ರಾಖಿಗೆ 'W' ಸೇರಿಸಿದ್ರೆ ಎಲ್ಲವೂ ಸೂಪರ್ ಎಂದ ಜ್ಯೋತಿಷಿ: ಅಷ್ಟೇ ಸಾಕಾ ಅಂತಿದ್ದಾರೆ ಫ್ಯಾನ್ಸ್!
ರಾಖಿ ಸಾವಂತ್ ವಿರುದ್ಧ ಪದೇ ಪದೇ ಆರೋಪಗಳು ಬರುತ್ತಿರುವುದಕ್ಕೆ ಆಕೆಯ ಹೆಸರಿನ ದೋಷ ಕಾರಣ ಎಂದಿರುವ ಸಂಖ್ಯಾಶಾಸ್ತ್ರಜ್ಞರೊಬ್ಬರು ಹೇಳಿದ್ದೇನು?

ಕಳೆದೆರಡು ದಿನಗಳಿಂದ ಬಾಲಿವುಡ್ ನಟಿ, ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತು ಆಕೆಯ ಮಾಜಿ ಪತಿ, ಮೈಸೂರಿನ ಯುವಕ ಆದಿಲ್ ಖಾನ್ ದುರ್ರಾನಿ ನಡುವೆ ಪತ್ರಿಕಾಗೋಷ್ಠಿಯ ಕಾಳಗ ದೊಡ್ಡದಾಗಿಯೇ ನಡೆಯುತ್ತಿದೆ. ಪತಿ ತನಗೆ ಮೋಸ ಮಾಡಿದ್ದನೆಂದು ದೂರು ಕೊಟ್ಟಿದ್ದ ನಟಿ, ಪತಿಯನ್ನು ಜೈಲಿಗೆ ಅಟ್ಟಿದ್ದರು. ಅಲ್ಲಿಂದ ಬಿಡುಗಡೆಗೊಂಡು ಬಂದಿರುವ ಆದಿಲ್ ಖಾನ್ ನಿನ್ನೆ ರಾಖಿ ವಿರುದ್ಧ ಬಹುದೊಡ್ಡ ಆರೋಪಗಳ ಸುರಿಮಳೆಯನ್ನೇಗೈದಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ರಾಖಿ ಇಂದು ಪತ್ರಿಕಾಗೋಷ್ಠಿ ಕರೆದು ಪತಿಯ ವಿರುದ್ಧ ಕಿಡಿ ಕಾರಿದ್ದಾರೆ. ಹೀಗೆ ಇವರಿಬ್ಬರ ಜಟಾಪಟಿಯ ನಡುವೆ ಜ್ಯೋತಿಷಿ ಎಂಟ್ರಿಯಾಗಿದೆ. ಸಂಖ್ಯಾಶಾಸ್ತ್ರಜ್ಞರೊಬ್ಬರು ರಾಖಿಯ ಬಗ್ಗೆ ಸವಿವರವಾಗಿ ಬರೆದಿದ್ದು ಅವರ ಜೀವನ ಸರಿಹೋಗಬೇಕಾದರೆ ಏನು ಮಾಡಬೇಕು ಎಂದು ಹೇಳಿದ್ದಾರೆ.
ಅಷ್ಟಕ್ಕೂ ಈ ಜ್ಯೋತಿಷಿ (Numerologist) ಹೇಳಿದ್ದು ಏನೆಂದರೆ, ರಾಖಿ ಸಾವಂತ್ಗೆ ಒಂದು ಡಬ್ಲ್ಯು ಸೇರಿಸಿದ್ರೆ ಎಲ್ಲಾ ಸರಿಯಾಗತ್ತಂತೆ. ಅವರ ಪ್ರಕಾರ ರಾಖಿ ಹುಟ್ಟಿದ್ದು, ನವೆಂಬರ್ 1975ರಂದು. ಅಂದರೆ 25-11-1975 ರಂದು. ಸಂಖ್ಯಾಶಾಸ್ತ್ರದಲ್ಲಿ ಎಲ್ಲ ಸಂಖ್ಯೆ ಕೂಡಿದರೆ ಸಿಗುವ ಮೊತ್ತ 7. ಆಕೆಯ ಡೆಸ್ಟಿನಿ ಸಂಖ್ಯೆ, ಆಕೆಯ ಜನ್ಮ ದಿನಾಂಕದ ಒಟ್ಟು 4 {2+5+1+1+1+9+7+5=31=4}. ಈ ಸಂಖ್ಯೆಯ ಸಂಯೋಜನೆಯು ಅವಳನ್ನು ಮೊಂಡಾದ, ನೇರ ಮತ್ತು ಅಸಾಂಪ್ರದಾಯಿಕವಾಗಿಸುತ್ತದೆ. ಆಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಮತ್ತು ವಿಲಕ್ಷಣ ಎಂದು ಗ್ರಹಿಸಲಾಗುತ್ತದೆ. ಇದೇ ಕಾರಣಕ್ಕೆ ಆಕೆ ಪದೇ ಪದೇ ಟೀಕೆಗೆ ಒಳಗಾಗುತ್ತಿರುತ್ತಾರೆ ಎನ್ನುವುದು ಸಂಖ್ಯಾಶಾಸ್ತ್ರಜ್ಞ ಗೌತಮಾಜಾದ್ ಅಭಿಮತ.
ಪ್ರಧಾನಿಯಾಗಲು ರಾಹುಲ್ ಗಾಂಧಿ ಏನ್ ಮಾಡ್ಬೇಕು? ರಾಖಿ ಸಾವಂತ್ ಕೊಟ್ಟ ಟಿಪ್ಸ್ ಇದು
ರಾಖಿ ಸಾವಂತ್, ಅತ್ಯಂತ ಸಮರ್ಪಣೆ ಮತ್ತು ಮಾನಸಿಕ ಶಕ್ತಿಯ ವ್ಯಕ್ತಿಯಾಗಿದ್ದು, ಆಕೆಯ ಜನ್ಮದ ಪ್ರಕಾರ ರಾಖಿಯ ರಾಶಿ ಧನು. ಈ ರಾಶಿಚಕ್ರದ ಚಿಹ್ನೆಯಲ್ಲಿ ಜನಿಸಿರುವ ರಾಖಿಯವರ ವೈಯಕ್ತಿಕ ಅಂಶವೆಂದರೆ ಬೆಂಕಿ. ಅದು ಆಕೆಯನ್ನು ಸದಾ ಶಕ್ತಿ ಮತ್ತು ಉತ್ಸಾಹದಿಂದ ತುಂಬಿಸಿರುತ್ತದೆ. ಸದ್ಯ ಈಕೆಯ ಹೆಸರು Rakhi Sawanth ಎಂದು ಇದೆ. ಇದನ್ನು ಕೂಡಿದರೆ 40 (4) ಮೊತ್ತವಾಗುತ್ತದೆ. ಇದು ಒಂಟಿತನದ ಸಂಖ್ಯೆ. ಇದರರ್ಥ ವ್ಯಕ್ತಿಯು ಸ್ವಯಂ-ಒಳಗೊಂಡಿರುತ್ತಾನೆ, ಏಕಾಂಗಿಯಾಗಿರಬಹುದು ಮತ್ತು ತನ್ನ ಸಹವರ್ತಿಗಳಿಂದ ಪ್ರತ್ಯೇಕಿಸಬಹುದು. ಲೌಕಿಕ ಅಥವಾ ಭೌತಿಕ ದೃಷ್ಟಿಕೋನದಿಂದ ಇದು ಅದೃಷ್ಟದ ಸಂಖ್ಯೆ ಅಲ್ಲ ಎಂದಿದ್ದಾರೆ ಗೌತಮಾಜಾದ್. ಆದ್ದರಿಂದ ಇಂಗ್ಲಿಷ್ನಲ್ಲಿ ರಾಖಿ ಸಾವಂತ್ ಎಂದು ಬರೆಯುವಾಗ ಸಾವಂತ್ಗೆ ಇನ್ನೊಂದು "W" ಅಂದರೆ Sawwanth ಅನ್ನು ಸೇರಿಸಬೇಕು ಎನ್ನುವುದು ಅವರ ಮಾತು.
ಈ ಹೆಸರು ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಇದು ಪ್ರೀತಿಯಲ್ಲಿ (Love) ಮತ್ತು ವಿರುದ್ಧ ಲಿಂಗದೊಂದಿಗೆ ಸಂಪರ್ಕ ಹೊಂದಿದ ಸಂಯೋಜನೆಗಳಲ್ಲಿ ಹಲವಾರು ಉತ್ತಮ ಮತ್ತು ಅದೃಷ್ಟದ ಸ್ನೇಹವಾಗಿದೆ. ಎಲ್ಲಾ ರೀತಿಯ ಪಾಲುದಾರಿಕೆಗಳಿಗೂ ಇದು ಒಳ್ಳೆಯದು. ಭವಿಷ್ಯದ ಘಟನೆಗಳಿಗೆ ಸಂಬಂಧಿಸಿದಂತೆ ಅದು ಕಾಣಿಸಿಕೊಂಡರೆ ಅದು ಅದೃಷ್ಟದ ಸೂಚನೆಯಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ವಿಷಯ ವೈರಲ್ ಆಗುತ್ತಿದ್ದಂತೆಯೇ ನಗುತ್ತಿರುವ ರಾಖಿ ಫ್ಯಾನ್ಸ್ ಥಹರೇವಾರಿ ಜೋಕಿಂಗ್ ಕಮೆಂಟ್ಸ್ ಹಾಕುತ್ತಿದ್ದಾರೆ.
ರಾಖಿ ಸಾವಂತ್ ಟೊಮ್ಯಾಟೊ ಕೃಷಿ: 15 ದಿನದಲ್ಲೇ ಫಲ! ವಿಡಿಯೋ ನೋಡಿ ನೆಟ್ಟಿಗರು ಕಿಡಿ