Asianet Suvarna News Asianet Suvarna News

ಮೊದಲ ಮಗು ಜನಿಸಿ ವರ್ಷದೊಳಗೆ ರಿಹಾನಾ ಮತ್ತೆ ಪ್ರೆಗ್ನೆಂಟ್; ಲೈವ್ ಶೋನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಖ್ಯಾತ ಗಾಯಕಿ

ಪಾಪ್ ಖ್ಯಾತ ಗಾಯಕಿ ರಿಹಾನಾ ಮತ್ತೆ ಪ್ರೆಗ್ನೆಂಟ್ ಎನ್ನುವ ವಿಚಾರ ಬಹಿರಂಗವಾಗಿದೆ. ಮೊದಲ ಮಗುವಿಗೆ ಜನ್ಮ ನೀಡಿ ಒಂದು ವರ್ಷವಾಗೋದ್ರೊಳಗೆ ಮತ್ತೆ ಗರ್ಭಿಣಿ ಆಗಿದ್ದಾರೆ.

Rihanna reveals she second pregnancy during Super Bowl halftime show sgk
Author
First Published Feb 13, 2023, 1:30 PM IST | Last Updated Feb 13, 2023, 1:33 PM IST

ಪಾಪ್ ಖ್ಯಾತ ಗಾಯಕಿ ರಿಹಾನಾ ಮತ್ತೆ ಪ್ರೆಗ್ನೆಂಟ್ ಎನ್ನುವ ವಿಚಾರ ಬಹಿರಂಗವಾಗಿದೆ. ಮೊದಲ ಮಗುವಿಗೆ ಜನ್ಮ ನೀಡಿ ಒಂದು ವರ್ಷವಾಗೋದ್ರೊಳಗೆ ಮತ್ತೆ ಗರ್ಭಿಣಿ ಆಗಿದ್ದಾರೆ. 34 ವರ್ಷದ ಖ್ಯಾತ ಗಾಯಕಿ ರಿಹಾನಾ ಮೊದಲ ಮಗುವನ್ನು  ರಾಪರ್ ಗೆಳೆಯ A$AP Rocky ಅವರಿಂದ ಸ್ವಾಗತಿಸಿದ್ದರು. 2022 ಮೇ ತಿಂಗಳಲ್ಲಿ ಲಾಸ್ ಏಂಜಲೀಸ್ ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿನ ತಾಯಿಯಾಗಿರುವ ರಿಹಾನಾ ಇದೀಗ ಮತ್ತೆ ಗರ್ಭಿಣಿ ಎನ್ನುವ ವಿಚಾರ ಬಹಿರಂಗವಾಗಿದೆ. ರಿಹಾನಾ 2ನೇ ಮಗುವಿನ ತಾಯಿ ಆಗುತ್ತಿರುವ ಬಗ್ಗೆ ಲೈವ್ ಶೋನಲ್ಲಿ ಬೇಬಿ ಬಂಪ್ ಪ್ರದರ್ಶಿಸುವ ಮೂಲಕ ಬಹಿರಂಗ ಪಡಿಸಿದ್ದಾರೆ. 

ಕೆಂಪು ಬಣ್ಣದ ಡ್ರೆಸ್ ಧರಿಸಿದ್ದ ಸಂಗೀತ ಕಾರ್ಯಕ್ರಮ ನೀಡಿದ ರಿಹಾನಾ ಗರ್ಭಿಣಿ ಆಗಿರುವ ವಿಚಾರ ಬಹಿರಂಗವಾಗಿದೆ. ಸೂಪರ್ ಬೌಲ್ ಹಾಫ್‌ಟೈಮ್ ಶೋನ ಸ್ಟಾರ್ ಗಳ ಪಟ್ಟೆಯಲ್ಲಿ ರಿಹಾನಾ ಹೆಸರು ಇರಲಿಲ್ಲ. ಆದರೆ ರಿಹಾನಾ ಎಂಟ್ರಿ ಅಚ್ಚರಿ ಮೂಡಿಸಿತ್ತು. ಸರ್ಪ್ರೈಸ್ ಎಂಟ್ರಿ ಜೊತೆಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಭಾನುವಾರ ನಡೆದ ಸೂಪರ್ ಬೌಲ್ ನಲ್ಲಿ ರಿಹಾನಾ ತನ್ನ ಹೊಟ್ಟೆಯನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ 2ನೇ ಮಗುವಿಗೆ ತಾಯಿ ಆಗುತ್ತಿರುವ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.  

ವೇದಿಕೆ ಮೇಲೆ ಸಖತ್ ಎನರ್ಜಿಯಿಂದ ಹಾಡುವ ಜೊತೆಗೆ ರಿಹನ್ನಾ ತನ್ನ ಹೊಟ್ಟೆಯನ್ನು ತುಂಬಾ ಸುರಕ್ಷಿತವಾಗಿ ಮುಟ್ಟಿಕೊಳ್ಳುವುದನ್ನು ನೋಡಬಹುದು. ಕಳೆದ ವರ್ಷ ಜನವರಿಯಲ್ಲಿ ಮೊದಲ ಮಗುವನ್ನು ಸ್ವಾಗತಿಸುವ ಬಗ್ಗೆ ಬಹಿರಂಗ ಪಡಿಸಿದ್ದರು. ಫೋಟೋಗಳನ್ನು ಶೇರ್ ಮಾಡುವ ಮೂಲಕ ಗರ್ಭಿಣಿ ಎಂದು ಬಹಿರಂಗ ಪಡಿಸಿದ್ದರು. ಇದೀದ 2ನೇ ಮಗುವನ್ನು ಸ್ವಾಗತಿಸುತ್ತಿರುವ ರಿಹಾನಾ ಲೈವ್ ಪ್ರದರ್ಶನ ವೇಳೆ ಬಹಿರಂಗ ಪಡಿಸಿದ್ದು ವಿಶೇಷವಾಗಿತ್ತು. 

ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ; ಗಾಯಕಿ ರಿಹಾನಾ

ಅಂದಹಾಗೆ ಸೂಪರ್ ಬೌಲ್ ಹಾಫ್‌ಟೈಮ್ ಲೈವ್ ಪ್ರದರ್ಶನದ ವೇಳೆ ಗೆಳೆಯ, ಖ್ಯಾತ ರ್ಯಾಪರ್  A$AP Rocky ಕೂಡ ಹಾಜರಿದ್ದರು. ರಿಹಾನಾ ವೇದಿಕೆ ಮೇಲೆ ಹಾಡಿದ ಹಾಗೆ  A$AP Rocky ಚಿಯರ್ ಮಾಡುತ್ತಿದ್ದರು.  A$AP Rocky ವಿಡಿಯೋ ಸೆರೆಹಿಡುಯುತ್ತಾ ಸಂಭ್ರಮಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಮೊದಲ ಮಗುವಿನ ಗರ್ಭಿಣಿ ಸಮಯದಲ್ಲಿ ರಿಹಾನಾ ತರಹೇವಾರಿ ಫೋಟೋಶೂಟ್ ಮೂಲಕ ಮಿಂಚಿದ್ದರು. ಅನೇಕ ಬಾರಿ ಟ್ರೋಲ್ ಕೂಡ ಆಗಿದ್ದರು. ಇದೀಗ ಮತ್ತೆ ಗರ್ಭಿಣಿ ಆಗಿದ್ದು ಮತ್ಯಾವೆಲ್ಲಾ ಫೋಟೋಗಳನ್ನು ಶೇರ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  

ಸಿಗರೇಟು ಹಿಡಿದು ಸಮುದ್ರದ ಮಧ್ಯೆ ಕುಳಿತಿದ್ದ ರಿಹಾನಾ; ಮಾದಕ ಬಿಕಿನಿ ಪೋಸ್ ಮತ್ತೆ ವೈರಲ್

ಸೆಕ್ಸ್ ಲೈಫ್ ಬಗ್ಗೆ ರಿಹಾನಾ ಮಾತು ವೈರಲ್ 

2015ರ ಸಂದರ್ಶನದಲ್ಲಿ ರಿಹಾನಾ, 'ಸರಿಯಾಗಿ ಸೆಕ್ಸ್ ಮಾಡಿಲ್ಲ ಎಂದು ಗಿಲ್ಟ್ ಫೀಲಿಂಗ್‌ನಲ್ಲಿ ಬೆಳಗ್ಗೆ ಎದ್ದೇದಳು ಬಯಸಲ್ಲ. ನಾನೂ ಕೂಡ ಮನುಷ್ಯಳೇ. ನಾನು ಮಹಿಳೆ. ನಾನೂ ಸೆಕ್ಸ್ ಮಾಡಲು ಬಯಸುತ್ತೇನೆ'  ಎಂದು ಹೇಳಿದರು. ಇನ್ನೂ ಈ ಬಗ್ಗೆ ಮಾತನಾಡಿದ್ದ ರಿಹಾನಾ, ರ್ಯಾಂಡಮ್ ಆಗಿ ಯಾರೋ ಒಬ್ಬ ಕ್ಯೂಟ್ ಇದಾನೆ ಅಂತ ಕರ್ಕೊಂಡು ಹೋಗಿ ಸುಖ ಸಿಕ್ಕಿಲ್ಲ ಅಂತ ಬೆಳಗ್ಗೆ ಬೇಸರದಿಂದ ಎದ್ದೇಳೊಕ್ಕೆ ಸಾಧ್ಯವಿಲ್ಲ' ಎಂದು ಹೇಳಿದ್ದರು. 

Latest Videos
Follow Us:
Download App:
  • android
  • ios