Asianet Suvarna News Asianet Suvarna News

ಅಪ್ಪ-ಅಮ್ಮನ ಮಾತು ಧಿಕ್ಕರಿಸಿ ಮದುವೆಯಾದ ಖ್ಯಾತ ಗಾಯಕಿ ಜ್ಯೋತಿಗೆ ಗಂಡನಿಂದ ಕಿರುಕುಳ

ಪತಿ ಕುನಾಲ್ ವಾಸಿ ವಿರುದ್ಧ ದೂರು ನೀಡಿದ ಗಾಯಕಿ ಜ್ಯೋತಿ ನೂರಾನ್. ಪ್ರಾಣ ಬೆದರಿಕೆ ಆರೋಪ ನಿಜವೇ?

Nooran sister fame Joyti accuses husband kushal passi of harassment vcs
Author
Bangalore, First Published Aug 7, 2022, 3:42 PM IST

ನೂರಾನ್ ಸಿಸ್ಟರ್ಸ್‌ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಬಾಲಿವುಡ್‌ ಚಿತ್ರರಂಗಕ್ಕೆ ವಿಭಿನ್ನ ಸಂಗೀತ ನೀಡುವ ಮೂಲಕ ಭಾರತೀಯರ ಗಮನ ಸೆಳೆದಿರುವ ಸಹೋದರಿಯರು. ಸುಲ್ತಾನಾ ನುರಾನ್‌ ಮತ್ತು ಜ್ಯೋತಿ ನುರಾನ್ ನೂರಾರು ಸಿನಿಮಾಗಳಲ್ಲಿ ಹಾಡಿ ಸಾವಿರಾರೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಗ ಅವರಲ್ಲಿ ಒಬ್ಬರಾಗಿರುವ ಜ್ಯೋತಿ ನುರಾನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ವಿರುದ್ಧ ದೂರು ದಾಖಲಿಸಿರುವ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ...

ಜ್ಯೋತಿ ನುರಾನ್ ಮತ್ತು ಪಾಸಿ 2014ರಲ್ಲಿ ವೈವಾಹಿಕ ಜೀವಕ್ಕೆ ಕಾಲಿಟ್ಟರು. ಪೋಷಕರ ವಿರುದ್ಧವಾಗಿ ಮದುವೆಯಾಗಿ ದೊಡ್ಡ ಸುದ್ದಿಯಾಗಿತ್ತು. ಆದರೀಗ ಅವರ ಮೇಲೆ ಕುನಾಲ್ ಹಲ್ಲೆ ಮಾಡಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೆಲವು ತಿಂಗಳುಗಳಿಂದ ಇವರಿಬ್ಬರ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕೋರ್ಟಿನಲ್ಲಿ ಕೇಸ್‌ ನಡೆಯುತ್ತಿದ್ದರೂ ಕುನಾಲ್‌ ಹಿಂಸಿಸುತ್ತಿದ್ದಾರೆ ಎಂದು ಮತ್ತೊಮ್ಮೆ ದೂರು ದಾಖಲಿಸಿದ್ದಾರೆ. 

ಲೈಂಗಿಕ ದೌರ್ಜನ್ಯ: ನಿರ್ದೇಶಕ ಶಂಕರ್ ಅಳಿಯ ರೋಹಿತ್ ವಿಚಾರಣೆ

ವಿಚ್ಛೇದನ ಪ್ರಕರಣ ವಿಚಾರವಾಗಿ ಜ್ಯೋತಿ ನೂರಾನ್‌ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 'ಇನ್ನುಂದೆ ನನ್ನ ಪತಿ ನನ್ನ ಯಾವುದೇ ಮ್ಯೂಸಿಕಲ್ ಶೋಗಳನ್ನು ನಿರ್ವಹಿಸುವುದಿಲ್ಲ. ಪೊಲೀಸರಿಂದ ನಾನು ರಕ್ಷಣೆ ಮತ್ತು ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಸ್‌ಎಸ್‌ಪಿ ಜಲಂಧರ್‌ಗೆ ಪತ್ರ ಸಲ್ಲಿಸಿದ್ದೇನೆ. ನನ್ನ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಹೊಂದಿರುವವರು ದಯವಿಟ್ಟು ನನ್ನನ್ನೇ ನೇರವಾಗಿ ಸಂಪರ್ಕಿಸಬೇಕು. ನನ್ನ ಪತಿಯನ್ನಲ್ಲ' ಎಂದು ಜ್ಯೋತಿ ಹೇಳಿದ್ದಾರೆ. 

'ನಾವು ದೂರನ್ನು ಸ್ವೀಕರಿಸಿದ್ದೇವೆ. ಡಿಎಸ್‌ಪಿ ವುಮೆನ್‌ ಸೆಲ್‌ಗೆ ಮಾಹಿತಿ ನೀಡಿದ್ದೇವೆ. ತನಿಖೆ ನಡೆದ ಬಳಿಕವಷ್ಟೇ ನಾವು ಮಾಹಿತಿ ನೀಡಲು ಸಾಧ್ಯವಾಗುತ್ತದೆ' ಎಂದು ಸ್ವರಣ್‌ದೀಪ್‌ ಸಿಂಗ್, ಎಸ್‌ಎಸ್‌ಪಿ ಜಲಂಧರ್‌ ತಿಳಿಸಿದ್ದಾರೆ.

ಮದುವೆ:

ಆಗಸ್ಟ್‌ 2,2014ರಲ್ಲಿ ಚಂಡೀಗಢದ ರಾಧಾ ಕೃಷ್ಣ ದೇವಸ್ಥಾನದಲ್ಲಿ ಜ್ಯೋತಿ ಮತ್ತು ಕುನಾಲ್ ವಾಸಿ ಮದುವೆಯಾಗಿದ್ದರು. ಕೆಲವು ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪಗಳು ಉಂಟಾಗಿದೆ. ಇಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ, ಈ  ಸಮಯದಲ್ಲಿ ಕುನಾಲ್ ವಾಸಿ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ಲೀಗಲ್‌ ಪೇಪರ್‌ಗಳಲ್ಲಿ ಜ್ಯೋತಿ ವಯಸ್ಸು 16 ಕಡಿಮೆ ತೋರಿಸುತಿದ್ದ ಕಾರಣ ಪೊಷಕರು ಮದುವೆ ಒಪ್ಪಿಕೊಂಡಿರಲಿಲ್ಲ ಎನ್ನಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಕಿರುಕುಳ ಎದುರಿಸುತ್ತಿರುವುದರ ಬಗ್ಗೆ ಧ್ವನಿ ಎತ್ತಿ 'ಸತ್ಯ' ಧಾರಾವಾಹಿ ನಟ ಸಾಗರ್!

ಸಿನಿಮಾ:

ಹೈವೇ, ಸಿಂಗ್ ಇಸ್ ಕಿಂಗ್, ತನು ವೆಡ್ಸ್‌ ಮನು, ಸುಲ್ತಾನ್, ದಂಗಲ್, ಕಿಸ್ಮತ್, ಭಾರತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಡಿದ್ದಾರೆ. ಸಹೋದರಿಯರು ಒಬ್ಬರೇ ಕಾರ್ಯಕ್ರಮ ನೀಡುವುದಕ್ಕೆ ನಿರಾಕರಿಸುತ್ತಾರೆ. 'ದಯವಿಟ್ಟು ಒಬ್ಬರನ್ನು ಮಾತ್ರ ಕರೆಯಬೇಡಿ, ನಾವು ಸಂಪೂರ್ಣರಾಗುವುದಿಲ್ಲ'ಎಂದು ಈ ಹಿಂದೆ ಹೇಳಿದ್ದರು.

MTV ಇಂಡಿಯಾದ MTV ಸೌಂಡ್ ಟ್ರಿಪ್ಪಿನ್ ಕಾರ್ಯಕ್ರಮದ ಮೂಲಕ ನುರಾನ್‌ ಸಹೋದರಿಯರ ಪ್ರತಿಭೆ ಬೆಳಕಿಗೆ ಬಂದಿತ್ತು. ಸಿಂಗ್ ಇಸ್‌ ಕಿಂಗ್ ಚಿತ್ರಕ್ಕೆ ಹಾಡುವ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟರು. ಅದೇ ವರ್ಷ್‌ MTVಯಲ್ಲಿ ಕೋಕ್‌ ಸ್ಟುಡಿಯೋ ಸೀಸನ್‌ 2ರಲ್ಲಿ ಸ್ಪರ್ಧಿಸಿ ಯೂಟ್ಯೂಬ್ ಸೆನ್ಸೇಷನ್‌ ಕ್ರಿಯೇಟ್ ಮಾಡಿದ್ದರು.

Follow Us:
Download App:
  • android
  • ios