Asianet Suvarna News Asianet Suvarna News

ಆದಿಪುರುಷ್ ಡಿಸಾಸ್ಟರ್: ಪ್ರಭಾಸ್ ಸಿನಿಮಾಗೆ ಟಕ್ಕರ್ ಕೊಡಲು ಮತ್ತೆ ಬರ್ತಿದೆ 'ರಾಮಾಯಣ'

ಆದಿಪುರುಷ್ ಡಿಸಾಸ್ಟರ್ ಬೆನ್ನಲ್ಲೇ ಪ್ರಭಾಸ್ ಸಿನಿಮಾಗೆ ಟಕ್ಕರ್ ಕೊಡಲು ಮತ್ತೆ ಬರ್ತಿದೆ ಎವರ್ ಗ್ರೀನ್ 'ರಾಮಾಯಣ' ಧಾರಾವಾಹಿ. ಜುಲೈ 3ರಿಂದ ಪ್ರಸಾರವಾಗುತ್ತಿದೆ. 

Ramanand Sagars Ramayana returns to TV on July 3 amid Adipurush controversy sgk
Author
First Published Jun 28, 2023, 2:28 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.   ಜೂನ್ 16ಕ್ಕೆ ರಿಲೀಸ್ ಆದ ಆದಿಪುರುಷ್ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸಿನಿಮಾ ನೋಡಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಕಲಾವಿದರೂ ಕೂಡ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದ ವಿಎಕ್ಸ್‌ಎಫ್, ಡೈಲಾಗ್, ಪಾತ್ರಗಳ ಚಿತ್ರಣ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಬಾಲಿವುಡ್ ನಟಿ ಕಂಗನಾ ಸೇರಿದಂತೆ ಅನೇಕ ಕಲಾವಿದರು ಸಿನಿಮಾದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ನಡುವೆ ಆದಿಪುರುಷ್ ಸಿನಿಮಾಗೆ ಟಕ್ಕರ್ ಕೊಡುವ ಹಾಗೆ ಎವರ್‌ಗ್ರೀನ್ ರಾಮಾಯಣ ದೂರದರ್ಶನದಲ್ಲಿ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

ರಮಾನಂದ್ ಸಾಗರ್ ಅವರ ಜನಪ್ರಿಯ ಕೃಶ್ಯಕಾವ್ಯ ರಾಮಾಯಣವನ್ನು ಶೀಘ್ರದಲ್ಲೇ  ಮರುಪ್ರಸಾರ ಮಾಡಲಾಗುವುದು ಘೋಷಿಸಲಾಗಿದೆ. ಅಂದಹಾಗೆ ಜುಲೈ 3ರಿಂದ ಪೈರಾಣಿಕ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಆದಿಪುರುಷ್ ರಿಲೀಸ್ ಆದಾಗಿಂದನೂ  ರಮಾನಂದ್ ಸಾಗರ್ ಅವರ ರಾಮಾಯಣ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಜನರು ರಾಮಾಯಣ ಧಾರಾವಾಹಿಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಆದಿಪುರುಷ್ ಸಿನಿಮಾವನ್ನು ತರಾಟೆ ತೆಗೆದುಕೊಂಡಿದ್ದರು. ರಾಮ ಹಾಗೂ ಸೀತೆ ಹೇಗಿರಬೇಕೆಂದು ರಾಮಾಯಣ ನೋಡಿ ಕಲಿಯಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದರು. ನಿರ್ದೇಶಕ ಓಂ ರಾವುತ್ ರಾಮಾಯಣ ನೋಡಿ ಕಲಿಯಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದರು. ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದ ಕೆಲವು ಕಲಾವಿದರೂ ಕೂಡ ಆದಿಪುರುಷ್ ಬಗ್ಗೆ ಬೇಸರ ಹೊರಹಾಕಿದ್ದರು. 

ಆದುಪುರುಷ್ ವಿವಾದದ ಬೆನ್ನಲ್ಲೇ ರಾಮಾಯಣ ಮುಂದಿನ ಸೋಮವಾರದಿಂದಲೇ (ಜುಲೈ 3) ಮತ್ತೆ 80ರ ದಶಕದ ಸೂಪರ್ ಹಿಟ್ ಪೌರಾಣಿಕ ಟಿವಿ ಶೋ ಮೂಡಿ ಬರಲಿದೆ. 'ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವು ಮತ್ತೆ ವೀಕ್ಷಕರ ಮುಂದೆ ಬರ್ತಿದೆ ' ಎಂದು ಈಗಾಗಲೇ ಪ್ರೋಮೊ ರಿಲೀಸ್ ಮಾಡಲಾಗಿದೆ. ಅಂದಹಾಗೆ ಶೆಮರೂ ಟಿವಿ (Shemaroo TV) ವಾಹಿನಿಯಲ್ಲಿ ರಾಮಾಯಣ ಮರುಪ್ರಸಾರವಾಗಲಿದೆ.

'ಆದಿಪುರುಷ್' ಟಿಕೆಟ್ ದರ ದಿಢೀರ್ ಕುಸಿತ; ಎಷ್ಟಿದೆ ಈಗ ಬೆಲೆ?

ರಾಮಾಯಣದಲ್ಲಿ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಕ್ಲಿಯಾ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸುನಿಲ್ ಲಾಹಿರಿ ಲಕ್ಷ್ಮಣನಾಗಿ ನಟಿಸಿದ್ದಾರೆ.  ಪ್ರೋಮೋ ಶೇರ್ ಮಾಡಿ, 'ವಿಶ್ವ ಪ್ರಸಿದ್ಧ ಪೌರಾಣಿಕ ಧಾರಾವಾಹಿ ರಾಮಾಯಣವು ಎಲ್ಲಾ ಅಭಿಮಾನಿಗಳು ಮತ್ತು ನಮ್ಮ ಪ್ರೇಕ್ಷಕರಿಗಾಗಿ ಮತ್ತೆ ಬರ್ತಿದೆ. ಜುಲೈ 3, 7.30 ರಿಂದ ನಿಮ್ಮ ನೆಚ್ಚಿನ ಶೆಮರೂ ಟಿವಿಯಲ್ಲಿ ವೀಕ್ಷಿಸಿ' ಎಂದು ಕ್ಯಾಪ್ಷನ್ ನೀಡಿದ್ದಾರೆ. 

Adipurush: ಹಿಂದೂಗಳು ಸಹಿಷ್ಣುರೆಂದು ಈ ಮಟ್ಟಕ್ಕೆ ಇಳಿಯೋದಾ ಎಂದು ಹೈಕೋರ್ಟ್​ ಗರಂ

ಆದಿಪುರುಷ್ ಬಗ್ಗೆ 

ಆದಿಪುರುಷ್ ಸಿನಿಮಾ ರಿಲೀಸ್ ಆದ ಪ್ರಾರಂಭದಲ್ಲಿ ಬಾಕ್ಸ್‌ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಕೋಟಿ ಕೋಟಿ ಬಾಚಿಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಕಲೆಕ್ಷನ್ ನೆಲಕಚ್ಚಿದೆ. ಹೀನಾಯ ಸೋಲು ಕಂಡಿದೆ. ಹಾಕಿದ ಬಂಡವಾಳ ಕೂಡ ವಾಪಾಸ್ ಬಂದಿಲ್ಲ. ಸಿಕ್ಕಾಪಟ್ಟೆ ಟ್ರೋಲ್, ಮೀಮ್ ‌ಗಳು ಹರಿದಾಡುತ್ತಿವೆ. 

Follow Us:
Download App:
  • android
  • ios