ಏಪ್ರಿಲ್ 26 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರಿಗೆ ವಿಶೇಷವಾದ ದಿನ. ಇದೇ ದಿನ ಪುನೀತ್ ನಾಯಕನಾಗಿ ಕನ್ನಡ ಪ್ರೇಕ್ಷಕರ ಮುಂದೆ ಬಂದ ಸುದಿನ. ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಪುನೀತ್ ಅಪ್ಪು(Appu Film) ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು.

ಏಪ್ರಿಲ್ 26 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರಿಗೆ ವಿಶೇಷವಾದ ದಿನ. ಇದೇ ದಿನ ಪುನೀತ್ ನಾಯಕನಾಗಿ ಕನ್ನಡ ಪ್ರೇಕ್ಷಕರ ಮುಂದೆ ಬಂದ ಸುದಿನ. ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಪುನೀತ್ ಅಪ್ಪು(Appu Film) ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಹೌದು, 'ಅಪ್ಪು' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿಯೇ ಅದ್ಭುತ ನಟನೆಯ ಮೂಲಕ ಪುನೀತ್ ಅಭಿಮಾನಿಗಳ ಮನ ಗೆದ್ದಿದ್ದರು. ಡಾ ರಾಜ್ ಕುಮಾರ್ ಮುದ್ದಿನ ಮಗನ ಸಿನಿಮಾಗೆ ಚಿತ್ರಪ್ರಿಯರು ಮಾತ್ರವಲ್ಲದೆ ಸ್ಟಾರ್ ನಟರು ಫಿದಾ ಆಗಿದ್ದರು.

ಮಗನ ಸಿನಿಮಾ ನೋಡಿ ಸ್ವತಃ ತಂದೆ ರಾಜ್ ಕುಮಾರ್ ಅವರೇ ಸಂತಸ ವ್ಯಕ್ತಪಡಿಸಿದ್ದರು. ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಪುನೀತ್ ಅಭಿನಯದ ಅಪ್ಪು ಸಿನಿಮಾ ನೋಡಿ ಹಾಡಿಹೊಗಳಿದ್ದರು. ಪವರ್ ಸ್ಟಾರ್ ಪವರ್ ಫುಲ್ ಫೈಟಿಂಗ್, ಡ್ಯಾನ್ಸ್ ನೋಡಿ ರಜನಿಕಾಂತ್ ಖುಷಿ ಪಟ್ಟಿದ್ದರು. ಮೊದಲ ಸಿನಿಮಾದಲ್ಲೆ ಸೆಂಚುರಿ ಬಾರಿದ ಅಪ್ಪು ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷಗಳಾಗಿದೆ. ಆದರೆ ಪವರ್ ಸ್ಟಾರ್ ನಮ್ಮೊಂದಿಗೆ ಇಲ್ಲ. ಆದರೆ ಅವರ ನೆನಪು ಪಾತ್ರ ಹಸಿರಾಗಿದೆ.

ಏಪ್ರಿಲ್ 20, 2002ರಲ್ಲಿ ಬಿಡುಗಡೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದ ಅಪ್ಪು ಸಿನಿಮಾಗೆ 20 ವರ್ಷ ಕಳೆದಿದೆ. ಅಂದಹಾಗೆ ಈ ಸಿನಿಮಾಗೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು. ಈ ಮೂಲಕ ಪೂರಿ ಜಗನ್ನಾಥ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗಿ ರಕ್ಷಿತಾ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ರಕ್ಷಿತಾ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳು ಕಳೆದಿವೆ. ಈ ವಿಶೇಷ ದಿನದ ಬಗ್ಗೆ ಕ್ರೇಜಿ ಕ್ವೀನ್ ಭಾವುಕ ಪತ್ರ ಬರೆದಿದ್ದಾರೆ.

Dr Rajkumar Birthday; ಅಪ್ಪಾಜಿಗೆ ಪುನೀತ್ ಮಾಡಿದ್ದ ಕೊನೆಯ ವಿಶ್ ಹೀಗಿತ್ತು

ರಕ್ಷಿತಾ ಭಾವುಕ ಪತ್ರ

'ಅಪ್ಪು ಬಿಡುಗಡೆಯಾಗಿ 20 ವರ್ಷಗಳು ಕಳೆದಿವೆ. ಎಷ್ಟು ಅದ್ಭುತವಾದ ಸಿನಿಮಾ ಮತ್ತು ಅದ್ಭುತವಾದ ಅನುಭವ. ಇಲ್ಲಿಯವರೆಗೆ ನನಗೆ ಸ್ಫೂರ್ತಿಯಾಗಿರುವ ಅತ್ಯಂತ ಶಕ್ತಿಶಾಲಿ ಮಹಿಳೆಯನ್ನು ನಾನು ಭೇಟಿಯಾದೆ, ಅವರೇ ಪಾರ್ವತಮ್ಮ ರಾಜ್ ಕುಮಾರ್. ಅವರು ಇಲ್ಲದೆ ನಾನು ಇವತ್ತು ಏನು ಆಗಿದ್ದೇನು ಅದು ಸಾಧ್ಯವಾಗುತ್ತಿರಲಿಲ್ಲ. ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆ ನಗು ಎಲ್ಲಕ್ಕಿಂತ ಹೆಚ್ಚು. ಪುನೀತ್ ರಾಜ್ ಕುಮಾರ್ 20 ವರ್ಷಗಳು ಕಳೆದಿವೆ. ಅಭಿನಂದನೆಗಳು ನನ್ನ ಗೆಳೆಯ. ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಗಾಡ್ ಫಾದರ್ ಪುರಿ ಜಗನ್ನಾಥ್ ಅವರಿಗೆ ಧನ್ಯವಾದಗಳು. ಅಪ್ಪು ಈ ಸಿನಿಮಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ. ಇವತ್ತು ನನಗೆ ನೆನಪಿಸಿ ವಿಸ್ ಮಾಡಿದ ಎಲ್ಲರಿಗೂ ಧನ್ಯವಾದಗಳು. ನಾನು ನನ್ನ ಜೀವದ ಅರ್ಧಕ್ಕಿಂತ ಹೆಚ್ಚು ಸಮಯ ಕಳೆದಿದ್ದೀನಿ. ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ನಾನು ತುಂಬಾ ಭಾವುಕಳಾಗಿದ್ದೇನೆ' ಎಂದು ದೀರ್ಘವಾಗಿ ಬರೆದಿದ್ದಾರೆ.

View post on Instagram

ತಮಿಳುನಾಡು ಜಾತ್ರೆಯ ಕ್ರೇನ್‌ನಲ್ಲಿ ರಾರಾಜಿಸಿದ ಅಪ್ಪು, ವಿಶೇಷ ನಮನ..!

ಅದ್ದೂರಿ ಶತದಿನೋತ್ಸವ ಆಚರಣೆಯಲ್ಲಿ ರಜನಿಕಾಂತ್

ಅಂದಹಾಗೆ ಪುನೀತ್ ಮತ್ತು ರಕ್ಷಿತಾ ನಟನೆಯ ಚೊಚ್ಚಲ ಚಿತ್ರ ಅಪ್ಪು ಯಶಸ್ವಿ 100 ದಿನಗಳನ್ನು ಪೂರೈಸಿತ್ತು. ಈ ಸಂತಸದಲ್ಲಿ ರಾಜ್ ಕುಟುಂಬ ನೂರರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಸಂಭ್ರಮ ಕೂಟದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ರು. ಪುನೀತ್ ಅಭಿನಯದ ಅಪ್ಪು ಸಿನಿಮಾ ನೋಡಿ ರಜನಿಕಾಂತ್ ಹಾಡಿಹೊಗಳಿದ್ದರು. ಈ ಸಿನಿಮಾ ಬಳಿಕ ಅಪ್ಪು ಮತ್ತೊಂದು ಹಿಟ್ ಅಭಿ ಚಿತ್ರದ ಮೂಲಕ ಭರ್ಜರಿ ಸಕ್ಸಸ್ ಕಂಡರು.