Asianet Suvarna News Asianet Suvarna News

Ganesh Chaturthi 2021; ಸಹೋದರಿ ಮನೆಯಲ್ಲಿ ಹಬ್ಬ ಆಚರಿಸಿದ ಸಲ್ಮಾನ್ ಖಾನ್, ಗಣೇಶ ಆರತಿ ವಿಡಿಯೋ ವೈರಲ್

ಸಲ್ಮಾನ್ ಖಾನ್ ಸಹ ಅದ್ದೂರಿಯಾಗಿ ಗಣೇಶ ಹಬ್ಬ ಮಾಡಿದ್ದಾರೆ. ಸಲ್ಮಾನ್ ಖಾನ್ ತನ್ನ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಗಣೇಶ ಹಬ್ಬ ಸಂಭ್ರಮಿಸಿದ್ದಾರೆ. 

Salman Khan performs Ganesh aarti at his sister Arpita Khan house video viral sgk
Author
First Published Sep 1, 2022, 4:59 PM IST

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಗಣೇಶನನ್ನು ಕೂರಿಸಿ ಅದ್ದೂರಿಯಾಗಿ ಪೂಜಿಸಿ ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಕೂಡ ಅದ್ದೂರಿಯಾಗಿ ಗಣೇಶ ಹಬ್ಬವನ್ನುುಆಚರಿಸಿದ್ದಾರೆ. ಬಾಲಿವುಡ್‌ನಲ್ಲಿ ಜಾತಿ, ಧರ್ಮ ಭೇದವಿಲ್ಲದೇ ಹಬ್ಬವನ್ನು ಆಚರಣೆ ಮಾಡುತ್ತಾರೆ. ಬಾಲಿವುಡ್ ಖಾನ್‌ಗಳು ಸಹ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ.  ಶಾರುಖ್ ಮನೆಯಲ್ಲೂ ಗಣೇಶ ಚತುರ್ಥಿ ಸಂಭ್ರಮ ಜೋರಾಗಿತ್ತು. ಹಾಗೆ ಸಲ್ಮಾನ್ ಖಾನ್ ಸಹ ಅದ್ದೂರಿಯಾಗಿ ಗಣೇಶ ಹಬ್ಬ ಮಾಡಿದ್ದಾರೆ. ಸಲ್ಮಾನ್ ಖಾನ್ ತನ್ನ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಗಣೇಶ ಹಬ್ಬ ಸಂಭ್ರಮಿಸಿದ್ದಾರೆ. ಅರ್ಪಿತಾ ಮನೆಯ ಗಣೇಶ ಹಬ್ಬದ  ವಿಡಿಯೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ವಿಶೇಷ ಎಂದರೆ ಸಲ್ಮಾನ್ ಖಾನ್ ಗಣೇಶ ಆರತಿ ಮಾಡಿದ್ದಾರೆ. ಭಕ್ತಿಯಿಂದ ಗಣಪನ ಆರಾಧನೆ ಮಾಡಿದ್ದಾರೆ. ಸಲ್ಮಾನ್ ಖಾನ್ ಹಾಗೂ ಸಹೋದರಿ ಅರ್ಪಿತಾ ಖಾನ್, ಪತಿ ಆಯೂಶ್ ಹಾಗೂ ಅರ್ಪಿತಾ ಮಕ್ಕಳು ಸಹ ಗಣೇಶ ಆರತಿ ಮಾಡಿದ್ದಾರೆ. ಈ ವಿಡಿಯೋ ವನ್ನು ಸಲ್ಮಾನ್ ಖಾನ್ ಶೇರ್ ಮಾಡಿ ಗಣಪತಿ ಬಪ್ಪ ಮೋರಿಯಾ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. ಅಭಿಮಾನಿಗಳು ಸಹ ಸಲ್ಮಾನ್ ಖಾನ್‌ಗೆ ಗಣೇಶ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. 

Ganesh Chaturthi ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಅದ್ಧೂರಿ ಗಣೇಶೋತ್ಸವ!

ಅಂದಹಾಗೆ ಸಲ್ಮಾನ್ ಖಾನ್ ಮನೆಯಲ್ಲಿ ಪ್ರತಿವರ್ಷ ಗಣೇಶ ಹಬ್ಬ ಆಚರಣೆ ಮಾಡುತ್ತಾರೆ. ಈ ವರ್ಷ ಕೂಡ ಅದ್ದೂರಿಯಾಗಿ ಹಬ್ಬ ಆಚರಿಸಿದ್ದಾರೆ. ಅಂದಹಾಗೆ ಅರ್ಪಿತಾ ಖಾನ್ ಮನೆಗೆ ಬಾಲಿವುಡ್‌ನ ಅನೇಕ ಗಣ್ಯರು ಹಾಜರಾಗಿದ್ದರು. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ, ಜೆನಿಲಿಯಾ ಮತ್ತು ರಿತೇಶ್ ದೇಶಮುಖ್ ದಂಪತಿ, ಸೋಹೈಲ್ ಖಾನ್, ಅರ್ಬಾಜ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಅರ್ಪಿತಾ ಕೂಡ ಪತಿ ಹಾಗೂ ಮಕ್ಕಳ ಜೊತೆ ಗಣೇಶ ಆರತಿ ಮಾಡಿದ್ದಾರೆ.   

Ganesh Chaturthi 2022; ಶಾರುಖ್ ಮನೆಯಲ್ಲಿ ಅದ್ದೂರಿ ಗಣೇಶ ಸಂಭ್ರಮ, ಮೋದಕ ತಿಂದು ಹೇಳಿದ್ದೇನು?

ಇನ್ನು ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್​ ಮಾತ್ರವಲ್ಲದೇ ಆಲಿಯಾ ಭಟ್​, ಶಿಲ್ಪಾ ಶೆಟ್ಟಿ, ಅಮಿತಾಭ್​ ಬಚ್ಚನ್​, ಶ್ರದ್ಧಾ ಕಪೂರ್​ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸಲಾಗಿದೆ. ಶಿಲ್ಪಾ ಶೆಟ್ಟಿ ಮನೆಯಲ್ಲೂ ಅದ್ದೂರಿಯಾಗಿ ಗಣೇಶ ಹಬ್ಬ ಸಂಭ್ರಮಿಸುತ್ತಾರೆ. ಶಾರುಖ್ ಮನೆಯಲ್ಲೂ ಅದ್ದೂರಿಯಾಗಿ ಗಣೇಶ ಹಬ್ಬ ಆಚರಿಸಿದ್ದಾರೆ. ಶಾರುಖ್ ಅವರ ಮುಂಬೈ ನಿವಾಸ ಮನ್ನತ್​ನಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬದ ಸಂಭ್ರಮದ ಕಾರಣ ಶೂಟಿಂಗ್​ ಕೆಲಸಗಳಿಗೆ ಶಾರುಖ್ ಖಾನ್ ಬ್ರೇಕ್​ ನೀಡಿದ್ದಾರೆ. ಕುಟುಂಬದ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ. ಮನ್ನತ್ ಸಿನಿಮಾದಲ್ಲಿ ಗಣೇಶ ಹಬ್ಬದ ಸಂಭ್ರಮದ ಫೋಟೋಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಸಲ್ಮಾನ್ ಸಿನಿಮಾ ವಿಚಾರಕ್ಕೆ ಬರುವುದಾರೇ ಸದ್ಯ ಕಬಿ ಈದ್ ಕಬಿ ದಿವಾಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಲಡಾಖ್ ಚಿತ್ರೀಕರಣದ ಫೋಟೋಗಳು ವೈರಲ್ ಆಗಿತ್ತು. ಈ ಸಿನಿಮಾ ಜೊತೆಗೆ ಸಲ್ಮಾನ್ ಖಾನ್ ಟೈಗರ್ 3 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ಕಿಕ್ 2 ಸಿನಿಮಾ ಕೂಡ ಸಲ್ಮಾನ್ ಖಾನ್ ಕೈಯಲ್ಲಿದೆ. 

Follow Us:
Download App:
  • android
  • ios