ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಪ್ರಿಯಾಮಣಿ, ಸೌತ್ ಸಿನಿಮಾಗಳ ಹವಾ ಎಷ್ಟಿದೆ ಎಂದು ಮಾತನಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಜೋಡಿಯಾಗಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ಹೆಸರಿಡದ ತೆಲುಗು ವೆಸ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾ ಚಿತ್ರೀಕರಣಕ್ಕೆಂದು ನಾನಾ ರಾಜ್ಯಗಳಿಗೆ ಭೇಟಿ ನೀಡಿ ಈಗ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ವೆಬ್ ಚಿತ್ರದ ಜೊತೆ ಸೌತ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾಮಣಿ ಮಾತು:
'ನಾನು ಈಗ ತೆಲುಗು ವೆಬ್ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ತುಂಬಾ ಪ್ರಯಾಣ ಮಾಡುತ್ತಿರುವೆ. Odishaಯಿಂದ ವೆಸ್ಟ್ ಬೆಂಗಾಲವರೆಗೂ, ಗಾಯಾ ಮತ್ತು ವಾರಣಾಸಿ ಪ್ರಯಾಣ ಮಾಡಿ ಜಮ್ಮುನಲ್ಲಿ ಕೊನೆ ಹಂತ ಚಿತ್ರೀಕರಣ ಮಾಡುತ್ತೀವಿ. ಇದರ ಜೊತೆ ರಿಯಾಲಿಟಿ ಶೋ (Reality Show) ಚಿತ್ರೀಕರಣ ಮಾಡುತ್ತಿದ್ದೀನಿ. ಕೈಯಲ್ಲಿ ಮೂರ್ನಾಲ್ಕು ಪ್ರಾಜೆಕ್ಟ್‌ಗಳು ಇದೆ ಶೀಘ್ರದಲ್ಲಿ ಅನೌನ್ಸ್ ಮಾಡುತ್ತೀನಿ' ಎಂದು ಪ್ರಿಯಾಮಣಿ ಹೇಳಿದ್ದಾರೆ.

'ನನ್ನ ತಮಿಳು Quotation Gang ಸಿನಿಮಾ ಕೆಲಸಗಳು ನಡೆಯುತ್ತಿದೆ. ಇದರಲ್ಲಿ ಜಾಕಿ ಶ್ರಾಫ್ (Jackie Shroff) ಮತ್ತು ಸನ್ನಿ ಲಿಯೋನಿ (Sunny leone) ನಟಿಸುತ್ತಿದ್ದಾರೆ. ತಮಿಳು ಸಿನಿಮಾ ಆಗಿರುವುದರಿಂದ ಚಿತ್ರತಂಡ ಪ್ಯಾನ್ ಇಂಡಿಯಾ ರಿಲೀಸ್‌ಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಏಕೆಂದರೆ ಬೇರೆ ಭಾಷೆ ಕಲಾವಿದರು ಕೂಡ ಇದ್ದಾರೆ. ಚಿತ್ರದಲ್ಲಿ ಎಲ್ಲರಿಗೂ ಸಂದೇಶವಿದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಪ್ರಿಯಾ ಮಾತನಾಡಿದ್ದಾರೆ.
BhamaKalapam; ಪ್ರಿಯಾಮಣಿ ತೆಲುಗು ಸಿನಿಮಾಗೆ ರಶ್ಮಿಕಾ ಮಂದಣ್ಣ ವಿಶ್!
ಸೌತ್ ಸಿನಿಮಾಗಳು:
'ಸೌತ್ ಸಿನಿಮಾಗಳು ಗುರುತಿಸಿಕೊಳ್ಳುತ್ತಿರುವ ರೀತಿ ನೋಡಿ ನಾನು ಥ್ರಿಲ್ ಆಗಿದ್ದೀನಿ. ನಮ್ಮ ಅದೆಷ್ಟೋ ಒಳ್ಳೆ ಸಿನಿಮಾಗಳು ಬೇರೆ ಭಾಷೆಯಲ್ಲಿ ರಿಮೇಕ್ ಆಗುತ್ತಿದೆ. ಈ ಲಿಸ್ಟ್ ಸೇರಿಕೊಳ್ಳುವ ಕೆಲವು ಸಿನಿಮಾಗಳಲ್ಲಿ ನಾನು ಇದ್ದೀನಿ ಅನ್ನೋದು ಹೆಮ್ಮೆ. ರಿಮೇಕ್ ಬೇಡ original ಸಿನಿಮಾ ನೋಡುತ್ತೀವಿ ಎಂದು ಜನರು ಮುಂದಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿರುವ ನನ್ನ ಸ್ನೇಹಿತರು ಮತ್ತು ತಂತ್ರಜ್ಞರು ನಮ್ಮ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಅದರಲ್ಲೂ ಆರ್‌ಆರ್‌ಆರ್ (RRR) ಮತ್ತು ಕೆಜಿಎಫ್ (KGF chapter 2) ಸಿನಿಮಾದೇ ಜಪಾ. ನನಗೆ ಇದು ಹೆಮ್ಮೆ ಇರುವಂತ ವಿಚಾರ ನಮ್ಮ ಸೌತ್ ಇಂಡಿಯಾ ಬೆಳೆಯುತ್ತಿದೆ' ಎಂದಿದ್ದಾರೆ ಪ್ರಿಯಾಮಣಿ.
Priyamani: ನೀವು ತುಂಬಾ ಸ್ಲಿಮ್ ಹಾಗೂ ಹಾಟ್ ಎಂದ ಅಲ್ಲು ಅರ್ಜುನ್
ಬೇರೆ ಭಾಷೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದ್ರೆ ಇದು ಸರಿಯಾದ ಸಮಯ ಎಂದು ಹೇಳುವ ಪ್ರಿಯಾ 'ಈಗ ಯಾವುದೇ ಚಿತ್ರರಂಗ ನೋಡಿದರೂ ಪ್ಯಾನ್ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದಾರೆ. ಸಿನಿಮಾ ಮಾಡುವವರು ಡಬ್ಬಿಂಗ್ ಮಾಡಿಸಿ ರಾಜ್ಯಾದ್ಯಂತ ರಿಲೀಸ್ ಮಾಡಿಸುತ್ತಿದ್ದಾರೆ. ಈ ಮೂಲಕ ಅನೇಕ ಸಿನಿ ರಸಿಕರಿಗೆ ಹತ್ತಿರವಾಗುತ್ತಿದ್ದಾರೆ' ಎಂದು ಹೇಳಿದ್ದಾರೆ.
ಫ್ಯಾಮಿಲಿ ಮ್ಯಾನ್ (Family Man) ಚಿತ್ರದಲ್ಲಿ ಪ್ರಿಯಾಮಣಿ ಆಯ್ಕೆ ಮಾಡಿಕೊಂಡ ಪಾತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ. 'It is better late than never, ಕೊನೆಯಲ್ಲಿ ಹೇಳುವುದಕ್ಕೆ ಇಷ್ಟ ಪಡುವುದು ಇಷ್ಟೆ...ನಾವೆಲ್ಲರೂ ಭಾರತದಲ್ಲಿರುವ ಕಲಾವಿದರು ದಕ್ಷಿಣ ಉತ್ತರ ಅಂತ ಬ್ರ್ಯಾಂಡ್ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಒಂದೇ ಕುಟುಂಬದ ಕಲಾವಿದರಂತೆ ಇರಬೇಕು. ಸೌತ್ ಇಂಡಿಯಾ ಕಲಾವಿದರಿಗೆ ಈಗ ಒಳ್ಳೆ ರೀತಿಯಲ್ಲಿ ಗುರುತು ಸಿಗುತ್ತಿದೆ. ನಾನು ಪುಣ್ಯ ಮಾಡಿರುವೆ ಸಿನಿಮಾ ಮತ್ತು ಓಟಿಟಿ ಎರಡೂ ಕಡೆ ನನಗೆ ಒಳ್ಳೆಯ ಅವಕಾಶ ಸಿಗುತ್ತಿದೆ' ಎಂದು ಪ್ರಿಯಾ ಮಾತನಾಡಿದ್ದಾರೆ.
