ಬಂದರ್ ಚಿತ್ರದ 'ಪಿಂಜಾರ' (Pinjara) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಮ್ಯೂಸಿಕ್ ಕಿಕ್ ಮತ್ತು ಸುದೀಪ್ ಶರ್ಮಾ ಬರಹದ ಈ ಹಾಡು ಈಗ ಪ್ರತಿಯೊಬ್ಬರ ಪ್ಲೇಲಿಸ್ಟ್ ಸೇರುತ್ತಿದೆ. ಇದರಲ್ಲಿ ರಾಜ್ ಬಿ ಶೆಟ್ಟಿ ಸ್ಟೆಪ್ಸ್ ಮಿಂಚಿದ್ದಾರೆ..
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಅವರ ಕ್ರೇಜ್ ಈಗ ಗಡಿ ದಾಟಿದೆ. ಹೌದು, ಬಾಲಿವುಡ್‌ನ ಖ್ಯಾತ ವಿವಾದಾತ್ಮಕ ಮತ್ತು ಕ್ರೈಮ್ ಕಥೆಗಳ ಮಾಂತ್ರಿಕ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಹಿಂದಿ ಸಿನಿಮಾ 'ಬಂದರ್' (Bandar) ನಲ್ಲಿ ನಮ್ಮ ಹೆಮ್ಮೆಯ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೇವಲ ಅತಿಥಿ ಪಾತ್ರವಷ್ಟೇ ಅಲ್ಲದೆ, ಒಂದು ಹೈ-ವೋಲ್ಟೇಜ್ ಡ್ಯಾನ್ಸ್ ಸೀಕ್ವೆನ್ಸ್ ಮೂಲಕ ಅವರು ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ವೈರಲ್ ಆದ 'ಪಿಂಜಾರ' ಸಾಂಗ್!
ಇತ್ತೀಚೆಗಷ್ಟೇ ಈ ಚಿತ್ರದ 'ಪಿಂಜರ' (Pinjara) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಅವರ ಮ್ಯೂಸಿಕ್ ಕಿಕ್ ಮತ್ತು ಸುದೀಪ್ ಶರ್ಮಾ ಅವರ ಬರಹವಿರುವ ಈ ಹಾಡು ಈಗ ಪ್ರತಿಯೊಬ್ಬರ ಪ್ಲೇಲಿಸ್ಟ್ ಸೇರುತ್ತಿದೆ. ಅನುರಾಗ್ ಕಶ್ಯಪ್ ಅವರ ಸಿನಿಮಾಗಳಲ್ಲಿ ಸದಾ ಇರುತ್ತಿದ್ದ ಆ ವಿಭಿನ್ನ ಶೈಲಿಯ ಮೇಕಿಂಗ್ ಈ ಹಾಡಿನಲ್ಲೂ ಎದ್ದು ಕಾಣುತ್ತಿದೆ.
ಬಾಬಿ ಡಿಯೋಲ್ ಅವರ ವಿಭಿನ್ನ ಅವತಾರ!
ಇನ್ನು ಈ ಚಿತ್ರದಲ್ಲಿ ಬಾಲಿವುಡ್‌ನ 'ಲಾರ್ಡ್' ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಒಬ್ಬ ವಯಸ್ಸಾದ ಟೆಲಿವಿಷನ್ ಸ್ಟಾರ್ ಆಗಿ ಬಾಬಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಬಹಳ ಸವಾಲಿನಿಂದ ಕೂಡಿದೆ ಎನ್ನಲಾಗುತ್ತಿದೆ. 'ಅನಿಮಲ್' ಚಿತ್ರದ ನಂತರ ಬಾಬಿ ಡಿಯೋಲ್ ಅವರ ಮತ್ತೊಂದು ಕೌತುಕದ ಪಾತ್ರ ಇದಾಗಲಿದೆ.
ಕ್ರೈಮ್ ಥ್ರಿಲ್ಲರ್
ಈ ಚಿತ್ರದಲ್ಲಿ ಸನ್ಯಾ ಎಂ, ಸಪ್ನಾ, ಸಬಾ ಆಜಾದ್ ಮತ್ತು ನಿಖಿಲ್ ಡಿ ಅವರಂತಹ ಪ್ರತಿಭಾವಂತ ತಾರಾಗಣವಿದೆ. ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಜೂನ್ 5, 2026 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಅವರ ವಿಭಿನ್ನ ನಟನೆ ಮತ್ತು ಅನುರಾಗ್ ಕಶ್ಯಪ್ ಅವರ ರಾ ಸ್ಟೈಲ್ ಮೇಕಿಂಗ್ ನೋಡಲು ಈಗಿನಿಂದಲೇ ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರೊಬ್ಬರು ಬಾಲಿವುಡ್‌ನ ಈ ಮಟ್ಟದ ದೊಡ್ಡ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಷಯ!


