ಭಾರತದ ಮೊದಲ ಮಡ್‌ರೇಸ್ ಸಿನಿಮಾ ಮಡ್ಡಿ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾದ ಟೀಸರ್‌ನ್ನು ನಟ ಅರ್ಜುನ್ ಕಪೂರ್, ಫಹಾದ್ ಫಾಸಿಲ್, ಜಯಂ ರವಿ ಮತ್ತು ಇತರ ಸೆಲೆಬ್ರಿಟಿಗಳು ಲಾಂಚ್ ಮಾಡಿದ್ದರು.

ಇದೀಗ ಟೀಸರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, 15 ಮಿಲಿಯನ್ ವ್ಯೂಸ್ ಬಂದಿದೆ. ರೋಚಕ ಮಡ್ ರೇಸಿಂಗ್ ಸೀನ್‌ಗಳಿರುವ ಟೀಸರ್ ವೀಕ್ಷಕರನ್ನು ಇಂಪ್ರೆಸ್ ಮಾಡಿದೆ.

ಮಡ್ಡಿ: ಭಾರತದ ಮೊದಲ ಮಡ್ ರೇಸ್ ಸಿನಿಮಾದ ಪೋಸ್ಟರ್ ಲಾಂಚ್

ಇದೇ ಮೊದಲ ಬಾರಿಗೆ ಭಾರತದಲ್ಲಿ ಮಡ್ ರೇಸ್ ಸಿನಿಮಾ ಮಾಡುತ್ತಿದ್ದು, ಡಾ.ಪ್ರಗಭಾಲ್ ಅವರ ಮೊದಲ ನಿರ್ದೇಶನ ಇದು.  ಸಿನಿಮಾವನ್ನು ಚಂದದ ಮತ್ತು ಸಾಹಸೀಮಯ ಲೊಕೇಷನ್ಸ್‌ಗಳಲ್ಲಿ ಶೂಟ್ ಮಾಡಲಾಗಿದೆ.

ಇದು ಸಿನಿಪ್ರಿಯರಿಗೆ ಉತ್ತಮವಾದ ವೀಕ್ಷಣಾ ಅನುಭವವನ್ನು ನೀಡಲಿದೆ. ಇದೊಂದು ಬಹುಭಾಷಾ ಸಿನಿಮಾವಾಗಿದ್ದು 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ, ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಭಾರತದ ಮೊದಲ ಮಡ್ ರೇಸ್ ಸಿನಿಮಾ ಮಡ್ಡಿ ಟೀಸರ್ ಬಿಡುಗಡೆ.. ಅದ್ಭುತ ದೃಶ್ಯ ವೈಭವ

ಮಡ್‌ರೇಸ್ ಎಂಬ ಕಾನ್ಸೆಪ್ಟ್ ಸಿನಿಮಾ ಮಟ್ಟಿಗೆ ಹೊಸದು. ಹಾಗಯೇ ಇದು ಆಫ್‌ರೋಡ್ ಸಾಹಸಮಯ ಸಿನಿಮಾವಾಗಿದ್ದು, ಆಕ್ಷನ್ ಥ್ರಿಲ್ಲರ್ ಆಗಿ ಮೂಡಿಬರಲಿದೆ.

ಪಿಕೆ 7 ಕ್ರಿಯೇಷನ್ಸ್ ಬ್ಯಾನರಿ ಅಡಿಯಲ್ಲಿ ಪ್ರೇಮ ಕೃಷ್ಣದಾಸ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಹೊಸ ಮುಖಗಳಾದ ಯುವನ್, ರಿಧಾನ್ ಕೃಷ್ಣ, ಅನುಶಾ ಸೂರಜ್, ಅಮಿತ್ ಶಿವದಾಸ್ ನಾಯರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರೀಶ್ ಪೆರಾಡಿ, ಐಎಂ ವಿಜಯನ್, ರಂಜಿ ಪಣಿಕ್ಕರ್, ಸುನಿಲ್ ಸುಗತ, ಶೋಭಾ ಮೋಹನ್ ಮತ್ತು ಗಿನ್ನಿಸ್ ಮನೋಜ್ ಕೂಡಾ ಅಭಿನಯಿಸಲಿದ್ದಾರೆ.

ಫಸ್ಟ್ ಡೋಸ್ ಕೊರೋನಾ ವ್ಯಾಕ್ಸಿನ್ ಪಡೆದ ಮೋಹನ್ ಲಾಲ್

ಎರಡು ತಂಡಗಳ ರಿವೆಂಜ್ ತೋರಿಸಲಿದ್ದು, ಇದೊಂದು ಫ್ಯಾಮಿಲಿ, ಲೈಫ್, ಕಾಮೆಡಿ ಸಿನಿಮಾ ಆಗಿರಲಿದೆ. ವಿಶೇಷ ಎಂದರೆ ಸಿನಿಮಾದ ಪ್ರಮುಖ ಪಾತ್ರಗಳ ನಟರು ತಾವೇ ಸಾಹಸಗಳನ್ನು ಮಾಡಲಿದ್ದು, ಎರಡು ವರ್ಷ ಇದಕ್ಕೆ ತರಬೇತಿಯನ್ನೂ ನೀಡಲಾಗಿದೆ. ಯಾವುದೇ ಡ್ಯೂಪ್ ಬಳಸಲಾಗಿಲ್ಲ. ಸಿನಿಮಾಗೆ ಲೊಕೇಷನ್ ಹುಡುಕುವುದಕ್ಕೇ ಒಂದು ವರ್ಷ ಸಮಯ ಹಿಡಿದಿತ್ತು ಎನ್ನಲಾಗಿದೆ.