Asianet Suvarna News Asianet Suvarna News

ಸಲ್ಮಾನ್ ಖಾನ್ - ಪೂಜಾ ಸಿನಿಮಾ ಟೈಟಲ್ ಬದಲಾವಣೆ; ಲುಕ್ ನೋಡಿ ಮತ್ತೊಂದು ಡಿಸಾಸ್ಟರ್ ಎಂದ ನೆಟ್ಟಿಗರು

ಸಲ್ಮಾನ್ ಖಾನ್ ನಟನೆಯ ಕಬಿ ಈದ್ ಕಬಿ ದಿವಾಲಿ ಇದೀಗ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎಂದು ಬದಲಾಗಿದೆ. ಸಿನಿಮಾದ ಟೈಟಲ್ ಜೊತೆಗೆ ಸಲ್ಮಾನ್ ಖಾನ್ ಹೊಸ ಲುಕ್ ಕೂಡ ರಿವೀಲ್ ಆಗಿದೆ

Salman Khan's Kabhi Eid Kabhi Diwali Is Now Titled Kisi Ka Bhai Kisi Ki Jaan And new look unveiled sgk
Author
First Published Sep 5, 2022, 4:30 PM IST

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಬಾಲಿವುಡ್ ಸರಣಿ ಸೋಲಿನ ಸುಳಿಗೆ ಸಿಲುಕಿದೆ. ಸ್ಟಾರ್ ನಟರ, ನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾಗಳು ಹಿನಾಯ ಸೋಲು ಕಾಣುತ್ತಿವೆ. ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿವೆ. ಬಾಲಿವುಡ್ ಸದ್ಯ ದೊಡ್ಡ ಹಿಟ್ ಗಾಗಿ ಕಾಯುತ್ತಿದೆ. ಈ ನಡುವೆ ಸಲ್ಮಾನ್ ಖಾನ್ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಲ್ಮಾನ್ ಖಾನ್ ನಟನೆಯ ಕಬಿ ಈದ್ ಕಬಿ ದಿವಾಲಿ ಸಿನಿಮಾ ಸೆಟ್ಟೇರಿ ಅನೇಕ ತಿಂಗಳೇ ಆಗಿತ್ತು. ಈ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಇದೀಗ ಸಿನಿಮಾದ ಟೈಟಲ್ ಬದಲಾಯಿಸಲಾಗಿದೆ. ಚಿತ್ರಕ್ಕೆ ಹೊಸ ಹೆಸರಿಡಲಾಗಿದ್ದು ಇಂದು (ಸೆಪ್ಟಂಬರ್ 5) ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. 

ಕಬಿ ಈದ್ ಕಬಿ ದಿವಾಲಿ ಇದೀಗ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎಂದು ಬದಲಾಗಿದೆ. ಸಿನಿಮಾದ ಟೈಟಲ್ ಜೊತೆಗೆ ಸಲ್ಮಾನ್ ಖಾನ್ ಹೊಸ ಲುಕ್ ಕೂಡ ರಿವೀಲ್ ಆಗಿದೆ. ಅಂದಹಾಗೆ ಸಲ್ಮಾನ್ ಖಾನ್ ಉದ್ದ ಕೂದಲು ಬಿಟ್ಟಿರುವ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಈ ಸಿನಿಮಾಗೆ  ಫರ್ಹಾನ್ ಸಾಮ್ಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ನಿರ್ಮಾಣದಲ್ಲಿಯೇ ಸಿನಿಮಾ ಮೂಡಿಬರುತ್ತಿದೆ. 

ಅಂದಹಾಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕರಾವಳಿ ಸುಂದರಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪೂಜಾ ತನ್ನ ಭಾಗದ ಚಿತ್ರೀಕರಣ ಪ್ರಾರಂಭಮಾಡಿದ್ದಾರೆ. ಲಡಾಖ್ ನಲ್ಲಿ ಪೂಜಾ, ಸಲ್ಮಾನ್ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇನ್ನು ಸಿನಿಮಾದಲ್ಲಿ ಸೌತ್ ಸ್ಟಾರ್ ವೆಂಕಟೇಶ್ ದಗ್ಗುಬಾಟಿ ಕೂಡ ನಟಿಸುತ್ತಿದ್ದಾರೆ. ಕಳೆದ ತಿಂಗಳು ಸಲ್ಮಾನ್ ಖಾನ್ ಲಡಾಖ್ ಚಿತ್ರೀಕರಣದ ಫೋಟೋವನ್ನು ಶೇರ್ ಮಾಡಿದ್ದರು. ಫೋಟೋದಲ್ಲಿ ಸಲ್ಮಾನ್ ಖಾನ್ ಉದ್ದ ಕೂದಲು ಬಿಟ್ಟು ಕ್ಯಾಮರಾಗೆ ಹಿಂದೆಯಿಂದ ಪೋಸ್ ನೀಡಿದ್ದರು. ಇದೀಗ ಈ ಸಿನಿಮಾದ ಲುಕ್ ರಿಲೀಸ್ ಮಾಡುವ ಮೂಲಕ ಕತೂಹಲಕ್ಕೆ ತೆರೆ ಎಳೆದಿದ್ದಾರೆ. 

Ganesh Chaturthi 2021; ಸಹೋದರಿ ಮನೆಯಲ್ಲಿ ಹಬ್ಬ ಆಚರಿಸಿದ ಸಲ್ಮಾನ್ ಖಾನ್, ಗಣೇಶ ಆರತಿ ವಿಡಿಯೋ ವೈರಲ್

ಅಂದಹಾಗೆ ಸದ್ಯ ರಿಲೀಸ್ ಆಗಿರುವ ಟೀಸರ್ ಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ಕೆಲವರು ಬಾಲಿವುಡ್ ನಲ್ಲಿ ಮತ್ತೊಂದು ಡಿಸಾಸ್ಟರ್ ಬರ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಅಭಿಮಾನಿಗಳು ನೆಚ್ಚಿನ ನಟ ಲುಕ್ ನೋಡಿ ಹಾಡಿಹೊಗಳುತ್ತಿದ್ದಾರೆ.     
 
Salman Khan ಮಾನಸಿಕ ಅಸ್ವಸ್ಥ, ಅವನನ್ನು ಆರಾಧಿಸುವುದು ನಿಲ್ಲಿಸಿ : ಮಾಜಿ ಗರ್ಲ್‌ಫ್ರೆಂಡ್‌

ಸಲ್ಮಾನ್ ಖಾನ್ ಕೊನೆಯದಾಗಿ ಅಂತಿಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಪತಿ ಆಯೂಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಸಲ್ಮಾನ್ ಖಾನ್ ಟೈಗರ್ 3 , ಕಿಕ್ 2 ಚಿತ್ರೀಕರಣ ಮುಗಿಸಿದ್ದಾರೆ. ಸೂಪರ್ ಹಿಟ್ ಭಜರಂಗಿ ಭಾಯಿಜಾನ್ -2 ಮಾಡುವ ಸುಳಿವು ನೀಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ಸಿನಿಮಾಗಳು ಮುಂದಿನ ವರ್ಷ ರಿಲೀಸ್ ಆಗುತ್ತಿವೆ.  

Follow Us:
Download App:
  • android
  • ios