ಪ್ಯಾನ್ ಇಂಡಿಯಾ ಸ್ಟಾರ್ ಜತೆ ಲೇಡಿ ಸೂಪರ್ ಸ್ಟಾರ್ ನಯನತಾರಾ?
ಬಾಲಿವುಡ್ ಮುನಿಸಿನ ಬಳಿಕ, ನಟಿ ನಯನತಾರಾ ಮತ್ತೆ ಬಾಲಿವುಡ್ ಚಿತ್ರಗಳತ್ತ ಮುಖ ಮಾಡುವುದು ಡೌಟ್ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪುಷ್ಟಿ ಕೊಡುವಂತೆ ಮುಂಬರುವ ಪ್ರಾಜೆಕ್ಟ್ ಒಂದರಲ್ಲಿ ನಯನತಾರಾ ಪ್ರಭಾಸ್ ಜತೆ ನಟಿಸಿಲಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಜತೆ 'ಜವಾನ್' ಚಿತ್ರದಲ್ಲಿ ಮಿಂಚಿದ್ದ ನಟಿ ನಯನತಾರಾ ಬಾಲಿವುಡ್‌ನಲ್ಲಿ 'ಟಾಕ್ ಆಫ್ ದ ಟೌನ್' ಆಗಿದ್ದಾರೆ. ಜವಾನ್ ಚಿತ್ರದ ಬಳಿಕ ನಯನತಾರಾ ಮತ್ತೆ ಬಾಲಿವುಡ್ ಚಿತ್ರದಲ್ಲೇ ನಟಿಸಬಹುದೇ ಎಂಬ ಪ್ರೇಕ್ಷಕರ ಲೆಕ್ಕಾಚಾರಕ್ಕೆ ಇದೀಗ ಉತ್ತರ ಸಿಕ್ಕಿದೆ. ಮತ್ತೆ ಸೌತ್ ಇಂಡಿಯನ್ ಬೇಸ್ಡ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಯನತಾರಾ ತಮಗೆ ಬಾಲಿವುಡ್ ಚಿತ್ರರಂಗದ ಮೇಲೆ ಮುನಿಸು ಇದೆ ಎಂಬುದಕ್ಕೆ ಸಾಕ್ಷಿ ಕೊಟ್ಟಂತೆ ಆಗಿದೆಯಾ? ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮುಂದಿನ ನಡೆ ಏನು?
ಹೌದು, ಇತ್ತೀಚೆಗೆ ನಟಿ ನಯನತಾರಾ, ಜವಾನ್ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಶಾರುಖ್ ನಾಯಕತ್ವದ ಜವಾನ್ ಚಿತ್ರದಲ್ಲಿ ನಯನತಾರಾ ಪಾತ್ರ ಕಥೆ ಹೇಳುವಾಗ ಇದ್ದಷ್ಟು , ಶೂಟಿಂಗ್ ಮಾಡುವಾಗ ಇದ್ದಷ್ಟು ತೆರೆಯ ಮೇಲೆ ಇರಲಿಲ್ಲ. ಈ ಬಗ್ಗೆ ಮುನಿಸುಕೊಂಡಿರುವ ನಟಿ ನಯನತಾರಾ, ಈ ಚಿತ್ರದ ಪ್ರೆಸ್ ಮೀಟ್‌ಗೆ ಅಥವಾ ಸಕ್ಸಸ್ ಮೀಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ.
ಕಪ್ಪು ಡ್ರೆಸ್‌ನಲ್ಲಿ ಕಂಗೊಳಿಸಿದ ಶ್ವೇತಾ ಚಂಗಪ್ಪ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ
ಈ ಬಗ್ಗೆ ನಯನತಾರಾ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲವಾದರೂ ಆಕೆ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ಮಾತು ಬಾಲಿವುಡ್ ಬಾಗಿಲನ್ನೂ ದಾಟಿ ಭಾರತದ ತುಂಬೆಲ್ಲ ಸುತ್ತಾಡಿದೆ. ಸಕ್ಸಸ್ ಮೀಟ್‌ನಲ್ಲಿ ಈ ಬಗ್ಗೆ ಶಾರುಖ್ ಅವರ ಗಮನ ಸೆಳೆದಾಗ 'ಹೌದು, ಚಿತ್ರದಲ್ಲಿ ನಯನತಾರಾ ಮಾಡಿರುವ 'ನರ್ಮದಾ ಪಾತ್ರಕ್ಕೆ ತೆರೆಯ ಮೇಲೆ ಸ್ಪೇಸ್ ಕಡಿಮೆಯಾಗಿದೆ' ಎಂದು ಶಾರುಖ್ ನೇರವಾಗಿಯೇ ಹೇಳಿದ್ದಾರೆ. ಅಲ್ಲಿಗೆ ನಯನತಾರಾ ಮುನಿಸಿಗೆ ನ್ಯಾಯದ ಮುದ್ರೆ ಬಿದ್ದಂತಾಗಿದೆ.
ಕಾವೇರಿ ಹೋರಾಟಕ್ಕೆ ಬನ್ನಿ ಎಂದ ಕನ್ನಡಿಗರಿಗೆ, ತಮಿಳು ಸಿನಿಮಾ ನೋಡದಂತೆ ಕರೆಕೊಟ್ಟ ನಟ ದರ್ಶನ್!
ನಯನತಾರಾ ಮುನಿಸಿನ ಬಳಿಕ, ಆಕೆ ಮತ್ತೆ ಬಾಲಿವುಡ್ ಚಿತ್ರಗಳತ್ತ ಮುಖ ಮಾಡುವುದು ಡೌಟ್ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪುಷ್ಟಿ ಕೊಡುವಂತೆ ಮುಂಬರುವ ಪ್ರಾಜೆಕ್ಟ್ ಒಂದರಲ್ಲಿ ನಯನತಾರಾ ಪ್ರಭಾಸ್ ಜತೆ ನಟಿಸಿಲಿದ್ದಾರೆ ಎನ್ನಲಾಗಿದೆ. ವಿಷ್ಣು ಮಂಚುನಾಯಕತ್ವ 'ಭಕ್ತ ಕಣ್ಣಪ್ಪ' ಚಿತ್ರದಲ್ಲಿ ನಟ ಪ್ರಭಾಸ್ 10 ನಿಮಿಷದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಭಾಸ್ ಜೋಡಿಯಾಗಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಗೆ, ಈ ಮೊದಲು 'ಯೋಗಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ 16 ವರ್ಷಗಳ ಬಳಿಕ ಮತ್ತೆ ಒಂದಾದಂತೆ ಆಗಿದೆ.