರ ಪೈಕಿ ಶಾರುಖ್​ ಖಾನ್​ ಇಂದಿಗೂ ಟಾಪ್​-1ನಲ್ಲಿಯೇ ಇದ್ದಾರೆ. ಕಳೆದ ಮೂರು ದಶಕಗಳಿಂದ ಕಿಂಗ್​ ಖಾನ್​ ಎಂದೇ ಖ್ಯಾತಿ ಪಡೆದು, ಒಂದರ ಮೇಲೊಂದು ಬ್ಲಾಕ್​ ಬಸ್ಟರ್​ ಚಿತ್ರಗಳನ್ನು ಕೊಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಫ್ಲಾಪ್​  ಮೇಲೆ ಫ್ಲಾಪ್​ ಚಿತ್ರ ನೀಡಿ ಮೌನಕ್ಕೆ ಜಾರಿದ್ದ ಶಾರುಖ್​ ಕಳೆದ ಎರಡು ವರ್ಷಗಳಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಹಿಟ್​ ಚಿತ್ರಗಳನ್ನು ಕೊಡುತ್ತಿದ್ದಾರೆ. ವಯಸ್ಸು 58 ಆದರೂ ಕೆಲವು ನಟರಂತೆಯೇ ಇಂದಿಗೂ ನಿನ್ನೆ-ಮೊನ್ನೆ ಬಂದ ನಟಿಯರ ಜೊತೆಗೂ ರೊಮಾನ್ಸ್​ ಮಾಡುವಲ್ಲಿ ಎತ್ತಿದ ಕೈ. ಮಗಳ ವಯಸ್ಸಿನವಳ ಜೊತೆ ಲಿಪ್​ ಲಾಕ್, ಇಂಟಿಮೇಟ್​ ಸೀನ್​ ಎಲ್ಲಾ ಮಾಡುತ್ತಿರುವ ಬಗ್ಗೆ ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ಗೆ ಒಳಗಾಗುತ್ತಿದ್ದರೂ ಯಂಗ್​ ಆ್ಯಂಡ್​ ಎನರ್ಜೆಟಿಕ್​ ಆಗಿರುವ ಶಾರುಖ್​, ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎಂದು ಸಾರುತ್ತಲೇ ಬಂದಿದ್ದಾರೆ.

ಇದೀಗ ನಟ ಸಾಯುವ ಮಾತನಾಡಿದ್ದಾರೆ!  ಹೌದು. ಕೆಲ ತಿಂಗಳ ಹಿಂದಷ್ಟೇ  ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ  ಜೀವಮಾನ ಸಾಧನೆ ಪ್ರಶಸ್ತಿ ಪಡೆದಿರುವ  ಶಾರುಖ್​ ಈಗ ಸಾವು, ನಟನೆ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ಅವರಿಗೆ ಒಂದು ಕುತೂಹಲ, ವಿಶೇಷವಾದ ಕನಸು ಇದೆ.  ಅದೇನೆಂದರೆ, ತಮ್ಮ ಸಾವು ಕೂಡ ನಟಿಸುವಾಗಲೇ ಬರಬೇಕು ಎನ್ನುವುದು. ನಟನೆಯನ್ನೇ ಉಸಿರಾಗಿಸಿಕೊಂಡಿರುವ ವಿವಿಧ ಕ್ಷೇತ್ರಗಳ ಕಲಾವಿದರು ವೇದಿಕೆಯ ಮೇಲೆ ಕಾರ್ಯಕ್ರಮ ನೀಡುವಾಗಲೇ ಕೊನೆಯುಸಿರು ಎಳೆದಿರುವ ಸಾಕಷ್ಟು ಉದಾಹರಣೆಗಳಿವೆ. ಯಕ್ಷಗಾನ, ನಾಟಕ ಲೋಕದ ದಿಗ್ಗಜರು ಎನಿಸಿಕೊಂಡವರು ಇಂಥ ಸಾವನ್ನು ಪಡೆದಿದ್ದಾರೆ. 

ಸಲ್ಮಾನ್​ ಖಾನ್​ ತಂದಿಟ್ಟ ಸಂಕಷ್ಟ? ಆಪ್ತ ಬಾಬಾ ಸಿದ್ಧಿಕಿ ಅಂತ್ಯಕ್ರಿಯೆಯೂ ಶಾರುಖ್​ಗೆ ಹೋಗಲಾಗದ ಸ್ಥಿತಿ...

ಇದೀಗ ನಟ ಶಾರುಖ್​ ಅವರಿಗೂ ಅಂಥದ್ದೇ ಒಂದು ಆಸೆ ಇದೆಯಂತೆ. ವಯಸ್ಸು 58 ಆಗಿರುವ ಹಿನ್ನೆಲೆಯಲ್ಲಿ, ಇನ್ನೆಷ್ಟು ವರ್ಷ ನಟಿಸುತ್ತೀರಿ,  ಶಾಶ್ವತವಾಗಿ ನಟಿಸುತ್ತೀರಾ ಎಂಬ ಪ್ರಶ್ನೆ ಶಾರುಖ್​ಗೆ ಎದುರಾದಾಗ ಅವರು,  'ಹೌದು. ನಾನು ಶಾಶ್ವತವಾಗಿ ನಟಿಸುತ್ತೇನೆ. ನಾನು ಸಾಯುವವರೆಗೂ ನಟಿಸುವ ಆಸೆ ಇದೆ. ನಟಿಸುತ್ತಲೇ ಸಾಯಬೇಕು ಎನ್ನುವುದು ನನ್ನ ಬಯಕೆ'  ಎಂದಿರುವ ನಟ, ಅದು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ. ಯಾವುದಾದರೂ ಚಿತ್ರಗಳಲ್ಲಿ ನಟಿಸುವ ಸಮಯದಲ್ಲಿ ನಿರ್ದೇಶಕರು ಆ ದೃಶ್ಯ ಮುಗಿದ ಮೇಲೆ ಕಟ್​ ಎನ್ನಬೇಕು.  ಆದರೆ ಆ ಸಂದರ್ಭದಲ್ಲಿ ನಾನು ಏಳಬಾರದು. ಅಲ್ಲಿಯೇ ಕೊನೆಯ ಉಸಿರು ಎಳೆದಿರಬೇಕು. ಇದೇ ನನ್ನ ಅಂತಿಮ ಇಚ್ಛೆ ಎಂದು ಶಾರುಖ್​ ಹೇಳಿದ್ದಾರೆ.  

"ನಾನು ತುಂಬಾ ಗಂಭೀರ ನಟನಲ್ಲ.  ನಾನು ನನ್ನ ನಟನೆಯ ಮೂಲಕ ಜೀವನದ ಸಂತೋಷವನ್ನು ಆಚರಿಸುತ್ತಿದ್ದೇನೆ.  ನಾನು ನಟಿಸುವುದು ಸಂತೋಷವನ್ನು ಹಂಚಿಕೊಳ್ಳಲು, ಪ್ರೀತಿಯನ್ನು ನೀಡಲು ಅಷ್ಟೇ. ಕಲೆ, ಚಿತ್ರಕಲೆ, ಹಾಡುಗಾರಿಕೆ, ಸಂಗೀತ - ಇವೆಲ್ಲವೂ ನನಗೆ ಒಂದೇ ಅರ್ಥ ನೀಡುವಂಥದ್ದು. ನಾನು ನಿಮಗೆ ಎರಡು ನಿಮಿಷಗಳ ಕಾಲ ಮನರಂಜನೆ ನೀಡಿದರೆ, ಅದು ನಿಮಗೆ ನಾನು ತೋರುವ ಪ್ರೀತಿ ಇದ್ದಂತೆ. ನಾನು ಯಾರನ್ನಾದರೂ 50 ವರ್ಷಗಳ ಕಾಲ ಪ್ರೀತಿಸಲು ಸಾಧ್ಯವಾದರೆ, ಅದು ಮನರಂಜನೆ.  30 ಸೆಕೆಂಡುಗಳ ಕಾಲ ಮನರಂಜಿಸಲು ಸಾಧ್ಯವಾದರೆ, ಅದು ಸೃಜನಶೀಲವಾಗಿದೆ' ಎಂದಿರುವ ಶಾರುಖ್​, ಕೊನೆಯ ಉಸಿರು ಇರುವವರೆಗೂ ಜನರನ್ನು ರಂಜಿಸಲು ಬಯಸುತ್ತೇನೆ ಎಂದಿದ್ದಾರೆ. ಇನ್ನು ಶಾರುಖ್​ ಅವರ ಮುಂಬರುವ ಚಿತ್ರ ಕಿಂಗ್​.  ಇದರಲ್ಲಿ ಅವರು ತಮ್ಮ ಮಗಳು ಸುಹಾನಾ ಖಾನ್ ಅವರೊಂದಿಗೆ ನಟಿಸುತ್ತಿದ್ದಾರೆ.  ಅವರ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನಿಂದ ನಿರ್ಮಿಸಲ್ಪಟ್ಟ ಕಿಂಗ್, ಈದ್ 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಎಲ್ಲರನ್ನೂ ಹಿಂದಿಕ್ಕಿ ನಂ.1 ಶ್ರೀಮಂತ ನಾಯಕಿ ಪಟ್ಟ ಗಿಟ್ಟಿಸಿಕೊಂಡ 'ಪ್ರೇಮಲೋಕ' ಬೆಡಗಿ! ಆಸ್ತಿ ಎಷ್ಟು ಗೊತ್ತಾ?

Latest Videos
Follow Us:
Download App:
  • android
  • ios