Asianet Suvarna News Asianet Suvarna News

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗ ಹುಟ್ಟಿದ್ರೆ ಹೀಗಿರ್ತಾನಂತೆ! ನಾಮಕರಣವನ್ನೂ ಮಾಡಿದ ಫ್ಯಾನ್ಸ್
 

AI Generated PHOTO Of Shah Rukh Khan Deepika Padukone And Baby Azad suc
Author
First Published Oct 7, 2023, 6:33 PM IST

ಓಂ ಶಾಂತಿ ಓಂ ಚಿತ್ರದಿಂದ ಇತ್ತೀಚಿನ ಬ್ಲಾಕ್​ಬಸ್ಟರ್​ ಸಿನಿಮಾ ಪಠಾಣ್​ ಮತ್ತು  ಜವಾನ್‌ವರೆಗೆ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಕೆಮೆಸ್ಟ್ರಿಗೆ ಫ್ಯಾನ್ಸ್​ ಮಾರು ಹೋಗಿದ್ದಾರೆ.  ಪಠಾಣ್​ ಮತ್ತು ಜವಾನ್ ಚಿತ್ರದಲ್ಲಿನ ಈ ಜೋಡಿಯ ನಟನೆಗೆ ಅಭಿಮಾನಿಗಳು ಮತ್ತಷ್ಟು ಹುಚ್ಚೆದ್ದು ಹೋಗಿದ್ದಾರೆ.  ಅಟ್ಲೀ-ಹೆಲ್ಮ್ ಆಕ್ಷನ್-ಥ್ರಿಲ್ಲರ್ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ  ದೊಡ್ಡ ಮೊತ್ತ ಪಡೆದ ಮೇಲಂತೂ ಅಭಿಮಾನಿಗಳು ಈ ಜೋಡಿಗೆ ಮಗುವನ್ನೇ ಹುಟ್ಟಿಸಿಬಿಟ್ಟಿದ್ದಾರೆ. ಇದು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ ಯುಗ. ಇದರಿಂದ ಏನು ಬೇಕಾದರೂ ಮಾಡಲು ಸಾಧ್ಯ. ಇದಾಗಲೇ ತಮ್ಮ ನೆಚ್ಚಿನ ನಾಯಕ-ನಾಯಕಿಯರ ಮರುಸೃಷ್ಟಿಯನ್ನೇ ಮಾಡಿದವರು ಹಲವರು. ಇದೀಗ ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರಿಗೆ ಮಗ ಹುಟ್ಟಿದರೆ ಹೇಗಿರುತ್ತದೆ ಎಂದು ಎಐ ಮೂಲಕ ಸೃಷ್ಟಿ ಮಾಡಲಾಗಿದೆ. ಇದು ಸಕತ್​ ವೈರಲ್​ ಆಗುತ್ತಿದ್ದು, ಈ ಜೋಡಿಗೆ ಅಭಿಮಾನಿಗಳು ಕ್ಯೂಟ್​ ಎನ್ನುತ್ತಿದ್ದಾರೆ. 
  
ಅಷ್ಟಕ್ಕೂ ಇದರಲ್ಲಿ ಜವಾನ್​ ಚಿತ್ರದ ಮರುಸೃಷ್ಟಿ ಮಾಡಲಾಗಿದೆ.  Instagramನಲ್ಲಿ   ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಒಳಗೊಂಡ ಫೋಟೋಗಳ ಗುಂಪನ್ನು ಪೋಸ್ಟ್ ಮಾಡಲಾಗಿದೆ. ಜವಾನ್ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬರು ತಂದೆ ವಿಕ್ರಮ್ ರಾಥೋಡ್ ಮತ್ತು ಇನ್ನೊಬ್ಬರು ಮಗ ಆಜಾದ್. ಮತ್ತೊಂದೆಡೆ, ದೀಪಿಕಾ ವಿಕ್ರಮ್ ರಾಥೋಡ್ ಅವರ ಪತ್ನಿ ಐಶ್ವರ್ಯಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳನ್ನುಇದರಲ್ಲಿ ಮರುಸೃಷ್ಟಿ ಮಾಡಲಾಗಿದೆ. ಈಗ, AI ರಚಿಸಿದ ಚಿತ್ರಗಳಲ್ಲಿ ವಿಕ್ರಮ್ ರಾಥೋಡ್, ಐಶ್ವರ್ಯ ಮತ್ತು ಅವರ ಮಗ ಬೇಬಿ ಆಜಾದ್ ಅವರನ್ನು ಒಳಗೊಂಡ ಸಂತೋಷದ ಕುಟುಂಬವನ್ನು ನೋಡಬಹುದು.  ಐದು ಫೋಟೋಗಳಲ್ಲಿ, ಎರಡು ಆನ್-ಸ್ಕ್ರೀನ್ ಅನ್ನು ಒಳಗೊಂಡಿದೆ ಮತ್ತು ಇತರ ಮೂರು ಅವುಗಳಲ್ಲಿ ಮಂಚ್ಕಿನ್ ಅನ್ನು ಹೊಂದಿವೆ. 

ಶಾರುಖ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಜವಾನ್​ ತಂಡದಿಂದ ಭರ್ಜರಿ ಗುಡ್​ ನ್ಯೂಸ್​

 ಅಟ್ಲಿ ನಿರ್ದೇಶನದ ಜವಾನ್ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ  ನಯನತಾರಾ ಮತ್ತು ಅಟ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.  ಇಲ್ಲಿಯವರೆಗೆ, ಶಾರುಖ್ ಖಾನ್ ಅಭಿನಯದ ಚಿತ್ರವು ಭಾರತದಲ್ಲಿ 600 ಕೋಟಿ ರೂ.ಗಿಂತ ಹೆಚ್ಚು ಮತ್ತು ಜಾಗತಿಕವಾಗಿ 1100 ಕೋಟಿ ರೂ. ಇನ್ನು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪಠಾಣ್, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

ಈ ನಡುವೆಯೇ, ಇದರ ನಡುವೆಯೇ, ಜವಾನ್​ ತಂಡದಿಂದ ಗುಡ್​ನ್ಯೂಸ್​ ಬಂದಿದೆ.  ಬರುವ ನವೆಂಬರ್​ 2ರಂದು ಶಾರುಖ್​ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ದಿನ ಜವಾನ್​ ತಂಡ ಶಾರುಖ್​ ಅಭಿಮಾನಿಗಳಿಗೆ ಬಿಗ್​ ಸರ್​ಪ್ರೈಸ್​ ನೀಡುತ್ತಿದೆ. ಅದೇನೆಂದರೆ, ಜವಾನ್​ ಚಿತ್ರವು ಅಂದು ಓಟಿಟಿಯಲ್ಲಿ ರಿಲೀಸ್​ ಮಾಡಲು ತಂಡ ನಿರ್ಧರಿಸಿದೆ. ಕಳೆದ ಸೆಪ್ಟೆಂಬರ್​ 7ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಇದೀಗ ಶಾರುಖ್ ಬರ್ತ್‌ಡೇ ಪ್ರಯುಕ್ತ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಸಿನಿಮಾ ಬಿಡುಗಡೆಯಾದ ಎರಡು ತಿಂಗಳಿಗೆ ಜವಾನ್‌ ಆಗಮನವಾಗಲಿದೆ. ಅಷ್ಟೇ ಅಲ್ಲ ಹೆಚ್ಚುವರಿ ದೃಶ್ಯಗಳನ್ನೂ ಒಳಗೊಂಡು ಒಟಿಟಿಗೆ ಎಂಟ್ರಿಯಾಗಲಿದೆ. ಜವಾನ್ ಚಿತ್ರದ ಡಿಜಿಟಲ್‌ ಹಕ್ಕನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ದೊಡ್ಡ ಮೊತ್ತಕ್ಕೇ ಖರೀದಿಸಿದೆ ಎಂಬ ವಿಚಾರ ಈ ಹಿಂದೆಯೇ ಹೊರಬಿದ್ದಿತ್ತು. 250 ಕೋಟಿಗೆ ಪಡೆದಿದೆ ಎಂದೂ ಹೇಳಲಾಗಿತ್ತು.

 ಎಂಟನೇ ಅವತಾರದಲ್ಲಿ ಏಲಿಯನ್​ ರೂಪದಲ್ಲಿ ತೆರೆ ಮೇಲೆ ಶಾರುಖ್! ಶೀಘ್ರದಲ್ಲೇ ರಿಲೀಸ್​

 
 
 
 
 
 
 
 
 
 
 
 
 
 
 

A post shared by Maha (@mahasrk1)

Follow Us:
Download App:
  • android
  • ios