Adipurush: ಹಿಂದೂಗಳು ಸಹಿಷ್ಣುರೆಂದು ಈ ಮಟ್ಟಕ್ಕೆ ಇಳಿಯೋದಾ ಎಂದು ಹೈಕೋರ್ಟ್ ಗರಂ
ಆದಿಪುರುಷ್ ಚಿತ್ರದ ಬಗ್ಗೆ ಹೈಕೋರ್ಟ್ ಗರಂ ಆಗಿದ್ದು, ನ್ಯಾಯಮೂರ್ತಿಗಳು ಹೇಳಿದ್ದೇನು?
ಈಗ ಎಲ್ಲೆಲ್ಲೂ ಆದಿಪುರುಷ್ (Adipurush) ಚಿತ್ರದ್ದೇ ಮಾತು. ನೆಗೆಟಿವ್ ಕಮೆಂಟ್ಗಳ ಸುರಿಮಳೆ ಒಂದೆಡೆಯಾದರೆ, ಇದನ್ನು ಬ್ಯಾನ್ ಮಾಡುವಂತೆ ಕೋರ್ಟ್ ಬಾಗಿಲಿಗೂ ಹೋದವರು ಹಲವರು. ಜನರು ಮಾತ್ರವಲ್ಲದೇ ರಾಮಾಯಣ- ಮಹಾಭಾರತದ ಹಲವಾರು ಧಾರಾವಾಹಿಗಳಲ್ಲಿ ವಿವಿಧ ಪಾತ್ರಧಾರಿಗಳಾಗಿದ್ದವರೂ ಆದಿಪುರುಷ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಶ್ರೀರಾಮ ಹಾಗೂ ಹನುಮಾನ್‌ಗೆ ಅಪಮಾನ ಮಾಡಲಾಗಿದೆ. ಸಂಭಾಷಣೆ ಕೀಳು ಮಟ್ಟದಲ್ಲಿದೆ ಸೇರಿದಂತೆ, ಎಲ್ಲಾ ಪಾತ್ರಗಳನ್ನು ವಿಚಿತ್ರವಾಗಿ ಸೃಷ್ಟಿಸಲಾಗಿದೆ. ಅದರಲ್ಲಿಯೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅವರನ್ನು ನೋಡಲು ಸಾಧ್ಯವೇ ಇಲ್ಲ, ಈ ಚಿತ್ರಕ್ಕೆ ಪ್ರಭಾಸ್ ಅವರು ರಾಮನಾಗಿರುವುದು ತಮಗೆ ಸ್ವಲ್ಪವೂ ಇಷ್ಟವಿಲ್ಲ... ಹೀಗೆ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ. ರಾಮಾಯಣ ಧಾರಾವಾಹಿಯ ಸೀತೆಯ ಪಾತ್ರಧಾರಿ ದೀಪಿಕಾ, ಮಹಾಭಾರತ ನಟ ಗಜೇಂದ್ರ ಚೌಹ್ಹಾಣ್ ಸೇರಿದಂತೆ ಹಲವು ಪೌರಾಣಿಕ ಪಾತ್ರಧಾರಿಗಳೂ ಆದಿಪುರುಷ್ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಹಿಂದೂಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿಂದೆ ರಾಮಾಯಣ ಧಾರಾವಾಹಿಯ ಸೀತಾ ಪಾತ್ರಧಾರಿ ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ (Dipika Chikhlia) ಕೂಡ ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಆದಿಪುರುಷ್ ಡೈಲಾಗ್ ಬಗ್ಗೆ ಅಲಹಾಬಾದ್ ಹೈಕೋರ್ಟ್ (Alahabad HC) ಛೀಮಾರಿ ಹಾಕಿದೆ. ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸಮಯ ಚಿತ್ರ ಎಂದು ಹೇಳಿಕೊಳ್ಳುವ 'ಆದಿಪುರುಷ'ವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಇದರ ವಿಚಾರಣೆ ವೇಳೆ ಕೋರ್ಟ್, ರಾಮಾಯಣವು ನಮಗೆ ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ಇದನ್ನು ಓದುತ್ತಾರೆ. ಆದರೆ ಚಿತ್ರದಲ್ಲಿನ ಸಂಭಾಷಣೆಯ ಸ್ವರೂಪವು ಗಂಭೀರ ಸಮಸ್ಯೆಯಾಗಿದ್ದು, ಚಲನಚಿತ್ರಗಳು ಕೆಲವು ಸೂಕ್ಷ್ಮ ವಿಷಯಗಳನ್ನು ಮುಟ್ಟಬಾರದು ಎಂದು ಕೋರ್ಟ್ ಹೇಳಿದೆ.
ಆದಿಪುರುಷ್ ವಿವಾದದ ಬೆನ್ನಲ್ಲೇ ಪ್ರತ್ಯಕ್ಷಳಾದ ರಾಮಾಯಣದ ಸೀತೆ! ನಟಿ ಹೇಳಿದ್ದೇನು?
ಇದರ ಜೊತೆಗೆ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, 'ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ, ರಾವಣನನ್ನು ತೋರಿಸಿ ನಂತರ ಅದು ರಾಮಾಯಣವಲ್ಲ ಎಂದು ಹೇಳೋಕಾಗುತ್ತಾ ಎಂದು ಗರಂ ಆಗಿದೆ. ಪುಣ್ಯಕ್ಕೆ ಸಿನಿಮಾ ನೋಡಿದ ಬಳಿಕ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿಲ್ಲ. ನಮ್ಮ ದೇಶದ ಜನರು, ಯುವಕರು ಬುದ್ಧಿ ಇಲ್ಲದವರು ಅಂದುಕೊಂಡಿದ್ದೀರಾ ಎಂದು ನ್ಯಾಯಮೂರ್ತಿಗಳು ಛಡಿಏಟು ನೀಡಿದ್ದಾರೆ. ಹಿಂದೂ ಧರ್ಮದ ಜನರು ಸಹಿಷ್ಣುರು ಎಂಬ ಕಾರಣಕ್ಕೆ ಈ ವಿಷಯದ ಬಗ್ಗೆ ನಾವು ಕಣ್ಣು ಮುಚ್ಚಲಾಗುತ್ತದೆಯೇ ಎಂದು ಪ್ರಶ್ನಿಸಿರುವ ಕೋರ್ಟ್, ಸೆನ್ಸಾರ್ (Sensor) ಮಂಡಳಿ ಎಂದು ಕರೆಯಲ್ಪಡುವ ಚಲನಚಿತ್ರ ಪ್ರಮಾಣೀಕರಣ ಪ್ರಾಧಿಕಾರವು ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ ಎಂದು ಕೇಳಿದೆ.
ಆದಿಪುರುಷ್ ಚಿತ್ರದ ಡೈಲಾಗ್‌ಗಳು ದೊಡ್ಡ ವರ್ಗದ ಪ್ರೇಕ್ಷಕರನ್ನು ಕೆರಳಿಸಿದ್ದು,ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ್ ಮುಂತಶಿರ್ ಶುಕ್ಲಾರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆ ವೇಳೆ ಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ಕೋರ್ಟ್ಗೆ ತಿಳಿಸಿದರು. ಆದರೆ ಇದನ್ನು ಕೋಟ್ರ್ ಮಾನ್ಯ ಮಾಡಲಿಲ್ಲ. ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಿದರೆ ಸಾಲದು. ಒಂದು ವೇಳೆ ಚಿತ್ರದ ಪ್ರದರ್ಶನವನ್ನು ನಿಲ್ಲಿಸಿದರೂ ಈಗಾಗಲೆ ಜನರ ಭಾವನೆಗಳನ್ನು ನೋಯಿಸಿದ್ದಕ್ಕೆ ಪರಿಹಾರ (Compansation) ಸಿಗಲಿದೆಯೇ ಎಂದು ಪ್ರಶ್ನಿಸಿತು. ವಿಚಾರಣೆಯನ್ನು ಮುಂದೂಡಲಾಗಿದೆ.
ಆದಿಪುರುಷ್ ಪಾರ್ಟ್-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್- ರಾಧಿಕಾ ಜೋಡಿ