ಕೊರೋನಾ ವ್ಯಾಕ್ಸಿನ್ ಫಸ್ಟ್ ಡೋಸ್ ಪಡೆದ ಮಾಲಿವುಡ್ ನಟ | ಫೋಟೋ ಶೇರ್ ಮಾಡಿಕೊಂಡ ಮೋಹನ್‌ ಲಾಲ್

ಭಾರತದ ನಟರಾದ ಸೈಫ್ ಅಲಿ ಖಾನ್, ಕಮಲ್ ಹಾಸನ್ ಅವರು ಕೊರೋನಾ ವ್ಯಾಕ್ಸಿನ್ ಪಡೆದ ನಂತರ ಇದೀಗ ಸೌತ್ ಸೂಪರ್ಸ್ಟಾರ್ ಮಾಲಿವುಡ್ ನಟ ಮೋಹನ್ ಲಾಲ್ ಅವರೂ ಕೊರೋನಾ ವ್ಯಾಕ್ಸಿನ್ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ಸ್ಟಗ್ರಾಂನಲ್ಲಿ ಫೋಟೋ ಶೇರ್ ಮಾಡಿದ ನಟ ಅಮೃತಾ ಆಸ್ಪತ್ರೆಯಲ್ಲಿ ಕೊರೋನಾ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದಾಗಿ ಪೋಸ್ಟ್ ಹಾಕಿದ್ದಾರೆ.

ಕೊರೋನಾ ಲಸಿಕೆ ಪಡೆದ ಸೈಫ್: ಅರೆ, ಅರುವತ್ತಾಯ್ತಾ ಎಂದ್ರು ನೆಟ್ಟಿಗರು

ಈ ಸಂದರ್ಭದಲ್ಲಿ ನಾನು ಭಾರತ ಸರ್ಕಾರ, ಲಸಿಕೆ ಉತ್ಪಾದನಾ ಕಂಪನಿ, ಕೊರೋನಾ ವ್ಯಾಕ್ಸಿನೇಷನ್ಗೆ ಸಹಕರಿಸುತ್ತಿರುವ ಎಲ್ಲಾ ಆಸ್ಪತ್ರೆಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಬರೆದಿದ್ದಾರೆ.

View post on Instagram

ಇತ್ತೀಚೆಗಷ್ಟೇ ಕಮಲ್ ಹಾಸನ್ ಅವರೂ ತಾವು ವ್ಯಾಕ್ಸಿನ್ ಪಡೆಯುವ ವಿಡಿಯೋವನ್ನು ಶೇರ್ ಮಾಡಿದ್ದರು. ಸೈಫ್ ಅಲಿ ಖಾನ್ ಕೂಡಾ ಇತ್ತೀಚೆಗೆ ವ್ಯಾಕ್ಸಿನೇಷನ್ ಪಡೆದಿದ್ದರು. ನಟಿ ಹೇಮಾ ಮಾಲಿನಿ ಅವರೂ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.