ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಜೊತೆ ತೀರಾ ಹತ್ತಿರದ ಸಂಬಂಧ ಹೊಂದಿದ್ದರೂ ನಟ ಶಾರುಖ್​ ಖಾನ್​, ಅವರ ಅಂತ್ಯಕ್ರಿಯೆಗೆ ಹೋಗದ ಹಿಂದೆ ಈ ಕಾರಣ ಇದೆಯಾ? 

ಹಿರಿಯ ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಮೇಲೆ ನಡೆದ ಗುಂಡಿನ ದಾಳಿ ಇಡೀ ರಾಜಕೀಯ ಜಗತ್ತನ್ನೇ ತಲ್ಲಣಗೊಳಿಸಿದೆ. ಕಳೆದ ಶನಿವಾರ ಮುಂಬೈನಲ್ಲಿ ದಾಳಿಕೋರರು ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಈ ಹತ್ಯೆಗೆ ಮುಖ್ಯ ಕಾರಣ ಸಲ್ಮಾನ್​ ಖಾನ್​ ಎಂದು ದಾಳಿಕೋರರು ನೇರವಾಗಿಯೇ ಹೇಳಿದ್ದಾರೆ. ತಮಗೆ ಬಾಬಾ ಸಿದ್ದಿಕಿ ಮೇಲೆ ಯಾವುದೇ ದ್ವೇಷವಿಲ್ಲ. ಆದರೆ ಕೃಷ್ಣಮೃಗ ಕೊಂದು ತಾವು ಎಷ್ಟು ಹೇಳಿದರೂ ಕ್ಷಮೆ ಕೋರದ ಸಲ್ಮಾನ್​ ಖಾನ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಅವರಿಗೆ ಆಪ್ತರಾಗಿರುವ ಹಾಗೂ ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಜೊತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ನವರು ಇದಾಗಲೇ ಹೇಳಿದ್ದಾರೆ. 

ಮಾತ್ರವಲ್ಲದೇ ಸಲ್ಮಾನ್​ ಖಾನ್​ಗೆ ನಂಟು ಹೊಂದಿರುವ ಯಾರನ್ನೂ ಬಿಡುವುದಿಲ್ಲ ಎಂದೂ ಗ್ಯಾಂಗ್​ಸ್ಟರ್​ ಘೋಷಿಸಿಬಿಟ್ಟಿದ್ದಾರೆ. ಬಾಬಾ ಸಿದ್ದಿಕಿ ಅವರ ಅಂತ್ಯಕ್ರಿಯೆಯೆ ಅವರ ಜೊತೆ ಒಡನಾಟ ಹೊಂದಿರುವ ವಿವಿಧ ಕ್ಷೇತ್ರಗಳ ದಿಗ್ಗಜರು ಬಂದಿದ್ದರು. ಆದರೆ, ಅವರಿಗೆ ತುಂಬಾ ಆಪ್ತರಾಗಿದ್ದ ಶಾರುಖ್​ ಖಾನ್​ ಅವರು ಗೈರಾಗಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಸಲ್ಮಾನ್​ ಖಾನ್​ ಜೊತೆ ಭಾರಿ ನಂಟು ಹೊಂದಿರುವ ಶಾರುಖ್​ ಖಾನ್​ ಜೀವ ಭಯದಿಂದಲೇ ಅಂತ್ಯಕ್ರಿಯೆಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ. 

ಬಿಗ್​ಬಾಸ್​ ಅರ್ಧಕ್ಕೆ ಬಿಟ್ಟು ಓಡಿದ ಸಲ್ಮಾನ್: ಬಿರಿಯಾನಿ ಮೂಲಕ ಖಾನ್​ಗಳ ಸುದೀರ್ಘ ದ್ವೇಷ ಬಗೆಹರಿಸಿದ್ದರು ಬಾಬಾ ಸಿದ್ದಿಕಿ!

ಅಷ್ಟಕ್ಕೂ ಸಲ್ಮಾನ್​, ಶಾರುಖ್​ ಮತ್ತು ಬಾಬಾ ಸಿದ್ದಿಕಿ ಅವರಿಗೆ ಬಿಡಿಸಲಾರದ ನಂಟಿದೆ. ಅದಕ್ಕೆ ಕಾರಣ, ಈ ಖಾನ್​ದ್ವಯರ ನಡುವೆ ಇದ್ದ ವೈಮನಸ್ಸನ್ನು ದೂರ ಮಾಡಿದ್ದೇ ಬಾಬಾ ಸಿದ್ದಿಕಿ. ಇವರಿಬ್ಬರ ನಡುವಿನ ದ್ವೇಷದಿಂದಾಗಿ ನಷ್ಟ ಅನುಭವಿಸಿದ್ದ ಬಾಲಿವುಡ್​ಗೆ ಮತ್ತಷ್ಟು ಚೇತನ ತುಂಬಿದ್ದರು. ಅಷ್ಟಕ್ಕೂ, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವಿನ ಜಗಳ ಕೂಡ ತುಂಬಾ ಹಳೆಯದು. 2008 ರಲ್ಲಿ, ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಶಾರುಖ್ ಖಾನ್​ ಮತ್ತು ಸಲ್ಮಾನ್ ಖಾನ್ ನಡುವೆ ಜಗಳವಾಗಿತ್ತು. ಇಬ್ಬರೂ ಜಗಳವಾಡಿದ ನಂತರ ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದ್ದರು. ಅಷ್ಟಕ್ಕೂ ಇವರಿಬ್ಬರ ನಡುವೆ ಜಗಳವಾಗುವುದಕ್ಕೆ ಕಾರಣ, ಐಶ್ವರ್ಯ ರೈ. ಸಲ್ಮಾನ್​ ಖಾನ್​ ಮತ್ತು ಐಶ್ವರ್ಯ ರೈ ಲವ್​ ವಿಷಯ ಆಗ ಬಿ-ಟೌನ್​ನಲ್ಲಿ ಬಹಳ ಫೇಮಸ್​ ಆಗಿತ್ತು. ಆದರೆ ಕತ್ರೀನಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ವಿಷಯವನ್ನು ಶಾರುಖ್​ ಮತ್ತೆ ಕೆದಕಿದಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅಷ್ಟಕ್ಕೂ ಶಾರುಖ್​ ಮತ್ತು ಸಲ್ಮಾನ್​ ಖಾನ್​ 1990ರಿಂದಲೂ ತೀವ್ರ ಆಪ್ತರು. ಕರಣ್-ಅರ್ಜುನ್ ಮತ್ತು ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಜೋಡಿ ಸಕತ್​ ಫೇಮಸ್​ ಕೂಡ ಆಗಿತ್ತು. ಆದರೆ ಈ ವೈಮಸ್ಸಿನಿಂದಾಗಿ ಬಾಲಿವುಡ್​​ ಇಂಡಸ್ಟ್ರಿಗೂ ತೊಂದರೆಯಾಗಿತ್ತು.

ಇದನ್ನು ಸರಿಪಡಿಸಿದವರೇ ಬಾಬಾ ಸಿದ್ದಿಕಿ. 2013ರಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಸಿದ್ದಿಕಿ ಅವರು ಇಬ್ಬರನ್ನೂ ಕರೆಸಿ ಒಂದುಗೂಡಿಸಿದ್ದರು. ಬಿರಿಯಾನಿ (Biriyani) ಊಟದ ಮೂಲಕ ಇಬ್ಬರೂ ಒಂದಾದರು. ಸಮಾರಂಭದಲ್ಲಿ, ಸಿದ್ದಿಕಿ ಅವರು, ಸಲ್ಮಾನ್ ಅವರ ತಂದೆ ಸಲೀಂ ಖಾನ್ ಅವರ ಪಕ್ಕದಲ್ಲಿ ಶಾರುಖ್ ಖಾನ್ ಅವರನ್ನು ಕುಳ್ಳರಿಸಿ, ಇಬ್ಬರೂ ತಾರೆಗಳು ಮುಖಾಮುಖಿಯಾಗುವಂತೆ ಮಾಡಿದ್ದರು. ಕೊನೆಯಲ್ಲಿ ಶಾರುಖ್ ಮತ್ತು ಸಲ್ಮಾನ್ ಪರಸ್ಪರ ಶುಭಾಶಯ ಕೋರುವ ಮತ್ತು ತಬ್ಬಿಕೊಂಡು ಸುದೀರ್ಘ ದ್ವೇಷವನ್ನು ಕೊನೆಗೊಳಿಸಿದ್ದರು. ಇದೇ ಕಾರಣಕ್ಕೆ ಮತ್ತೆ ಗೊಂದಲದಲ್ಲಿ ಸಿಲುಕಲು ಶಾರುಖ್​ಗೆ ಇಷ್ಟವಿಲ್ಲ ಎನ್ನಲಾಗಿದೆ. 

ಬಾಬಾ ಸಿದ್ದಿಕಿ ಹತ್ಯೆಗೂ ಮುನ್ನ ಸೋಷಿಯಲ್​ ಮೀಡಿಯಾದಲ್ಲಿ ಕೆಜಿಎಫ್​-2 ಡೈಲಾಗ್​ ಬರೆದಿದ್ದ ಆರೋಪಿ!