ಸೌತ್ ನಟ ವಿಜಯ್ ಸೇತುಪತಿ ಭಾರತದ ಮೊದಲ ಮಡ್ ರೇಸ್ ಸಿನಿಮಾ ಮಡ್ಡಿಯ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದಾರೆ. ಇದು ಬಹುಭಾಷಾ ಸಿನಿಮಾವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ.

ಇದು ಭಾರತದ ಮೊದಲ ಆಫ್ ರೋಡ್ ಮಡ್ ರೇಸ್ ಸಿನಿಮಾ ಎನ್ನುವುದು ವಿಶೇಷ. ಹೊಸ ನಿರ್ದೇಶಕ ಡಾ. ಪ್ರಗಭಾಲ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಇಲ್ಲಿಯ ತನಕ ವೀಕ್ಷಕರು ನೋಡಿ ಪಡೆಯದ ಅನುಭವವವನ್ನು ತೆರೆಯ ಮೇಲೆ ತರುವ ಸಿದ್ಧತೆಯಲ್ಲಿದ್ದಾರೆ.

ಫೈಝ್ ಎಂದು ಹೆಸರು ಆರಿಸಿದ ಸೈಫ್, ಕರೀನಾ ಮನಸಿನಲ್ಲಿ ಬೇರೆ ಹೆಸರಿತ್ತು

ಕ್ರೀಡೆಯ ಬಗ್ಗೆ ನಿರ್ದೇಶಕ ಅಧ್ಯಯನ ಮಾಡಿದ್ದು, ತಂಡಗಳ ನಡುವಿನ ಪೈಪೋಟಿಯನ್ನೂ ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರತಿಕಾರ, ಕುಟುಂಬ ಕಥೆ, ಹಾಸ್ಯ, ಸಾಹಸ ಎಲ್ಲವೂ ಒಳಗೊಂಡಿದೆ.

ಯುವನ್, ರಿಧಾನ್ ಕೃಷ್ಣ, ಅನುಶಾ ಸುರೇಶ್, ಅಮಿತ್ ಶಿವದಾಸ್ ನಾಯರ್ ಸೇರಿ ಹಲವರು ನಟಿಸಲಿದ್ದಾರೆ. ಕಲಾವಿದರು ಸಿನಿಮಾಗಾಗಿ 1 ವರ್ಷ ತರಬೇತಿಯನ್ನು ಪಡೆದಿದ್ದಾರೆ.