'ಆದಿಪುರುಷ್' ಟಿಕೆಟ್ ದರ ದಿಢೀರ್ ಕುಸಿತ; ಎಷ್ಟಿದೆ ಈಗ ಬೆಲೆ?

ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಟಿಕೆಟ್ ಬೆಲೆ ಕಡಿಮೆಯಾಗಿದ್ದು 112ಕ್ಕೆ ಇಳಿಕೆಯಾಗಿದೆ. 

prabhas starrer Adipurush Ticket Price Falls to 112 Rupees sgk

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ತೆಲುಗು ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಆದಿಪುರುಷ್ ತೆರೆಗೆ ಬಂದಿದೆ. ಜೂನ್ 16ಕ್ಕೆ ರಿಲೀಸ್ ಆದ ಆದಿಪುರುಷ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ನೆಗೆಟಿವ್ ಕಾಮೆಂಟ್‌ಗಳು ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಅನೇಕ ಕಲಾವಿದರೂ ಕೂಡ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದ ವಿಎಕ್ಸ್‌ಎಫ್, ಡೈಲಾಗ್, ಪಾತ್ರಗಳ ಚಿತ್ರಣ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಸಿನಿಮಾದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸಿನಿಮಾಗೆ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿದ್ದರು. ಪ್ರಾರಂಭದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತು. ಟ್ರೋಲ್, ಬ್ಯಾನ್‌ಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿತ್ತು. ಆದರೆ ನಂತರದ ದಿನಗಳಲ್ಲಿ ನಿಧಾನಗತಿಯಲ್ಲಿ ಕಲೆಕ್ಷನ್ ನೆಲಕಚ್ಚಿತು. 

ಸಿನಿಮಾತಂಡ ಹೊಸ ಪ್ಲಾನ್ ಮಾಡಿದ್ದು ಟಿಕೆಟ್ ದರವನ್ನು ಕಮ್ಮಿ ಮಾಡಿದೆ. ಪ್ರೇಕ್ಷಕರನ್ನು ಸೆಳೆಯುವ ಕಾರಣಕ್ಕೆ ಕ್ರೇಜ್ ಉಳಿಸಿಕೊಳ್ಳಲು ಸಿನಿಮಾತಂಡ ಸಿನಿಮಾ ಟಿಕೆಟ್ ದರವನ್ನು ಇಳಿಕೆ ಮಾಡಿದೆ.  ಆದಿಪುರುಷ್ ರಿಲೀಸ್‌ಗೂ ಮೊದಲೇ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿತ್ತು. ಕೆಲವು ಪ್ರಮುಖ ನಗರದಲ್ಲಿ ಒಂದು ಟಿಕೆಟ್ ಬೆಲೆ ಬರೋಬ್ಬರಿ 2 ಸಾವಿರಕ್ಕೂ ಅಧಿಕವಿತ್ತು. ಇದೀಗ ಸಿನಿಮಾ ಚೆನ್ನಾಗಿ ಓಡಲಿ ಎನ್ನುವ ಕಾರಣಕ್ಕೆ ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದೆ. 

ಉತ್ತರ ಭಾರತದಲ್ಲಿ ಆದಿಪುರುಷ್ ಟಿಕೆಟ್ ಬೆಲೆ 150 ರೂಪಾಯಿಗೆ ಫಿಕ್ಸ್ ಮಾಡಲಾಗಿದೆ. ಇನ್ನೂ ಕೆಲವು ಕಡೆ ಕೇವಲ 112 ರೂಪಾಯಿಗೆ ಇಳಿಸಲಾಗಿದೆ. ಈ ಬಗ್ಗೆ ಸಿನಿಮಾತಂಡ ಹೆಮ್ಮೆಯಿಂದ ಬಹಿರಂಗ ಪಡಿಸಿದೆ. ಪ್ರೇಕ್ಷಕರು 112ಗೆ ಸಿನಿಮಾ ನೋಡಬಹುದು ಎಂದು ಹೇಳಿದೆ. ಈ ಮೊದಲು ರಿಲೀಸ್ ಆಗಿದ್ದ ಹಿಂದಿಯ ಬ್ರಹ್ಮಾಸ್ತ್ರ ಸಿನಿಮಾತಂಡ ಇದೇ ತಂತ್ರ ಅನುಸರಿಸಿತ್ತು. ಟಿಕೆಟ್ ದರ ಕಡಿಮೆ ಮಾಡಿದ ಬಳಿಕ ಸಿನಿಮಾ ಕಲೆಕ್ಷನ್ ಕೂಡ ಹೆಚ್ಚಾಗಿತ್ತು. ಇದೀಗ ಅದೇ ನಿಯಮವನ್ನು ಆದಿಪುರುಷ್ ತಂಡ ಕೂಡ ಫಾಲೋ ಮಾಡಿದೆ.

ಪ್ರಭಾಸ್ 'ಪ್ರಾಜೆಕ್ಟ್‌ K' ಸಿನಿಮಾದಲ್ಲಿ ಕಮಲ್ ಹಾಸನ್: ಕಮಾಲ್ ಮಾಡುತ್ತಾ ಅಮಿತಾಭ್​-ಕಮಲ್ ಜೋಡಿ

ರಿಲೀಸ್‌ಗೂ ಮೊದಲು ಇದ್ದ ಟಿಕೆಟ್ ಬೆಲೆ

ಆದಿಪುರುಷ್ ಸಿನಿಮಾ ರಿಲೀಸ್‌ಗೂ ಮೊದಲು ಟಿಕೆಟ್ ಬೆಲೆ ಅಚ್ಚರಿ ಮೂಡಿಸಿತ್ತು. 2ಸಾವಿರ ದಾಟಿತ್ತು. ಆದರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ  ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ್ದರು. ದೆಹಲಿ PVR, ವೇಗಾಸ್ LUXE, ದ್ವಾರಕಾ ಸೇರಿದಂತೆ ಅನೇಕ ಕಡೆ 1800 ರೂಪಾಯಿಯಿಂದ 2000 ರೂಪಾಯಿಗೆ ಮಾರಾಟವಾಗಿತ್ತು. ನೋಯ್ಡಾದ ಪಿವಿಆರ್ ಗೋಲ್ಡ್ ಲಾಜಿಕ್ಸ್ ಸಿಟಿ ಸೆಂಟರ್‌ನಲ್ಲಿ ಒಂದು ಟಿಕೆಟ್ ಬೆಲೆ  1650 ಕ್ಕಿಂತ ಹೆಚ್ಚಿತ್ತು. ಇನ್ನೂ PVR ಗೋಲ್ಡ್ ಲಾಜಿಕ್ಸ್ ಸಿಟಿ ಸೆಂಟರ್‌ನಲ್ಲಿ ಫ್ಲ್ಯಾಶ್ ಟಿಕೆಟ್‌ಗಳು 1150 ರೂಪಾಯಿ ದರವಿತ್ತು. 

ಕಟ್ಟಪ್ಪ ಬಾಹುಬಲಿನ ಕೊಂದಿದ್ದು ಯಾಕೆಂದು ಈಗ ಗೊತ್ತಾಯ್ತು: 'ಆದಿಪುರುಷ್' ನೋಡಿ ಪ್ರಭಾಸ್ ಕಾಲೆಳೆದ ಸೆಹ್ವಾಗ್

ಟೆಕೆಟ್ ದರ ಕಡಿಮೆಯಾಗುತ್ತಿದ್ದಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಹೆಚ್ಚಾಗಿದೆ. ಭಾನುವಾರ ಆದಿಪುರುಷ್ ಸಿನಿಮಾ 6 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ ಸಿನಿಮಾ ಭಾರತದಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ವಿಶ್ವದಾದ್ಯಂತ ಆದಿಪುರುಷ್ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ. 

Latest Videos
Follow Us:
Download App:
  • android
  • ios