Asianet Suvarna News Asianet Suvarna News

ತಾಯಿ ಸತ್ತು ಗಂಟೆಗಳಾಗಿತ್ತಷ್ಟೆ, ಭರ್ಜರಿ ಬಿರಿಯಾನಿ ಬ್ಯಾಟಿಂಗ್ ಮಾಡಿದ್ಲಂತೆ ರಾಖಿ ಸಾವಂತ್‌!

ಬಾಲಿವುಡ್ ನಟಿ ರಾಖಿ ಸಾವಂತ್ ಪಬ್ಲಿಸಿಟಿಗಾಗಿ ನಾನಾ ರೀತಿಯ ಗಿಮಿಕ್ ಮಾಡ್ತಾನೆ ಇರ್ತಾರೆ. ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ನಡುವಿನ ಜಟಾಪಟಿ ಹಾದಿಬೀದಿ ರಂಪಾಟವಾಗಿದೆ. ಸದ್ಯ ಜೈಲಿನಿಂದ ಹೊರಬಂದಿರುವ ಆದಿಲ್ ಖಾನ್‌, ರಾಖಿಯಂಥಾ ಕೆಟ್ಟ ಹೆಂಗಸು ಯಾರೂ ಇಲ್ಲ ಎಂದು ಆರೋಪಿಸಿದ್ದಾನೆ.

Rakhi was eating biryani after Rakhis mothers death, Video shown by Adil Khan Vin
Author
First Published Aug 23, 2023, 3:46 PM IST

ಬಾಲಿವುಡ್​ ನಟಿ ರಾಖಿ ಸಾವಂತ್​ ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ನಡುವಿನ ಜಟಾಪಟಿ ಹಾದಿಬೀದಿ ರಂಪಾಟವಾಗಿದೆ. ಆದಿಲ್‌ ನನಗೆ ಮೋಸ ಮಾಡಿದ್ದಾನೆಂದು ರಾಖಿ ಸಾವಂತ್‌ ಈ ಹಿಂದೆಯೇ ಆರೋಪ ಮಾಡಿ, ಆದಿಲ್ ಖಾನ್ ಕಂಬಿಯೆಣಿಸುವಂತೆ ಮಾಡಿದ್ದಳು. ಈಗ ಜೈಲಿನಿಂದ ಹೊರಬಂದಿರುವ ಆದಿಲ್ ಖಾನ್‌, ರಾಖಿಯಷ್ಟು ಕೆಟ್ಟ ಹೆಂಗಸು ಯಾರೂ ಇಲ್ಲ. ಆಕೆ ಧನದಾಹಿ. ನನಗೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ಮಾತ್ರವಲ್ಲ ಆಕೆ ಮೀಡಿಯಾ, ಪಬ್ಲಿಸಿಟಿಗಾಗಿ ಎಂಥಾ ಕೆಟ್ಟ ಕೆಲಸ ಮಾಡೋದಕ್ಕೂ ಹೇಸೋದಿಲ್ಲ ಎಂದಿದ್ದಾನೆ. 

ಇವರಿಬ್ಬರ ಮದುವೆಯ (Marriage) ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ.  ಆದಿಲ್​ ಖಾನ್​ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ (Cheating) ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ (Extra marital affair) ಹೊಂದಿದ್ದಾರೆ,  ಆದಿಲ್‌ಗಾಗಿ  ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು (Complaint) ಕೊಟ್ಟರು. ಇದರಿಂದ ಆದಿಲ್​ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಆದಿಲ್ ಖಾನ್ ರಾಖಿ ಸಾವಂತ ಬಗ್ಗೆ ಈ ರೀತಿ ಆರೋಪ ಮಾಡಿದ್ದಾರೆ.

ರಾಖಿಗೆ 'W' ಸೇರಿಸಿದ್ರೆ ಎಲ್ಲವೂ ಸೂಪರ್​ ಎಂದ ಜ್ಯೋತಿಷಿ: ಅಷ್ಟೇ ಸಾಕಾ ಅಂತಿದ್ದಾರೆ ಫ್ಯಾನ್ಸ್​!

ಮೀಡಿಯಾ ಬಂದಿಲ್ಲಾಂತ ತಾಯಿ ಮೃತದೇಹ ನೋಡೋಕೆ ಹೋಗಿರ್ಲಿಲ್ವಂತೆ ರಾಖಿ!
ರಾಖಿ ಸಾವಂತ್ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ರಾಖಿ ಅದೆಷ್ಟು ಮೀಡಿಯಾ ಮತ್ತು ಅಟೆನ್ಶನ್ ಸೀಕರ್ ಎಂದರೆ ಆಕೆ ಮೀಡಿಯಾದವರು ಬಂದಿಲ್ಲಾಂತ ಮೃತಪಟ್ಟ ತಾಯಿ (Mother)ಯನ್ನು ಸಹ ನೋಡಲು ಬೇಗ ಹೋಗಲ್ಲಿಲ್ಲ ಎಂದು ಆದಿಲ್ ಖಾನ್ ಆರೋಪಿಸಿದ್ದಾರೆ. 'ನಾನು ವಿಷಯ ತಿಳಿದು ತಕ್ಷಣ ನೋಡಲು ಹೋಗಲು ಸಿದ್ಧನಾದೆ. ಆದರೆ ಆಕೆ ಯಾವುದೇ ರೀತಿ ಗಡಿಬಿಡಿಯಲ್ಲಿದ್ದಂತೆ ಕಾಣಲ್ಲಿಲ್ಲ. ನೋಡಿದರೆ ಆಕೆ ಮೀಡಿಯಾ ಬರದೆ ಹೋಗಲಾರೆ ಎಂದಳು' ಎಂದು ಆದಿಲ್ ಖಾನ್ ಹೇಳಿದ್ದಾರೆ.

'ಮಧ್ಯಾಹ್ನ 3.30ಕ್ಕೆ ರಾಖಿ ತಾಯಿ ತೀರಿಕೊಂಡಿರುವ ವಿಷಯ ಗೊತ್ತಾಯಿತು. ನಾನು ತಕ್ಷಣ ರಾಖಿ ಬಳಿ ನೋಡಲು ಹೋಗುವಂತೆ ತಿಳಿಸಿದೆ. ಆದರೆ ಆಕೆ ಹೋಗಲು ನಿರಾಕರಿಸಿದಳು. ಯಾಕೆಂದರೆ ಮೀಡಿಯಾ ಮಂದಿ ಅವತ್ತು ಜವಾನ್ ಸಿನಿಮಾದ ಯಾವುದೋ ಪ್ರೋಗ್ರಾಂ ಕವರ್ ಮಾಡುವಲ್ಲಿ ಬಿಝಿಯಾಗಿದ್ದರು.  ಹೀಗಾಗಿ ರಾತ್ರಿ 7.30ಕ್ಕೆ ಮೀಡಿಯಾದವರು ಬಂದ ನಂತರ ರಾಖಿ ಸಾವಂತ್ ತನ್ನ ತಾಯಿಯ ಮೃತದೇಹ (Deadbody)ವನ್ನು ನೋಡಲು ಹೋದಳು. ನಾನು ಅವತ್ತೇ ನಾನು ಈಕೆ ಅದೆಷ್ಟು ಕೆಟ್ಟ ಹೆಂಗಸೆಂದು ಮನಸ್ಸಿನಲ್ಲೇ ಅಂದುಕೊಂಡೆ' ಎಂದು ಆದಿಲ್ ಖಾನ್ ಹೇಳಿದ್ದಾರೆ.

ನಿನ್ನಂಥವರಿಂದಲೇ ಮುಸ್ಲಿಮರು ಕುಖ್ಯಾತರಾಗ್ತಿರೋದು: ರಾಖಿಯಿಂದ ಆದಿಲ್​ ಖಾನ್ ಹಿಗ್ಗಾಮುಗ್ಗಾ ತರಾಟೆ!

ತಾಯಿ ತೀರಿಕೊಂಡು ಗಂಟೆಗಳಾಗಿತ್ತಿಷ್ಟೆ, ರಾಖಿ ಸಾವಂತ್‌ ನಾನ್‌ವೆಜ್ ಬ್ಯಾಟಿಂಗ್‌
ತಾಯಿ ಸತ್ತ ದಿನ ಎಲ್ಲಾ ಕಾರ್ಯ ಮುಗಿದಿತ್ತು. ಆದರೆ ನನಗೆ ದುಃಖದಲ್ಲಿ ಗಂಟಲೊಳಗೆ ಒಂದು ಹನಿ ನೀರು ಇಳಿಯುತ್ತಿರಲ್ಲಿಲ್ಲ ಆದರೆ ರಾಖಿ ಸಾವಂತ್‌ ಭರ್ಜರಿಯಾಗಿ ನಾನ್‌ವೆಜ್‌ ಆರ್ಡರ್ ಮಾಡಿ ತಿಂದಳು. ರಾತ್ರಿ 1 ಗಂಟೆಗೆ ರಾಖಿ ಬಿರಿಯಾನಿ, ಚಿಕನ್ ಚಿಲ್ಲಿ ಮತ್ತು ಪ್ರಾನ್ ಕಬಾಬ್ ತಿನ್ನುತ್ತಿದ್ದಳು. ಆ ಸಮಯದಲ್ಲಿ ನಾನು ಒಂದು ತುತ್ತು ಅನ್ನ ಸಹ ತಿನ್ನಲು ಸಾಧ್ಯವಾಗಲ್ಲಿಲ್ಲ. ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಆದರೆ ರಾಖಿ ಈ ರೀತಿ ಮಾಡುವುದನ್ನು ನೋಡಿದಾಗ ಅವಳು ಎಷ್ಟು ಕೀಳು ಮಟ್ಟಕ್ಕಿಳಿದಿದ್ದಾಳೆ ಎಂದು ನನಗೆ ಅರ್ಥವಾಯಿತು. ಇಷ್ಟೆಲ್ಲ ಹೇಳುತ್ತಲೇ ಆದಿಲ್ ರಾಖಿ ಸಾವಂತ್ ರಾತ್ರಿ ಊಟ ಮಾಡುತ್ತಿರುವ ವಿಡಿಯೋವನ್ನು ತೋರಿಸಿದ್ದಾರೆ

Follow Us:
Download App:
  • android
  • ios