Asianet Suvarna News Asianet Suvarna News

ಬಾಲಿವುಡ್‌ನ ಲೇಡಿ ಲಕ್‌ ಈ ಸೂಪರ್‌ಸ್ಟಾರ್‌ ನಟಿ, ಚೊಚ್ಚಲ ಸಿನಿಮಾ ಗಳಿಸಿದ್ದು ಭರ್ತಿ 1000 ಕೋಟಿ!

ಬಾಲಿವುಡ್‌ನಲ್ಲಿ ಈ ನಟಿ ಅಭಿನಯಿಸಿದ ಮೊದಲ ಸಿನಿಮಾವೇ ಸೂಪರ್‌ಹಿಟ್‌ ಆಗಿದೆ. ಮಾತ್ರವಲ್ಲ ಬರೋಬ್ಬರಿ 1000 ಕೋಟಿ ರೂ. ಗಳಿಸಿದೆ. ಆದರೆ ಇನ್ನು ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡದಿರಲು ಆ ಸೂಪರ್‌ಸ್ಟಾರ್ ನಟಿ ನಿರ್ಧರಿಸಿದ್ದಾರೆ. ಸೂಪರ್‌ ಸಕ್ಸಸ್ ನಂತರವೂ ನಟಿ ಆ ರೀತಿ ನಿರ್ಧರಿಸಿದ್ಯಾಕೆ? ಇಲ್ಲಿದೆ ಮಾಹಿತಿ.

 

Nayanthara earned over Rs 1000 crore from debut film, is highest paid actress in India Vin
Author
First Published Nov 10, 2023, 9:29 AM IST

ದಕ್ಷಿಣದ ಸೂಪರ್‌ಸ್ಟಾರ್ ನಯನತಾರಾ ಈ ವರ್ಷ ಶಾರೂಕ್‌ ಖಾನ್ ಅವರ ಮೆಗಾ ಬ್ಲಾಕ್‌ಬಸ್ಟರ್ ಚಿತ್ರ 'ಜವಾನ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ನಯನತಾರಾ ತಮ್ಮ ಆಕ್ಷನ್ ದೃಶ್ಯಗಳಾಗಿ ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆಯನ್ನು ಪಡೆದರು. ಜವಾನ್ ಬಾಕ್ಸ್ ಆಫೀಸ್‌ನಲ್ಲಿ 1138 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ ಇನ್ನು ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡದಿರಲು ಸೂಪರ್‌ಸ್ಟಾರ್ ನಟಿ ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಶಾರೂಕ್‌ ಖಾನ್ ಅವರ ಜವಾನ್ ಬ್ಲಾಕ್ ಬಸ್ಟರ್ ಆಗಿದ್ದರೂ ನಯನತಾರಾ ತನ್ನ ಚೊಚ್ಚಲ ಪ್ರವೇಶದಿಂದ ಅಸಮಾಧಾನಗೊಳ್ಳಲು ನಿರ್ಧಿಷ್ಟ ಕಾರಣವೂ ಇದೆ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ.

ಬಹು ಮಾಧ್ಯಮಗಳ ವರದಿಗಳ ಪ್ರಕಾರ, ಜವಾನ್ ಚಿತ್ರದ ಯಶಸ್ಸಿನ ಶ್ರೇಯಸ್ಸು ಶಾರೂಕ್‌ ಖಾನ್ ಅವರಿಗೆ ಮಾತ್ರ ನೀಡಲ್ಪಟ್ಟಿರುವುದರಿಂದ, ನಯನತಾರಾ ತನ್ನ ಚೊಚ್ಚಲ ಬಾಲಿವುಡ್ ಚಿತ್ರದ ಬಗ್ಗೆ ಖುಷಿಯಾಗಿಲ್ಲ ಎನ್ನಲಾಗಿದೆ.  ಮಾತ್ರವಲ್ಲ, ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಅತಿಥಿ ಪಾತ್ರವು ಹೈಲೈಟ್ ಆಗಿರುವ ಕಾರಣ ನಯನತಾರಾ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣದಿಂದಾಗಿ ನಯನತಾರಾ ಅವರು ದೂರ ಉಳಿದಿದ್ದಾರೆ ಮತ್ತು ಇನ್ನು ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಜತೆ ಲೇಡಿ ಸೂಪರ್ ಸ್ಟಾರ್ ನಯನತಾರಾ?

ಹಿಂದಿ ಸಿನಿಮಾದಲ್ಲಿ ನಟಿಸಲ್ಲ ಎಂದು ನಿರ್ಧರಿಸಿದ ನಯನತಾರಾ
ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ನಯನತಾರಾ ಹೊಸ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂಬ ವರದಿಗಳು ಸಹ ಇದ್ದವು. ಆದರೆ, ಜವಾನ್‌ನಲ್ಲಿನ ಅವರ ಅನುಭವದಿಂದಾಗಿ, ನಟ ಈಗ ಮತ್ತೆ ಹಿಂದಿ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಬಗ್ಗೆ ನಯನತಾರಾ ಅಥವಾ ಅವರ ತಂಡದಿಂದ ಯಾವುದೇ ದೃಢೀಕರಣ ಅಥವಾ ಅಧಿಕೃತ ಮಾತುಗಳು ಬಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ದಕ್ಷಿಣಭಾರತದ ಸಿನಿರಂಗದಲ್ಲಿ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ನಯನತಾರಾ ಕೊನೆಯದಾಗಿ ತಮಿಳು ಚಿತ್ರ ಇರೈವನ್ ನಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಪ್ರಾಜೆಕ್ಟ್‌ ಕಮಲ್ ಹಾಸನ್ ಎದುರು ಇಂಡಿಯನ್ 2 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ನಯನತಾರಾ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದು, ಪ್ರತಿ ಚಿತ್ರಕ್ಕೆ ಸುಮಾರು 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಬಾಲಿವುಡ್‌ನಲ್ಲಿನ್ನು ನಟಿಸೋಲ್ಲ ಎಂದ ನಯನಾತಾರ! ಜವಾನ್‌ನಲ್ಲಿ ಡಿಪ್ಪಿ ಹೈಲೈಟ್ ಆಗಿದ್ದಕ್ಕೆ ಸಿಟ್ಟಾ?

ನಯನತಾರಾ ಲಕ್ಸುರಿಯಸ್‌ ಲೈಫ್‌ಸ್ಟೈಲ್‌
ಇದುವರೆಗೂ ಹಲವಾರು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿರುವ ನಯನತಾರಾ ಫಿಮೇಲ್‌ ಓರಿಯೆಂಟೆಡ್‌ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 50 ಸೆಕೆಂಡ್‌ಗಳ ಜಾಹೀರಾತಿಗೆ ನಯನತಾರಾ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಕೆಲವು ಜಾಹೀರಾತುಗಳಿಗೆ 4ರಿಂದ 7 ಕೋಟಿ ರೂಪಾಯಿ ಪಡೆಯುತ್ತಾರಂತೆ. ನಯನತಾರಾ ಅವರಿಗೆ ನಾಲ್ಕು ಐಷಾರಾಮಿ ಮನೆಗಳಿವೆ. ನಯನತಾರಾ 100 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.ಇದು ತಮಿಳುನಾಡಿನಿಂದ ಮುಂಬೈವರೆಗೆ ವಿಸ್ತರಿಸಿರುವ ಅವರ ನಾಲ್ಕು ಐಷಾರಾಮಿ ಆಸ್ತಿಗಳಲ್ಲಿ ಒಂದಾಗಿದೆ.

ಪ್ರಸ್ತುತ, ಅವರು ತಮ್ಮ ಪತಿ ವಿಘ್ನೇಶ್ ಅವರೊಂದಿಗೆ 4 BHK ಫ್ಲಾಟ್ ಅನ್ನು ಹಂಚಿಕೊಂಡಿದ್ದಾರೆ, ಇದರ ಮೌಲ್ಯ 100 ಕೋಟಿ ರೂ. ಫ್ಲಾಟ್ ಖಾಸಗಿ ಸಿನಿಮಾ ಹಾಲ್, ಈಜುಕೊಳ ಮತ್ತು ಬಹುಕ್ರಿಯಾತ್ಮಕ ಜಿಮ್‌ನಂತಹ ವಿಶೇಷ ಸೌಕರ್ಯಗಳನ್ನು ಒಳಗೊಂಡಿದೆ. ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ನಯನತಾರಾ ಬಳಿಯಿದೆ. ದುಬಾರಿ ಕಾರು BMW 7, 1.76 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಲೆದರ್ ಸೀಟ್‌ಗಳಿಗೆ ಹೆಸರುವಾಸಿಯಾದ 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ GLS350D ಹೊಂದಿದ್ದಾರೆ. ವಿಶಿಷ್ಟವಾದ BMW 5 ಸಹ ಇವರ ಕಾರ್ ಕಲೆಕ್ಷನ್‌ನಲ್ಲಿ ಒಂದಾಗಿದೆ.

Follow Us:
Download App:
  • android
  • ios