ಯುವ ರಾಜ್‌ಕುಮಾರ್ ಚಿತ್ರಕ್ಕೆ ಪ್ರಭಾಸ್ ಸಲಾರ್ ಪೈಪೋಟಿ; ಯಾರಿಗೆ ಒಲಿಯುವಳು ವಿಜಯಲಕ್ಷ್ಮೀ?
ಪ್ರಭಾಸ್ ನಟನೆ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಹೀಗಾಗಿ ಸಹಜವಾಗಿಯೇ ಈ ಚಿತ್ರದ ಬಗ್ಗೆ ಎಲ್ಲಾ ಕಡೆ ಕ್ರೇಜ್ ಹೆಚ್ಚಿದೆ. ಆದರೆ ಪ್ರಭಾಸ್ ನಟನೆಯ ಇತ್ತೀಚಿನ ಚಿತ್ರಗಳು ಸತತವಾಗಿ ಸೋಲು ಕಂಡಿದ್ದು, ಸಹಜವಾಗಿ ಪ್ರಭಾಸ್ ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸದೊಂದು ಸೆನ್ಸೇಷನಲ್ ಸುದ್ದಿ ಹರಡುತ್ತಿದೆ. ಇದು ನಿಜವೇ ಆಗಿದ್ದರೆ, ಅಚ್ಚರಿ ಸಂಗತಿಯೇ ಹೌದು. ಏಕೆಂದರೆ, ಪ್ರಭಾಸ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ಹಾಗೂ ಡಾ ರಾಜ್‌ಕುಮಾರ್ ಮೊಮ್ಮಗ 'ಯುವ' ರಾಜ್‌ಕುಮಾರ್ ನಟನೆಯ 'ಯುವ' ಚಿತ್ರವು ಒಂದೇ ದಿನ ಬಿಡುಗಡೆ ಕಾಣಲಿದೆ ಎನ್ನುವ ಸುದ್ದಿ ಬಂದಿದೆ. ಹೀಗೇನಾದರೂ ಆದರೆ, ಈ ಎರಡೂ ಸಿನಿಮಾಗಳು ಒಂದಕ್ಕೊಂದು ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಶಾಂತ್ ನೀಲ್ 'ಸಲಾರ್' ಚಿತ್ರವು ಇಂದು, ಅಂದರೆ 28 ಸೆಪ್ಟೆಂಬರ್ 2023 ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣಬೇಕಿತ್ತು. ಅನಿವಾರ್ಯ ಕಾರಣಗಳಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಇದೀಗ ಹೊಸ ದಿನಾಂಕ ಅನೌನ್ಸ್ ಆಗಲಿದೆ. ಸಿಕ್ಕ ಮಾಹಿತಿ ಪ್ರಕಾರ, ಸಲಾರ್ ಚಿತ್ರವು ಡಿಸೆಂಬರ್ 22 ರಂದು (22 ಡಿಸೆಂಬರ್ 2023) ರಂದು ಬಿಡುಗಡೆ ಘೋಷಿಸಿದೆ. ಅದೇ ದಿನ ಯುವ ರಾಜ್ ಚಿತ್ರ 'ಯುವ' ಕೂಡ ಬಿಡುಗಡೆಗೆ ಸಜ್ಜಾಗಿದೆ. ಯುವ ಚಿತ್ರದ ನಿರ್ಮಾಣ ಸಂಸ್ಥೆ 'ಹೊಂಬಾಳೆ' ಈ ಚಿತ್ರವನ್ನು ಡಿಸೆಂಬರ್ 22ಕ್ಕೆ ಬಿಡುಗಡೆ ಮಾಡಲಾಗುವುದು ಎಂದಿದೆ. ಯುವ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಹೈಪ್ ಪಡೆದಿರುವ ಚಿತ್ರ ಎಂಬುದನ್ನು ಹೊಸದಾಗಿ ಹೇಳಬೇಕೆಂದಿಲ್ಲ.
ಶ್ರೀಲೀಲಾ ಸೈಡ್‌ಗೆ ತಳ್ಳಿದ ರಶ್ಮಿಕಾ ಮಂದಣ್ಣ: ಯಾಕೆ ನಡೆಯಿತು ಜಾದೂ!
ಪ್ರಭಾಸ್ ನಟನೆ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಹೀಗಾಗಿ ಸಹಜವಾಗಿಯೇ ಈ ಚಿತ್ರದ ಬಗ್ಗೆ ಎಲ್ಲಾ ಕಡೆ ಕ್ರೇಜ್ ಹೆಚ್ಚಿದೆ. ಆದರೆ ಪ್ರಭಾಸ್ ನಟನೆಯ ಇತ್ತೀಚಿನ ಚಿತ್ರಗಳು ಸತತವಾಗಿ ಸೋಲು ಕಂಡಿದ್ದು, ಸಹಜವಾಗಿ ಪ್ರಭಾಸ್ ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ. ಕೆಜಿಎಫ್ ಬಳಿಕ ಸಹಜವಾಗಿಯೇ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಸಲಾರ್ ಚಿತ್ರವು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಲಾರದು ಎಂಬ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ.
ರಣಬೀರ್ ಕಪೂರ್ 'ಅನಿಮಲ್' ಟೀಸರ್ ಔಟ್: ಗ್ಯಾಂಗ್‌ಸ್ಟರ್ ಲುಕ್ ನೋಡಿ ಫ್ಯಾನ್ಸ್ ಫಿದಾ!
ರಾಜ್‌ಕುಮಾರ್ ಹಿರಾನಿ ನಿರ್ದೇಶನ, ಶಾರುಖ್ ಖಾನ್ ನಟನೆಯ 'ಡುಂಕಿ' ಚಿತ್ರ ಕೂಡ ಡಿಸೆಂಬರ್ 22 ರಂದು, ಕ್ರಿಸ್ ಮಸ್ ಹಬ್ಬದ ವೇಳೆ ಬಿಡುಗಡೆ ಕಾಣಲಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರ ಕೂಡ ಡಿಸೆಂಬರ್ 22ಕ್ಕೇ ತೆರೆಗೆ ಅಪ್ಪಳಿಸುವ ನಿರೀಕ್ಷೆ ದಟ್ಟವಾಗಿದೆ. ಒಟ್ಟಿನಲ್ಲಿ ಕ್ರಿಸ್‌ಮಸ್ ವೇಳೆಗೆ ಇಂಡಿಯಾದಲ್ಲಿ ಹಲವು ಚಿತ್ರಗಳು ತೆರೆಗೆ ಅಪ್ಪಳಿಸಲಿದ್ದು ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಏಕೆಂದರೆ, ಇಂದು ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಆಗಿ ಬದಲಾಗುತ್ತಿದ್ದು, ಯಾವುದೇ ಭಾಷೆಯ ಚಿತ್ರ ಎಲ್ಲಾ ಕಡೆ ಸ್ಪರ್ಧೆ ನೀಡುವ ಎಲ್ಲಾ ಸಾಧ್ಯತೆಗಳಿವೆ. ಅದರಲ್ಲೂ ಸ್ಯಾಂಡಲ್‌ವುಡ್ ಚಿತ್ರಗಳ ಬಗ್ಗೆ ಎಲ್ಲಾ ಕಡೆ ನಿರೀಕ್ಷೆ ಬಹಳ ಹೆಚ್ಚಾಗಿದೆ.