Asianet Suvarna News Asianet Suvarna News

ಲೈಂಗಿಕ ದೌರ್ಜನ್ಯ: ನಿರ್ದೇಶಕ ಶಂಕರ್ ಅಳಿಯ ರೋಹಿತ್ ವಿಚಾರಣೆ

ಅಪ್ರಾಪ್ತ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ. ರೋಹಿತ್ ಸೇರಿ ಐವರ ಮೇಲೆ ದೂರು ದಾಖಲು. 

Tamil director Shankar son in law Rohit booked for harassing minor vcs
Author
Bangalore, First Published Oct 23, 2021, 2:16 PM IST
  • Facebook
  • Twitter
  • Whatsapp

ಜೂನ್‌ ತಿಂಗಳಲ್ಲಿ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ್ (Director Shankar) ಅವರ ಪುತ್ರಿ ಐಶ್ವರ್ಯಾ (Aishwarya) ಜೊತೆ ಕ್ರಿಕೆಟರ್ ರೋಹಿತ್ ದಾಮೋದರ್ (Rohit Damodaran) ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹ್ಯಾಪಿ ಮ್ಯಾರಿಡ್‌ ಲೈಫ್ (Married Life) ಎಂಜಾಯ್ ಮಾಡುತ್ತಿದ್ದ ರೋಹಿತ್ ಮೇಲೆ ಹೊಸದೊಂದು ಆರೋಪ ಕೇಳಿ ಬಂದಿದೆ. ರೋಹಿತ್‌ಗೆ ಮಾತ್ರವಲ್ಲದೇ ಈ ಸುದ್ದಿ ಎರಡೂ ಕುಟುಂಬಗಳಿಗೆ ಆಘಾತ ತಂದಿದೆ. 

16 ವರ್ಷದ ಯುವತಿಯೊಬ್ಬಳು ಕ್ರಿಕೆಟ್ (Cricket) ತರಬೇತಿ ಕಾರ್ಯಗಾರದ ಸಮಯದಲ್ಲಿ ಕೋಚ್ ತಾಮರೈ ಕಣ್ಣನ್ (Thamaraikannan) ಅಸಭ್ಯವಾಗಿ ವರ್ತಿಸಿದ್ದಾರೆ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕ್ರಿಕೆಟ್ ಬೋರ್ಡ್‌ಗೆ (Cricket Board) ದೂರು ನೀಡಿದ್ದಾರೆ. ಕ್ರಿಕೆಟ್ ಕ್ಲಬ್ ಸದಸ್ಯರು ದೂರನ್ನು ಗಂಭೀರವಾಗಿ ಪರಿಗಣಿಸದೇ ಕೋಚ್ ಜೊತೆ ವಿವಾದ ಮಾಡಿಕೊಳ್ಳಬಾರದು, ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಯುವತಿ ಮಹಿಳಾ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾಳೆ. ಇಲಾಖೆ ಅವರು ಈ ಘಟನೆಯನ್ನು ಗಂಭೀರವಾಗಿ  ಪರಿಗಣಿಸಿ ಮೆಟ್ಟುಪಾಳಯಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಮಗಳ ಮದುವೆಗೆ 10 ಕೋಟಿ ಖರ್ಚು ಮಾಡಿದ ನಿರ್ದೇಶಕ ಶಂಕರ್?

ಮುಖ್ಯ ಕೋಚ್ ತಾಮರೈ ಕಣ್ಣನ್, ಸಹ ಕೋಚ್ ಜಯಕುಮಾರ್, ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ದಾಮೋದರನ್ (ರೋಹಿತ್ ತಂದೆ),  ಕಾರ್ಯದರ್ಶಿ ವೆಂಕಟ್, ತಂಡ ನಾಯಕನಾಗಿ ರೋಹಿತ್ ದಾಮೋದರನ್ (ನಿರ್ದೇಶಕ ಶಂಕರ್ ಅಳಿಯ) ವಿರುದ್ಧ ದೂರು ದಾಖಲಾಗಿದೆ. ಎಲ್ಲರ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

Tamil director Shankar son in law Rohit booked for harassing minor vcs

ದೂರು ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ರೋಹಿತ್ ದಾಮೋದರನ್ ಪುದುಚೆರಿ ಕ್ರಿಕೆಟ್ ಅಸೋಸಿಯೇಷನ್‌ ಮಾಲೀಕ ಹಾಗೂ ಮಧುರೈ ಪ್ಯಾಂಥರ್ಸ್‌ (Madurai panthers) ತಂಡದ ನಾಯಕ.  ರೋಹಿತ್ ಅಪ್ರಾಪ್ತೆ ಮೇಲೆ ಲೈಂಗಿಸ ದೌರ್ಜನ್ಯ ಎಸಗಿಲ್ಲ ಆದರೆ ಆರಂಭದಲ್ಲಿ ಪ್ರಕರಣ ಪರಿಗಣಿಸಲಿಲ್ಲ ಹಾಗೂ ಮುಚ್ಚುಹಾಕಲು ಪ್ರಯತ್ನ ಮಾಡಿದ್ದಾರೆ ಎಂದು ಅವರ ವಿರುದ್ಧವೂ ದೂರು ದಾಖಲಿಸಿದ್ದಾರೆ.

Follow Us:
Download App:
  • android
  • ios