ಬೆಂಗಳೂರು (ಫೆ. 26) ಸೌತ್ ನಟ ವಿಜಯ್ ಸೇತುಪತಿ ಭಾರತದ ಮೊದಲ ಮಡ್ ರೇಸ್ ಸಿನಿಮಾ ಮಡ್ಡಿಯ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು.  ಇದು ಬಹುಭಾಷಾ ಸಿನಿಮಾವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಟ್ರೆಂಡ್ ಸೆಟ್ ಮಾಡಿದೆ.

ಆಕ್ಷನ್, ಸಾಹಸ, ಥ್ರಿಲ್ಲರ್ ಸಮಾಗಮ ಭಾರತದ ಮೊದಲ ಮಡ್ ರೇಸ್ ಸಿನಿಮಾ 'ಮಡ್ಡಿ'ಯ   ಟೀಸರ್ ಬಿಡುಗಡೆಯಾಗಿದೆ.  ಭಾರತದಲ್ಲಿ ಇದೆ ಮೊದಲ ಸಾರಿ  4 * 4  ಮಡ್ ರೇಸ್ ನ್ನು ತೆರೆ ಮೇಲೆ ತೋರಿಸಲಾಗುತ್ತಿದೆ.  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ .

ಟೀಸರ್ ಗೆ ನಿರ್ದೇಶಕ ಡಾ.ಪ್ರಘಭಲ್ ಆಕ್ಷನ್ ಕಟ್ ಹೇಳಿದ್ದು ಟೀಸ ರ್ ನ್ನು ಕಲಾವಿದ ಫಹಾದ್‌ಫಾಸಿಲ್, ಉನ್ನಿ ಮುಕುಂದನ್, ಅಪರ್ಣಾ ಬಾಲಮುರಳಿ, ಆಸಿಫ್ ಅಲಿ, ಸಿಜು ವಿಲ್ಸನ್ ಮತ್ತು ಅಮಿತ್ ಚಕ್ಕಲಕ್ಕಲ್  ಬಿಡುಗಡೆ ಮಾಡಿದ್ದು ತಮ್ಮ ಸೋಶಿಯಮ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಮಡ್ಡಿಯನ್ನು ಸುಂದರ ಮತ್ತು ಸಾಹಸಮಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು,  ವೀಕ್ಷಕರಿಗೆ ವಿಭಿನ್ನ ದೃಶ್ಯ ಅನುಭವವನ್ನು ನೀಡುತ್ತದೆ. ಮಡ್ಡಿ ಬಹುಭಾಷಾ ಚಿತ್ರವಾಗಿದ್ದು, ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಬಲು ಅಪರೂಪದ ಸಿನಿಮಾ ಇದು ಆಗಲಿದೆ. ಮಡ್ ರೇಸ್ ಚಿತ್ರವನ್ನು ಆಕ್ಷನ್ ಥ್ರಿಲ್ಲರ್  ಎಂದು ಕರೆಯಬಹುದು. ಪ್ರೇಮಕೃಷ್ಣದಾಸ್ ಪಿಕೆ 7 ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಯುವನ್, ರಿಧಾನ್ ಕೃಷ್ಣ, ಅನುಷಾ ಸೂರಜ್ ಮತ್ತು ಅಮಿತ್ ಶಿವದಾಸ್ ನಾಯರ್ ಭೂಮಿಕೆಯಲ್ಲಿದ್ದಾರೆ. ಹರೀಶ್ ಪೆರಾಡಿ, ಐ ಎಂ ವಿಜಯನ್, ರಂಜಿಪನಿಕರ್, ಸುನಿಲ್ ಸುಗಥಾ, ಶೋಭಾ ಮೋಹನ್ ಮತ್ತು ಗಿನ್ನೆಸ್ ಮನೋಜ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹವಾ ಕ್ರಿಯೇಟ್ ಮಾಡಿದ್ದ 'ಮಡ್ಡಿ' ಪೋಸ್ಟರ್

ಎರಡು ತಂಡಗಳ ನಡುವಿನ ಸ್ಫರ್ಧೆ ಚಿತ್ರದ ಹೈಲೈಟ್ಸ್.   ಪ್ರತೀಕಾರ, ಆಕ್ಷನ್ ಮತ್ತು ಹಾಸ್ಯದ ಮಿಶ್ರಣ ಇಲ್ಲಿದೆ.  ಚಿತ್ರದ ಪ್ರಮುಖ ಪಾತ್ರದಾರಿಗಳಿಗೆ ಎರಡು ವರ್ಷ ತರಬೇತಿ ನೀಡಲಾಗಿದೆ. ಈ ಚಿತ್ರದಲ್ಲಿ ಯಾವುದೇ ಡ್ಯೂಪ್  ಬಳಸಿಲ್ಲ.

ಮಡ್ ರೇಸ್ ನ್ನು ಎಲ್ಲಾ ರೋಚಕತೆಯೊಂದಿಗೆ ಪ್ರೇಕ್ಷಕರಿಗೆ ಪ್ರಸ್ತುತಪಡಿಸುವುದು ನಿರ್ದೇಶಕರ ದೊಡ್ಡ ಸವಾಲಾಗಿತ್ತು. ಚಿತ್ರದ ಚಿತ್ರೀಕರಣಕ್ಕೆ ಸ್ಥಳವನ್ನು ಆಯ್ಕೆ ಮಾಡಲು ಒಂದು ವರ್ಷ ಬೇಕಾಯಿತು ಎಂದು ಚಿತ್ರತಂಡ ಹೇಳುತ್ತದೆ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶಕರಾಗಿದ್ದು, ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರವೊಂದರಲ್ಲಿ ತೊಡಗಿಸಿಕೊಂಡಿದ್ದಾರೆ. ರತ್ಸಾಸನ್ ಖ್ಯಾತಿಯ ಸ್ಯಾನ್ ಲೋಕೇಶ್  ಎಡಿಟಿಂಗ್ ಜವಾಭ್ದಾರಿ ನಿರ್ವಹಿಸಿದ್ದಾರೆ. ಸಿನಿಮಾಟೋಗ್ರಾಫರ್ ಆಗಿ ಕೆ.ಜಿ.ರತೀಶ್ ಸಾಹಸ ಮಾಡಿದ್ದಾರೆ.

ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಲನಚಿತ್ರ ಕಲಾವಿದರು ವಿಜಯ್ ಸೇತುಪತಿ ಮತ್ತು ಶ್ರೀ ಮುರಳಿ  ಬಿಡುಗಡೆ ಮಾಡಿದ್ದರು. ಬಾಲಿವುಡ್ ತಾರೆ ಅರ್ಜುನ್ ಕಪೂರ್ ಹಿಂದಿ ಟೀಸರ್ ಬಿಡುಗಡೆ ಮಾಡಿದ್ದಾರೆ, ಅಂತೆ  ಜಯಂ ರವಿ ತಮಿಳು ಟೀಸರ್, ಕನ್ನಡದಲ್ಲಿ  ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮತ್ತು ತೆಲುಗಿನಲ್ಲಿ ಅನಿಲ್ ರವಿಪುಡಿ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ತೆಲುಗು ಟೀಸರ್ ಬಿಡುಗಡೆ ಮಾಡಿದ್ದಾರೆ.