ಇತ್ತೀಚೆಗಷ್ಟೇ ನಾಯಕಿ ನಟಿ ರಶ್ಮಿಕಾ ಮಂದಣ್ಣ ಅವರ ಅನಿಮಲ್ ಚಿತ್ರದ 'ಗೀತಾಂಜಲಿ' ಪಾತ್ರದ ಲುಕ್ ಪೋಸ್ಟರ್ ರಿಲೀಸ್ ಆಗಿ ಭಾರೀ ಜನಮನ್ನಣೆ ಗಳಿಸಿತ್ತು. ಇದೀಗ ನಾಯಕ ನಟ ರಣಬೀರ್ ಕಪೂರ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿಯಾಗಿದೆ. 

ಬಾಲಿವುಡ್‌ ಬಹನಿರೀಕ್ಷೆಯ ಅನಿಮಲ್ ಪೋಸ್ಟರ್‌ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತ ಸುದ್ದಿ ಮಾಡುತ್ತಿದೆ. ಅದು ನಾಯಕ ರಣಬೀರ್ ಕಪೂರ್ ಅವರದು. ಈ ಚಿತ್ರದಲ್ಲಿ ನಟ ರಣಬೀರ್ ಕಪೂರ್ ನಾಯಕರಾಗಿ ನಟಿಸುತ್ತಿದ್ದು ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ. ಬಾಲಿವುಡ್‌ ಹಿರಿಯ ಸ್ಟಾರ್ ನಟ ಅನಿಲ್ ಕಪೂರ್ ಸಹ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. 

ಇತ್ತೀಚೆಗಷ್ಟೇ ನಾಯಕಿ ನಟಿ ರಶ್ಮಿಕಾ ಮಂದಣ್ಣ ಅವರ ಅನಿಮಲ್ ಚಿತ್ರದ 'ಗೀತಾಂಜಲಿ' ಪಾತ್ರದ ಲುಕ್ ಪೋಸ್ಟರ್ ರಿಲೀಸ್ ಆಗಿ ಭಾರೀ ಜನಮನ್ನಣೆ ಗಳಿಸಿತ್ತು. ಇದೀಗ ನಾಯಕ ನಟ ರಣಬೀರ್ ಕಪೂರ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿಯಾಗಿದ್ದು, ಬಾಲಿವುಡ್ ಸೇರಿದಂತೆ ಜಗತ್ತಿನಾದ್ಯಂತ ಸಿನಿಮಾ ಪ್ರೇಕ್ಷಕರು ಈ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ರಣವೀರ್ ಸಿಂಗ್ ಜತೆ 'ಬಿಗ್ ಬಾಸ್' ಅರವಿಂದ್ ಕೆಪಿ ಫೋಟೋ; ಏನಿದು ಹೊಸ ಸೆನ್ಸೇಷನ್! 

ಅನಿಲ್ ಕಪೂರ್ ಚಿತ್ರದ ಮುಖ್ಯ ಭೂನಿಕೆಯಲ್ಲಿದ್ದು, ಚಿತ್ರದಲ್ಲಿ ಅವರದು ಗಮನಾರ್ಹ ಪಾತ್ರ ಎಂಬ ಸುಳಿವು ದೊರೆತಿದೆ. ಹಿಂದೊಮ್ಮೆ ಭಾರೀ ಸ್ಟಾರ್ ಎನಿಸಿದ್ದ 'ಬೇಟಾ' ಖ್ಯಾತಿಯ ಅನಿಲ್ ಕಪೂರ್ ಈ ಚಿತ್ರದಲ್ಲಿ ಇರುವ ಮೂಲಕ, ಅವರ ಅಭಿಮಾನಿಗಳು ಸಹ ಈ ಚಿತ್ರವನ್ನು ನೋಡುವುದು ಪಕ್ಕಾ. ಅಲ್ಲಿಗೆ ಈ ಚಿತ್ರಕ್ಕೆ ಹೆಚ್ಚಿನ ಫ್ಯಾನ್ಸ್ ಪ್ರೇಕ್ಷಕರು ಸಿನಿಮಾ ನೋಡಲು ಕಾಯುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅಚ್ಚರಿ ಎಂಬಂತೆ ಟೀಸರ್‌ನಲ್ಲಿ ನಾಯಕಿ ರಶ್ಮಿಕಾ ಫೋಕಸ್ ಆಗಿಲ್ಲ. 

ಶ್ರೀಲೀಲಾ ಸೈಡ್‌ಗೆ ತಳ್ಳಿದ ರಶ್ಮಿಕಾ ಮಂದಣ್ಣ: ಯಾಕೆ ನಡೆಯಿತು ಜಾದೂ!

ಒಟ್ಟಿನಲ್ಲಿ, ಅನಿಮಲ್ ಚಿತ್ರದ ಒಂದೊಂದೇ ಪೋಸ್ಟರ್‌ ಬಿಡುಗಡೆಯಾಗಿ ಮೊದಲೇ ಮೂಡಿದ್ದ ನಿರೀಕ್ಷೆಗೆ ಇನ್ನೂ ಹೆಚ್ಚಿನ ಕ್ರೇಜ್ ದೊರೆಯುತ್ತಿದೆ. ರಶ್ಮಿಕಾ ಮಂದಣ್ಣ ಈ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಮತ್ತುಷ್ಟು ಮೆರೆಯುವ ಸಾಧ್ಯತೆ ದಟ್ಟವಾಗಿದೆ. ಚಿತ್ರದ ಬಿಡುಗಡೆ ಬಳಿಕ ಅನಿಮಲ್ ಚಿತ್ರದ ಕಮಾಲ್ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.