Sandalwood

ಪ್ರಿಯಾಮಣಿ

ಕನ್ನಡ, ತಮಿಳು, ತೆಲುಗು ಸೇರಿ ಪಂಚ ಭಾಷೆಯಲ್ಲಿ ನಟಿಸಿ ಆದ್ಭುತ ನಟಿ ಎನಿಸಿಕೊಂಡಿರುವ ಪ್ರಿಯಾಮಣಿ ಹೆಚ್ಚು ಸುದ್ದಿಯಾಗಿದ್ದು ಮಾತ್ರ ತಮ್ಮ ಮದುವೆಯಿಂದ. 
 

Image credits: Instagram

ಮುಸ್ತಫಾ ರಾಜ್ ಜೊತೆ ಮದುವೆ

ಪ್ರಿಯಾಮಣಿಯವರು ಇಸ್ಲಾಂ ಧರ್ಮದವರಾದ ಮುಸ್ತಫಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದರಿಂದ ಅವರು ತೀವ್ರ ಟೀಕೆಗೆ ಒಳಗಾಗಿದ್ದರು. 
 

Image credits: Instagram

ಗರಂ ಆದ ಪ್ರಿಯಾಮಣಿ

ನಾನು ಪ್ರೀತಿಸಿ ಮದುವೆ ಆಗಿದ್ದು ತಪ್ಪಾ?  ನಾನು ಪ್ರೀತಿಸಿದವರನ್ನು ಮದುವೆಯಾದರೆ ಟ್ರೋಲ್​ ಮಾಡುತ್ತಾರೆ. ಇದರಿಂದ ತುಂಬಾ ಬೇಸರವಾಗಿದೆ ಎಂದು ಟ್ರೋಲ್ ಮಾಡುವವರ ವಿರುದ್ಧ ತಿರುಗಿ ಬಿದ್ದಿದ್ದಾರೆ. 
 

Image credits: Instagram

ನನ್ನ ಗಂಡ ಐಸೀಸ್ ಅಲ್ಲ

ಲವ್ ಜಿಹಾದ್ ಎಂದು ಟೀಕೆ ಮಾಡುತ್ತಿದ್ದವರಿಗೆ ಉತ್ತರಿಸಿದ ಪ್ರಿಯಾಮಣಿ ನನ್ನ ಗಂಡ ಐಸೀಸ್ ಅಲ್ಲ, ಜೊತೆಗೆ ನನ್ನ ಮಕ್ಕಳು ಜಿಹಾದಿಗಳಾಗೋಲ್ಲ. ಎಲ್ಲರೂ ಲವ್ ಜಿಹಾದ್ ಮಾಡಲ್ಲ ಎಂದು ಹೇಳಿದ್ದಾರೆ. 
 

Image credits: Instagram

ಮುಸ್ತಫಾಗೆ ಇದು ಎರಡನೇ ಮದುವೆ

ಇನ್ನು ಪ್ರಿಯಾಮಣಿ ಮದುವೆ ವಿಷಯ ಈ ಹಿಂದೆಯೇ ಭಾರಿ ಸುದ್ದಿಯಾಗಿತ್ತು, ಯಾಕಂದ್ರೆ ಮುಸ್ತಾಫಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ ತಲಾಖ್ ನೀಡದ ಹಿನ್ನೆಲೆಯಲ್ಲಿ ದೂರು ಕೂಡ ದಾಖಲಾಗಿತ್ತು. 
 

Image credits: Instagram

ಮುಸ್ತಫಾ ಏನ್ ಮಾಡ್ತಿದ್ದಾರೆ?

ಉದ್ಯಮಿಯಾಗಿರುವ ಮುಸ್ತಫಾ ರಾಜ್ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಲಾಂಗ್ ಡಿಸ್ಟನ್ಸ್ ರಿಲೇಶನ್‌ಶಿಪ್‌ನಲ್ಲಿದ್ದರೂ ಇಬ್ಬರ ಸಂಬಂಧ ಸೇಫ್ ಆಗಿದೆ, ಇಬ್ಬರಿಗೂ ನಂಬಿಕೆ ಇದೆ ಎನ್ನುತ್ತಾರೆ ನಟಿ. 
 

Image credits: Instagram

ಮದುವೆಯಾಗಿ ಐದು ವರ್ಷ

ಹಲವಾರು ಬಾರಿ ಪ್ರಿಯಾಮಣಿ -ಮುಸ್ತಫಾ ನಡುವೆ ಸರಿಯಿಲ್ಲ, ಇಬ್ಬರು ದೂರಾಗಿದ್ದಾರೆ ಎಂದು ಕೇಳಿ ಬರುತ್ತಿತ್ತು, ಆದರೆ ಇದನ್ನೆಲ್ಲಾ ಇಗ್ನೋರ್ ಮಾಡಿ ಪ್ರಿಯಾ ಐದು ವರ್ಷಗಳ ಸುಂದರ ದಾಂಪತ್ಯ ಜೀವನ ನಡೆಸಿದ್ದಾರೆ. 
 

Image credits: Instagram

ಕರಿಯರ್

ಇನ್ನು ಕರಿಯರ್ ವಿಷ್ಯಕ್ಕೆ ಬಂದ್ರೆ ಪ್ರಿಯಾಮಣಿ ಸದ್ಯ ತಮಿಳಿನ ಕ್ವಾಂಟೇಷನ್ ಗ್ಯಾಂಗ್, ಕನ್ನಡದ ಕೈಮರ, ಬಾಲಿವುಡ್‌ ನ ಮೈದಾನ್ ಹಾಗೂ ಜವಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
 

Image credits: Instagram
Find Next One