Asianet Suvarna News Asianet Suvarna News

ಇನ್‌ಸ್ಟಾಗ್ರಾಂನಲ್ಲಿ ಕಿರುಕುಳ ಎದುರಿಸುತ್ತಿರುವುದರ ಬಗ್ಗೆ ಧ್ವನಿ ಎತ್ತಿ 'ಸತ್ಯ' ಧಾರಾವಾಹಿ ನಟ ಸಾಗರ್!

70 ಖಾತೆಗಳನ್ನು ಬ್ಲಾಕ್ ಮಾಡಿದ ನಟ ಸಾಗರ್ ಬಿಳಿಗೌಡ. ದಯವಿಟ್ಟು ಹಣ ಕೇಳಿ ಯಾರಾದರೂ ಮೆಸೇಜ್ ಮಾಡಿದ್ದರೆ ಪ್ರತಿಕ್ರಿಯೆ ಕೊಡಬೇಡಿ ಎಂದ ನಟ...

Zee Kannada Sathya Actor Sagar biligowda shares important message on social media vcs
Author
Bangalore, First Published Mar 13, 2022, 4:32 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ನಟ ಸಾಗರ್ ಬಿಳಿಗೌಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಅಭಿಮಾನಿಗಳಿಗೆ ಬಿಗ್ ಶಾಕ್ ತಂದುಕೊಟ್ಟಿದೆ. ಹೆಣ್ಣು ಮಕ್ಕಳಿಗೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ harrasment ಆಗುವುದಿಲ್ಲ ಗಂಡು ಮಕ್ಕಳಿಗೂ ಆಗುತ್ತದೆ ಎಂದು ಈಗ ಬೆಳಕಿಗೆ ಬರುತ್ತಿದೆ.

ಸಾಗರ್ ಮಾತುಗಳು:

'ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮತ್ತು ಕಾಮೆಂಟ್ಸ್‌  ಮೂಲಕ ಅನೇಕರು ನನಗೆ ಒಂದು ವಿಚಾರ ತಿಳಿಸುತ್ತಿದ್ದಾರೆ. ಅದರಲ್ಲೂ ಐಶ್, ಅಶ್ವಿನಿ, ಐಶ್‌ಸ್ಟಾರ್, ಆಶಾನೇಚರ್, ರುಆಶಾಶ, ಆಶಾ ಗೌಡ, ನಿರ್ಮಲ್‌ನೇಚರ್, ರೂಪಾ ನೇಚರ್, ಆಶ್‌ಗೌಡ, ಖುಷಿಕುಮಾರ್ ಹೀಗೆ ಒಂದೊಂದೆ ಅಕೌಂಟ್‌ಗಳ ಮೂಲಕ ಮೆಸೇಜ್ ಬರುತ್ತಿದೆ. ಈಗಾಗಲೆ ನಾನು  70 ಖಾತೆಗಳನ್ನು ನಿರ್ಲಕ್ಷ್ಯ ಮಾಡಿ ಬ್ಲಾಕ್ ಮಾಡಿರುವೆ ಆದರೆ ಈಗ ಅವರು ನನ್ನ ಫ್ಯಾಮಿಲಿ ಮತ್ತು ಫ್ರೆಂಡ್ಸ್‌ಗೆ ಹೆದರಿಸಲು ಶುರು ಮಾಡಿದ್ದಾರೆ. ಆವರು ಏನೋ ಕ್ರೈಂ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ದಯವಿಟ್ಟು ಈ ರೀತಿ ವಿಚಾರಗಳಿಗೆ ತಲೆ ಕೊಡಬೇಡಿ ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ' ಎಂದು ಸಾಗರ್ ಬರೆದುಕೊಂಡಿದ್ದಾರೆ. 

'ನಾನು, ನನ್ನ ಸಹೋದ್ಯೋಗಿಗಳು ಅಥವಾ ನನ್ನ ಮ್ಯಾನೇಜರ್ ಎಂದು ಚಿತ್ರಿಸುವ ಸಾಮಾಜಿಕ ಮಾಧ್ಯಮದಲ್ಲಿ ಹಣ ಕೇಳುವ ಯಾರಿಗೂ ದಯವಿಟ್ಟು ಪಾವತಿಸಬೇಡಿ.ಬಲಿಪಶುಗಳಂತೆ ನಟಿಸುವ ಯಾವುದೇ ಪ್ರೊಫೈಲ್‌ಗಳನ್ನು ವರದಿ ಮಾಡಿ ಮತ್ತು ನಿರ್ಬಂಧಿಸಿ ಮತ್ತು ವಿತ್ತೀಯ ಲಾಭಗಳು ಮತ್ತು ನನ್ನ ವೈಯಕ್ತಿಕ ವಿವರಗಳನ್ನು ಹೊರತೆಗೆಯಿರಿ.' ಎಂದು ಸಾಗರ್ ಹೇಳಿದ್ದಾರೆ. 

 

ನಟರ ಮೇಲೆ ಸೈಬರ್‌ ಬುಲ್ಲಿಂಗ್ ಆಗುತ್ತಿರುವುದು ಇದೇನು ಮೊದಲಲ್ಲ ಈ ಹಿಂದೆ ನಟ ಕಿರಣ್ ರಾಜ್, ಮಾನಸಿ ಜೋಶಿ, ಮಿಥುನ್ ತೇಜಶ್ವಿ ಧ್ವನಿ ಎತ್ತಿದ್ದರು. ಸಾಗರ್ ಮಾತುಗಳನ್ನು ಕೇಳಿ ಫಾಲೋವರ್ಸ್ ಮಾಹಿತಿ ಹಂಚಿಕೊಂಡಿದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

'ಓದು ಓದು ಅಂತ ಒತ್ತಡ': ಸತ್ಯ ಸೀರಿಯಲ್‌ನ ಹ್ಯಾಂಡ್ಸಂ ಸಾಗರ್ ಬಿಳಿ ಗೌಡ ನಟನಾಗಿದ್ದು ಹೇಗೆ ?

ಈ ಹಿಂದೆ ಸಂದರ್ಶನಗಳಲ್ಲಿ ಸಾಗರ್ ಧಾರಾವಾಹಿ ಬಗ್ಗೆ ಮಾತನಾಡಿದ್ದರು.

`ಸತ್ಯ'ದಂಥ ನಾಯಕಿ ಪ್ರಧಾನ ಧಾರಾವಾಹಿಯ ನಟನೆ ಸಿನಿಮಾ ಅವಕಾಶಗಳಿಗೆ ತಡೆಯಾಗದೆ?

ನಾಗಾಭರಣ ಅವರು ಒಂದು ಮಾತು ಹೇಳುತ್ತಿದ್ದರು "ಕಲಾವಿದ ಚಿಕ್ಕವನಿರಬಹುದು; ಆದರೆ ಯಾವ ಪಾತ್ರ ಕೂಡ ಚಿಕ್ಕದಲ್ಲ" ಎಂದು! ಅದರಲ್ಲಿಯೂ `ಸತ್ಯ' ಧಾರಾವಾಹಿಯನ್ನು ಗಮನಿಸಿದರೆ ಅದರಲ್ಲಿರುವ ಪಾತ್ರಗಳೇ ವಿಭಿನ್ನ. ಮಾತ್ರವಲ್ಲ, `ಪೈಲ್ವಾನ್', `ಹೆಬ್ಬುಲಿ', `ಗಜಕೇಸರಿ'ಯಂಥ ಚಿತ್ರಗಳನ್ನು ಮಾಡಿದ ತಂಡ ಅದು. ಅದಕ್ಕೆ ತಕ್ಕಂತೆ ಮೇಕಿಂಗ್ ವಿಚಾರದಲ್ಲಿಯೂ ಅಷ್ಟೇ; ನನಗೆ ಸಿನಿಮಾದಲ್ಲಿ ನಟಿಸಿದ ಅನುಭವವೇ ಆಗಿದೆ. ಯಾಕೆಂದರೆ ಎರಡು ಕ್ಯಾಮೆರಾಗಳು, ಲೈಟಿಂಗ್ ಕ್ವಾಲಿಟಿ, ಹೀಗೆ ಯಾವುದೇ ವಿಚಾರದಲ್ಲಿ ಕಾಂಪ್ರಮೈಸ್ ಇರಲಿಲ್ಲ. ಹೊಡೆದಾಟದ ದೃಶ್ಯಗಳಿದ್ದರೆ ಫೈಟ್ ಮಾಸ್ಟರ್ಸ್‌ ಬರುತ್ತಾರೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಗಾಡಿ ಚೇಸಿಂಗ್ ದೃಶ್ಯ ಚಿತ್ರೀಕರಣ ಮಾಡುವಾಗಲೂ ಅಷ್ಟೇ ಅದು ಸುಮ್ಮನೇ ಒಂದು ಚೇಸಿಂಗ್ ಆಗಿರುವುದಿಲ್ಲ. ಅಲ್ಲಿಯೂ ಫೈಟ್ ಮಾಸ್ಟರ್ಸ್‌ ಇರುತ್ತಾರೆ. ಸಿನಿಮಾ ಟೀಮ್, ರಿಗ್‌ ಇರುತ್ತದೆ. ಈ ಎಲ್ಲ ಕ್ವಾಲಿಟಿ ಪರದೆಯ ಮೇಲೆಯೂ ಕಾಣಿಸುತ್ತದೆ. ಹಾಗಾಗಿ ಇದು ಕೂಡ ಸಿನಿಮಾ ನಟನೆಗೆ ಪೂರಕವಾದ ಒಂದು ಹೆಜ್ಜೆ ಎಂದೇ ನಂಬಿದ್ದೇನೆ.

Follow Us:
Download App:
  • android
  • ios