Asianet Suvarna News Asianet Suvarna News

ಶ್ರೀಲೀಲಾ ಸೈಡ್‌ಗೆ ತಳ್ಳಿದ ರಶ್ಮಿಕಾ ಮಂದಣ್ಣ: ಯಾಕೆ ನಡೆಯಿತು ಜಾದೂ!

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ತೆಲುಗು ಚಿತ್ರ 'ಗೀತ ಗೋವಿಂದಂ' ಬಳಿಕ ಅವರಿಬ್ಬರಿಗೂ ತೆಲುಗಿನಲ್ಲಿ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ತೆಲುಗು ಮಾತ್ರವಲ್ಲ, ವಿಜಯ್-ರಶ್ಮಿಕಾ ಜೋಡಿಗೆ ಇಡೀ ಇಂಡಿಯಾ ಲೆವೆಲ್‌ಗೆ ಫ್ಯಾನ್ಸ್ ಆಗಿಬಿಟ್ಟಿದ್ದಾರೆ.ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ತೆಲುಗು ಚಿತ್ರ 'ಗೀತ ಗೋವಿಂದಂ' ಬಳಿಕ ಅವರಿಬ್ಬರಿಗೂ ತೆಲುಗಿನಲ್ಲಿ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ತೆಲುಗು ಮಾತ್ರವಲ್ಲ, ವಿಜಯ್-ರಶ್ಮಿಕಾ ಜೋಡಿಗೆ ಇಡೀ ಇಂಡಿಯಾ ಲೆವೆಲ್‌ಗೆ ಫ್ಯಾನ್ಸ್ ಆಗಿಬಿಟ್ಟಿದ್ದಾರೆ.

Rashmika mandanna replaces sreeleela for upcoming vijay devarakonda project
Author
First Published Sep 27, 2023, 7:20 PM IST

ಅಮೆರಿಕನ್ ಮೂಲದ ಕನ್ನಡ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಬೆಳೆಯುತ್ತಿದ್ದಾರೆ. ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ನಟಿ ಶ್ರೀಲೀಲಾ, 2022ರಲ್ಲಿ ಧಮಾಕಾ ಚಿತ್ರದ ಮೂಲಕ ತೆಲುಗಿನಲ್ಲಿ ಸೌಂಡ್ ಮಾಡಿದ್ದರು. ಆ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಶ್ರೀಲೀಲಾ, ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಚಿತ್ರದ ನಾಯಕಿ ಕೂಡ ಹೌದು. ಇತ್ತೀಚೆಗೆ ನಟ ವಿಜಯ್ ದೇವರಕೊಂಡ ನಾಯಕತ್ವದ ಚಿತ್ರವೊಂದಕ್ಕೆ ನಟಿ ಶ್ರೀಲೀಲಾ ಆಯ್ಕೆ ಕೂಡ ನಡೆದಿತ್ತು. 

ಆದರೆ, ಇದೀಗ ಬಂದ ಸುದ್ದಿ ಪ್ರಕಾರ ನಟಿ ಶ್ರೀಲೀಲಾ ಜಾಗಕ್ಕೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಡೇಟ್ಸ್ ಸಮಸ್ಯೆಯೋ ಅಥವಾ ಇನ್ನೇನಾದರೂ ಕಾರಣವೋ ಗೊತ್ತಿಲ್ಲ! ಈ ಮೊದಲು ಜೆರ್ಸಿ ಚಿತ್ರವನ್ನು ನಿರ್ದೇಶಿಸಿದ್ದ ಗೌತಮ್ ನಾಯ್ಡು ತಿಣ್ಣನುರಿ ಮುಂಬರುವ ಚಿತ್ರಕ್ಕೆ ನಟ ವಿಜಯ್ ದೇವರಕೊಂಡ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಜಯ್ ಎದುರು ಶ್ರೀಲೀಲಾ ನಾಯಕಿ ಎನ್ನಲಾಗಿತ್ತು. ಚಿತ್ರದ ಮುಹೂರ್ತ ಕೂಡ ನಡೆದಿದ್ದು, ಶ್ರೀಲೀಲಾ ಹಾಜರಿ ಕೂಡ ಇತ್ತು. ಇದೀಗ ಏನಾಯ್ತೋ ಏನೋ, ಶ್ರೀಲೀಲಾ ಬದಲು ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. 

ಸುದ್ದಿ ನಿಜವೇ ಆಗಿದ್ದರೆ, ರಶ್ಮಿಕಾ ಹಾಗೂ ವಿಜಯ್ ಜೋಡಿಯ ಫ್ಯಾನ್ಸ್ ಈಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ ಎನ್ನಬಹುದು. ಏಕೆಂದರೆ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ತೆಲುಗು ಚಿತ್ರ 'ಗೀತ ಗೋವಿಂದಂ' ಬಳಿಕ ಅವರಿಬ್ಬರಿಗೂ ತೆಲುಗಿನಲ್ಲಿ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ತೆಲುಗು ಮಾತ್ರವಲ್ಲ, ವಿಜಯ್-ರಶ್ಮಿಕಾ ಜೋಡಿಗೆ ಇಡೀ ಇಂಡಿಯಾ ಲೆವೆಲ್‌ಗೆ ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಅವರಿಬ್ಬರ ಜೋಡಿಯನ್ನು ತೆರೆಯ ಮೇಲೆ ನೋಡಲು ಸಾಧ್ಯ ಎಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವಲ್ಲದೇ ಇನ್ನೇನು?

ರಣವೀರ್ ಸಿಂಗ್ ಜತೆ 'ಬಿಗ್ ಬಾಸ್' ಅರವಿಂದ್ ಕೆಪಿ ಫೋಟೋ; ಏನಿದು ಹೊಸ ಸೆನ್ಸೇಷನ್!

ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಸದ್ಯ 'ಅನಿಮಲ್' ಚಿತ್ರದಲ್ಲಿ ನಟಿಸುತ್ತಿದ್ದು, ಇನ್ನೂ ಹಲವಾರು ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಕಾಯ್ದಿರಿಸಿಕೊಂಡಿದ್ದಾರೆ. ಇತ್ತೀಚೆಗೆ ಅನಿಮಲ್ ಚಿತ್ರದಲ್ಲಿನ ರಶ್ಮಿಕಾ ಪೋಸ್ಟರ್ ಬಿಡುಗಡೆಯಾಗಿ ಬಹಳ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು ಮತ್ತೊಬ್ಬ ಕನ್ನಡತಿ, ನಟಿ ಶ್ರೀಲೀಲಾ ಕೂಡ ರಶ್ಮಿಕಾಗೆ ತೀವ್ರ ಪೈಪೋಟಿ ಕೊಡುವಷ್ಟು ಬೆಳೆಯುತ್ತಿದ್ದಾರೆ. ಸಾಲುಸಾಲು ಚಿತ್ರಗಳಿಗೆ ಸಹಿ ಹಾಕುತ್ತಿರುವ ಶ್ರೀಲೀಲಾರೇ ಸದ್ಯ ರಶ್ಮಿಕಾಗೆ ತೀವ್ರ ಪೈಪೋಟಿ ನೀಡುತ್ತಿರುವ ನಟಿ ಎಂದು ಬಿಂಬಿಸಲಾಗುತ್ತಿದೆ. ಉಸ್ತಾದ್ ಭಗತ್ ಸಿಂಗ್, ಭಗವಂತ ಕೇಸರಿ, ಭರಾಟೆ ಹೀಗೆ ಸಾಕಷ್ಟು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ.

ರಾಮಾಚಾರಿಯ ಹುಚ್ಚು ಪ್ರೇಮಿ ದೀಪಾಗೆ ರಿಯಲ್ ಲೈಫಲ್ಲಿ ಐಪಿಎಸ್ ಆಗೋ ಕನಸಂತೆ

ಆದರೆ, ಇದೀಗ ಬಂದ ಸುದ್ದಿಯಿಂದ ಶ್ರೀಲೀಲಾ ಅಭಿಮಾನಿಗಳಿಗೆ ಬೇಸರ ಮೂಡಿದ್ದರೆ, ನಟಿ ರಶ್ಮಿಕಾ ಫ್ಯಾನ್ಸ್ ಖುಷಿಯಾಗಿ ಕುಣಿದಾಡುತ್ತಿರುವುದಂತೂ ಪಕ್ಕಾ ಸಂಗತಿ. ಏಕೆಂದರೆ, ಹೇಳಿಕೇಳಿ ವಿಜಯ್ ದೇವರಕೊಂಡ ಅವರನ್ನು ರಶ್ಮಿಕಾ ಬಾಯ್‌ ಫ್ರಂಡೇ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಹೀಗಿರುವಾಗ ರಶ್ಮಿಕಾ ಜಾಗದಲ್ಲಿ ಶ್ರೀಲೀಲಾ ನೋಡಲು ಹಲವರು ಇಷ್ಟಪಡಲಾರರು. ಒಟ್ಟಿನಲ್ಲಿ, ಇಬ್ಬರ ಮಧ್ಯೆ ಮೊದಲೇ ಇದ್ದ ಪೈಪೋಟಿಗೆ ಈಗ ಕಿಚ್ಚು ಹಚ್ಚಿದಂತಾಗಿದೆ. 

Follow Us:
Download App:
  • android
  • ios