Asianet Suvarna News Asianet Suvarna News

ಇನ್ನೊಬ್ಬ ವ್ಯಕ್ತಿಗೆ ಕಿಸ್ ಮಾಡಿದ್ರೆ ನನ್ನ ಪತಿಗೆ ನಾನು ಉತ್ತರಿಸಬೇಕು: ನಟಿ ಪ್ರಿಯಾ ಮಣಿ ಖಡಕ್ ಮಾತು

ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳಲ್ಲ, ಇನ್ನೊಬ್ಬ ವ್ಯಕ್ತಿಗೆ ಕಿಸ್ ಮಾಡಿದ್ರೆ ನನ್ನ ಪತಿಗೆ ಉತ್ತರಿಸಬೇಕಾಗುತ್ತೆ ಎಂದು  ನಟಿ ಪ್ರಿಯಾ ಮಣಿ ಹೇಳಿದ್ದಾರೆ. 

Priya Mani Raj abbout on her no kis and no make-out onscreen policy sgk
Author
First Published Jun 30, 2023, 6:02 PM IST

ತೆರೆಮೇಲೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ವಿಚಾರ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸದ್ಯ ಲಸ್ಟ್ ಸ್ಟೋರಿ 2 ರಿಲೀಸ್ ಆದ ಬಳಿಕವಂತೂ ಈ ಬಗ್ಗೆ ಚರ್ಚೆ ಜೋರಾಗಿದೆ. ಕೆಲವು ನಟಿಯರು ತೆರೆಮೇಲೆ ಕಿಸ್ಸಿಂಗ್ ಹಾಗೂ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಟ್ಟುನಿಟ್ಟಾಗಿದ್ದಾರೆ. ಆದರೆ ಇನ್ನೂ ಕೆಲವರು ಯಾವ ಪಾತ್ರವಾದರೂ ಅದಕ್ಕೆ ಬಣ್ಣ ಹಚ್ಚಲು ಸಿದ್ದರಾಗಿರುತ್ತಾರೆ. ತೆರೆಮೇಲೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ನಟಿ ತಮನ್ನಾ ಕೂಡ ನೋ ಕಿಸ್ಸಿಂಗ್ ಸೀನ್ ನಿಯಮ ಅನುಸರಿಸಿದ್ದರು. ಆದರೆ 18 ವರ್ಷಗಳ ಈ ನಿಯಮವನ್ನು ಬ್ರೇಕ್ ಮಾಡಿ ಲಸ್ಟ್ ಸ್ಟೋರಿಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಕಿಸ್ಸಿಂಗ್ ದೃಶ್ಯಗಳನ್ನು ಮಾಡುವ ಬಗ್ಗೆ ನಟಿ ಪ್ರಿಯಮಣಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

ದಿ ಫ್ಯಾಮಿಲಿ ಮ್ಯಾನ್ ನಟಿ ಕೂಡ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಸಿನಿಮಾರಂಗದಲ್ಲಿ 20 ವರ್ಷಗಳನ್ನು ಪೂರೈಸಿರುವ ನಟಿ ಪ್ರಿಯಾಮಣಿ ಅನೇಕ ಪಾತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಈ ವೇಳೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶದಲ್ಲಿ ಪ್ರಿಯಾ ಮಣಿ ನೋ ಕಿಸ್ಸಿಂಗ್ ದೃಶ್ಯ ಎಂದು ಹೇಳಿದ್ದಾರೆ.  

'ನಾನು ತೆರೆಮೇಲೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದು ನನಗೆ ಇಷ್ಟವಿಲ್ಲ. ಒಂದು ಕೇವಲ ಒಂದು ಪಾತ್ರ, ನನ್ನ ಕೆಲಸವದು ನನಗೆ ಗೊತ್ತು. ಆದರೆ ನಾನು ಇನ್ನೊಬ್ಬ ವ್ಯಕ್ತಿಯ ಜೊತೆ ತೆರೆಮೇಲೆ ಕಿಸ್ ಮಾಡಬೇಕಾದರೆ ಆರಾಮದಾಯಕವಾಗಿರುವುದಿಲ್ಲ. ಏಕೆಂದರೆ ನಾನು ನನ್ನ ಪತಿಗೆ ಉತ್ತರಿಸಬೇಕಾಗಿದೆ' ಎಂದು ಹೇಳಿದ್ದಾರೆ. 

'ನನ್ನ ಕಡೆಯಿಂದ ಇದು ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ನಾವು ಒಬ್ಬರನ್ನೊಬ್ಬರು ನೋಡುತ್ತಿದ್ದರೂ ಸಹ, ನಾನು ಯಾರನ್ನಾದರೂ ಚುಂಬಿಸಬೇಕಾದ ಯಾವುದೇ ಪಾತ್ರವನ್ನು ನಾನು ಎಂದಿಗೂ ಸ್ವೀಕರಿಸಲಿಲ್ಲ. ನನಗೆ ಅಂತ ಪಾತ್ರ ಬಂದರೂ ಸಹ, ನಾನು ವಿಚಿತ್ರವಾಗಿ ಇದ್ದೇನೆ ಎಂದು ನಾನು ಖಂಡಿತವಾಗಿ ಹೇಳುತ್ತೇನೆ' ಎಂದು ಹೇಳಿದರು. 

ಜನರು ಬದಲಾಗಿದ್ದಾರೆ, ಮುಂಬೈನಲ್ಲಿ ಸೌತ್ ಸಿನಿಮಾಗಳ ಹವಾ ಖುಷಿ ಕೊಡುತ್ತಿದೆ: ಪ್ರಿಯಾಮಣಿ

'ಹಿಸ್ ಸ್ಟೋರಿ ಥೀಮ್ ಎಂಬ ವೆಬ್ ಶೋನಲ್ಲಿ ನನ್ನ ಪಾತ್ರದ ಪತಿ ಸಲಿಂಗಕಾಮಿ. ಅದಲ್ಲಿ ನಾನು ಸತ್ಯದೀಪ್ ಜೊತೆ ಹಾಟ್ ಸೀನ್ ಮಾಡಬೇಕಿತ್ತು. ಕಥೆಯನ್ನು ನನಗೆ ವಿವರಿಸಿದಾಗ, ನಿರ್ದೇಶಕರು ನನಗೆ ದೃಶ್ಯದ ಬಗ್ಗೆ ಹೇಳಿದ್ದರು ಮತ್ತು ನಾನು ತೆರೆಯ ಮೇಲೆ ಕಿಸ್ ಮಾಡುವುದಿಲ್ಲ ಅಥವಾ ಮೇಕೌಟ್ ಮಾಡುವುದಿಲ್ಲ ಎಂದು ನನ್ನ ಒಪ್ಪಂದದಲ್ಲಿ ಬರೆಯಲಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕೆನ್ನೆಯ ಮೇಲೆ ಮುತ್ತು ಕೊಡುವುದಕ್ಕಿಂತ ಹೆಚ್ಚಿನದನ್ನು ನಾನು ಆರಾಮದಾಯಕವಾಗಿಲ್ಲ. ಅಂತಹ ದೃಶ್ಯಗಳನ್ನು ಹೊಂದಿರುವ ಅನೇಕ ಪ್ರಾಜೆಕ್ಟ್‌ಗಳು ನನ್ನ ದಾರಿಯಲ್ಲಿ ಬಂದವು ಮತ್ತು ನಾನು ಅದರಲ್ಲಿ ಆರಾಮದಾಯಕವಾಗಿಲ್ಲ ಎಂದು ಅವರಿಗೆ ನೇರವಾಗಿ ಹೇಳಿದೆ' ಎಂದು ಪ್ರಿಯಾ ಮಣಿ ವಿವರಿಸಿದರು. 

ಟೀಕೆಗೆ ತಿರುಗೇಟು ಕೊಟ್ಟ ಪ್ರಿಯಾಮಣಿ -ಮುಸ್ತಫಾ ಜೋಡಿಯ ಸುಂದರ ಫೋಟೋಸ್

'ನನ್ನ ಕುಟುಂಬದ ಎರಡೂ ಕಡೆಯವರು ಯಾವುದೇ ಸಿನಿಮಾ ಬಂದಾಗ ವೀಕ್ಷಿಸುತ್ತಾರೆ ಎಂದು ನನಗೆ ತಿಳಿದಿದೆ. ಇದು ನನ್ನ ಕೆಲಸ ಎಂದು ಅವರಿಗೂ ತಿಳಿದಿದೆ. ಆದರೆ ಅವರು ಕುಗ್ಗುವುದು ನನಗೆ ಇಷ್ಟವಿಲ್ಲ. ಮದುವೆಯಾದ ಮೇಲೂ ನನ್ನ ಸೊಸೆ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ಅವರು ಯೋಚಿಸುವುದು ನನಗೆ ಇಷ್ಟವಿಲ್ಲ. ಬೇರೆಯವರು ಅವಳ ಮೇಲೆ ಏಕೆ ಕೈ ಹಾಕುತ್ತಿದ್ದಾರೆ? ಅವರು ಅದನ್ನು ಇಷ್ಟಪಡುವುದಿಲ್ಲ. ಆದರೆ ಅದು ನನ್ನ ವೈಯಕ್ತಿಕ ಆಯ್ಕೆಯಾಗಿದೆ' ಎಂದು ಪ್ರಿಯಾ ಮಣಿ ಹೇಳಿದರು. 

Follow Us:
Download App:
  • android
  • ios